Bhatkal| ಅಕ್ರಮ ಗೋ ಸಾಗಾಟ ಮಾಲು ಸಮೇತ ನಾಲ್ಕು ಜನರ ಬಂಧನ
Bhatkal| ಅಕ್ರಮ ಗೋ ಸಾಗಾಟ ಮಾಲು ಸಮೇತ ನಾಲ್ಕು ಜನರ ಬಂಧನ.
Bhatkal: ಪರವಾನಿಗೆ ಇಲ್ಲದೇ ಹಿಂಸಾತ್ಮಕ ರೀತಿಯಲ್ಲಿ ಎತ್ತುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತೆಂಗಿನಗುಂಡಿ ಕ್ರಾಸ್ ಬಳಿ ನಡೆದಿದೆ.
ಭಟ್ಕಳದ (bhatkal) ಆಜಾದ್ ನಗರದ ಅಪ್ಪಲ್ ,ಹಾವೇರಿ ಮೂಲದ ಶಂಭುಲಿಂಗಯ್ಯ ಹಿರೇಮಠ ,ಸಂತೋಷ ಬೊರಾತ್ ಮತ್ತು ದೇವರಾಜ ಬಂಧಿತರಾಗಿದ್ದು
Bhatkal|ಭಟ್ಕಳ ದೇವಾಲಯದ ಮುಂದೆ ಗೋ ಕಳ್ಳತನ ಆರೋಪಿಗಳ ಬಂಧನ
ಹಾವೇರಿಯ ಮಲ್ಲಿಕಾರ್ಜುನ ಶಿವಪ್ಪ ಕಡ್ಲಿ ಎಂಬುವವರ ಲಾರಿಯಲ್ಲಿ ಸುಮಾರು ₹5 ಲಕ್ಷ ಮೌಲ್ಯದ 10 ಎತ್ತುಗಳನ್ನು ಹತ್ಯೆ ಉದ್ದೇಶಕ್ಕೆ ಸಾಗಿಸಲಾಗುತಿತ್ತು ಎಂದು ತಿಳಿದುಬಂದಿದೆ. ವಾಹನದ ಬಳಿ ಯಾವುದಾದರೂ ಮಾನ್ಯವಾದ ಪರವಾನಿಗೆ, ಪಾಸ್ ಅಥವಾ ದಾಖಲೆಗಳು ಇರದೇ ಇರುವ ಹಿನ್ನೆಲೆಯಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಬೆಳಗ್ಗೆ ಸುಮಾರು 4 ಗಂಟೆ ಹೊತ್ತಿಗೆ ನಡೆದ ದಾಳಿಯಲ್ಲಿ ಪೊಲೀಸರು 10 ಎತ್ತು ಹಾಗೂ ₹15 ಲಕ್ಷ ಮೌಲ್ಯದ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.

ಘಟನೆಯ ಕುರಿತು ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ.

