For the best experience, open
https://m.kannadavani.news
on your mobile browser.
Advertisement

News impact |ಉತ್ತರ ಕನ್ನಡ ಶಾಲೆಗಳಿಗೆ ಸರಬರಾಜಾಗುವ ಆಹಾರ ಪದಾರ್ಥ ಗಳು ಕಳಪೆ ,ಪರೀಕ್ಷೆಯಿಂದ ದೃಢ

Uttara Kannada mid-day meal row: Food lab report confirms contaminated and poor-quality ingredients supplied to government schools in Sirsi, Mundgod and Haliyal. Tests reveal spoiled toor dal and E-coli bacteria in sambar served to students, exposing severe negligence by the education department.
09:40 PM Dec 05, 2025 IST | ಶುಭಸಾಗರ್
Uttara Kannada mid-day meal row: Food lab report confirms contaminated and poor-quality ingredients supplied to government schools in Sirsi, Mundgod and Haliyal. Tests reveal spoiled toor dal and E-coli bacteria in sambar served to students, exposing severe negligence by the education department.
news impact  ಉತ್ತರ ಕನ್ನಡ ಶಾಲೆಗಳಿಗೆ ಸರಬರಾಜಾಗುವ ಆಹಾರ ಪದಾರ್ಥ ಗಳು ಕಳಪೆ  ಪರೀಕ್ಷೆಯಿಂದ ದೃಢ

News impact |ಉತ್ತರ ಕನ್ನಡ ಶಾಲೆಗಳಿಗೆ ಸರಬರಾಜಾಗುವ ಆಹಾರ ಪದಾರ್ಥ ಗಳು ಕಳಪೆ ,ಪರೀಕ್ಷೆಯಿಂದ ದೃಢ

Advertisement

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಶಿರಸಿ (sirsi)ಶೈಕ್ಷಣಿಕ ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಸರಬರಾಜಾಗುವ ಆಹಾರ ಪದಾರ್ಥ ಹಾಗೂ ಬಿಸಿಯೂಟ ವಿಷವಾಗಿರುವುದು ಆರೋಗ್ಯ ಇಲಾಖೆಯ ವರದಿಯಿಂದ ಬಹಿರಂಗವಾಗಿದೆ.

ಈ ಕುರಿತು ಕನ್ನಡವಾಣಿ ವರದಿ ಪ್ರಕಟಿಸಿತ್ತು. ,ಹಳಿಯಾಳ ,ಮುಂಡಗೋಡು ಭಾಗದ ಶಾಲೆಗಳಿಗೆ ಅಕ್ಷರ ದಾಸೋಹದಡಿ ಕಳೆಪೆ ಆಹಾರ ಪದಾರ್ಥ ವಿತರಣೆಯಾಗುವ ಹಾಗೂ ಬಿಸಿಯೂಟದ ಕೊಠಡಿಗಳು ಕೆಳಮಟ್ಟದಿರುವ ಕುರಿತು ಸುದ್ದಿ ಪ್ರಸಾರ ಮಾಡಿತ್ತು.

Mundgod| ಬಿಸಿಊಟ ಸೇವಿಸಿ 22 ವಿದ್ಯಾರ್ಥಿಗಳು ಅಸ್ವಸ್ತ

 ಮುಂಡಗೋಡಿನ ಶಾಸಕರ ಮಾದಿರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಬಿಸಿಯೂಟ ಸವಿದು 44 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದರು.ಸುದ್ದಿ ಪ್ರಕಟವಾದ ಬೆನ್ನಲ್ಲೇ ಆರೋಗ್ಯ ಇಲಾಖೆಯಿಂದ ಮುಂಡಗೋಡಿನ ಶಾಸಕರ ಮಾದರಿ ಶಾಲೆಯ ತೊಗರಿ ಬೇಳೆ ,ಬಿಸಿಯೂಟ ವನ್ನು ಬೆಳಗಾವಿಯ ಡಿವಿಜನ್ ಫುಡ್ ಲ್ಯಾಬರೆಟರಿ ಗೆ ಪರಿಕ್ಷೆಗೆ ಕಳುಹಿಸಲಾಗಿತ್ತು.

ಆರೋಗ್ಯ ಇಲಾಖೆ ವರದಿಯಲ್ಲಿ ಏನಿದೆ?

Haliyala Mid-Day Meal Scam
ಆಹಾರ ಪದಾರ್ಥ ಕಳಪೆ ಆಗುರುವುದು

ಆಹಾರ ಪದಾರ್ಥ ಹಾಗೂ ಬಿಸಿಯೂಟದ ಪರೀಕ್ಷೆ ಫಲಿತಾಂಶ ದಲ್ಲಿ ಆಹಾರ ವಿಷವಾಗಿರುವುದು ಪತ್ತೆಯಾಗಿದೆ.

ಕಳಪೆ ಹಾಗೂ ಹಾಳಾದ ಬೇಳೆ ಹಾಗೂ ಕಲ್ಮಶ ಆಹಾರ ನೀಡಿರುವುದು ಪರೀಕ್ಷೆಯಿಂದ ಬೆಳಕಿಗೆ ಬಂದಿದೆ.

ಮುಂಡಗೋಡಿನ ಶಾಲೆಯ ಬಿಸಿಯೂಟಕ್ಕೆ ವಿತರಣೆಯಾದ ತೊಗರಿ ಬೇಳೆ ಕಳಪೆಯಾಗಿದ್ದು ತಿನ್ನಲು ಯೋಗ್ಯವಲ್ಲ,ಶಾಲೆಯಲ್ಲಿ ನೀಡಿದ ಬಿಸಿಯೂಟದ ಸಾಂಬಾರಿನಲ್ಲಿ E-coli  , ಎಂಟರೋ ಎಂಬ ವಿಷಕಾರಿ ಬ್ಯಾಕ್ಟೀರಿಯಾ ಪತ್ತೆಯಾಗಿದೆ.

ತಿನ್ನಲು ಯೋಗ್ಯವಿಲ್ಲದ ಬಿಸಿಯೂಟ ಎಂದು ಆರೋಗ್ಯ ಇಲಾಖೆ ವರದಿಯಲ್ಲಿ ಉಲ್ಲೇಖಿಸಿದೆ. ವರದಿ ಕುರಿತು ಕನ್ನಡವಾಣಿಗೆ ಯಲ್ಲಾಪುರ ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶಿಕ್ಷಣ ಇಲಾಖೆ ನಿರ್ಲಕ್ಷ.

ಮುಂಡಗೋಡು ,(mundgodu) ಹಳಿಯಾಳ (haliyala)ಭಾಗದಲ್ಲಿ ಬಿಸಿಯೂಟಕ್ಕೆ ಅಕ್ಷರ ದಾಸೋಹ ಮೂಲಕ ಪದಾರ್ಥ ಸರಬರಾಜನ್ನು ಆಹಾರ ಇಲಾಖೆ ಮಾಡುತ್ತಿದೆ.ಹಲವು ಶಾಲೆಗಳಿಗೆ ಕಳಪೆ ಬೇಳೆ ,ಅಕ್ಕಿ ಪೂರೈಕೆ ,ಸ್ವಚ್ಛವಿಲ್ಲದ ಕೊಠಡಿಯಲ್ಲಿ ಬಿಸಿಯೂಟ ತಯಾರಿಸಲಾಗುತಿದ್ದು ಈ ಕುರಿತು ಸಂಬಂಧ ಪಟ್ಟ ಇಲಾಖೆಗೆ ಮಾಹಿತಿ ನೀಡಿದರೂ ಕ್ರಮ ಕೈಗೊಂಡಿರಲಿಲ್ಲ .ಇನ್ನು ಇದೀಗ ಶಿರಸಿ ಶೈಕ್ಷಣಿಕ ಜಿಲ್ಲೆಯ ಡಿ.ಡಿ.ಪಿ.ಐ ದಯಾನಂದ ನಾಯ್ಕ ರವರು ಶಿಕ್ಷರಿಗೆ ಕಾರಣ ಕೇಳಿ ನೋಟೀಸ್ ನೀಡಿದ್ದಾರೆ.

https://m.kannadavani.news/article/haliyala-school-mid-day-meal-rotten-food-protest/29873

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ