For the best experience, open
https://m.kannadavani.news
on your mobile browser.
Advertisement

Karnataka| ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹೋಟ್ ಅವರ ಮೊಮ್ಮಗನಮೇಲೆ ಪತ್ನಿಯಿಂದ ಪೊಲೀಸರಿಗೆ ದೂರು 

Karnataka Governor Thawar Chand Gehlot’s grandson, Devendra Gehlot, on allegations of dowry harassment, physical and mental abuse, attempted murder, and the abduction of his four-year-old daughter
04:08 PM Dec 04, 2025 IST | ಶುಭಸಾಗರ್
Karnataka Governor Thawar Chand Gehlot’s grandson, Devendra Gehlot, on allegations of dowry harassment, physical and mental abuse, attempted murder, and the abduction of his four-year-old daughter
karnataka  ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹೋಟ್ ಅವರ ಮೊಮ್ಮಗನಮೇಲೆ ಪತ್ನಿಯಿಂದ ಪೊಲೀಸರಿಗೆ ದೂರು 

Karnataka| ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹೋಟ್ ಅವರ ಮೊಮ್ಮಗನಮೇಲೆ ಪತ್ನಿಯಿಂದ ಪೊಲೀಸರಿಗೆ ದೂರು

Advertisement

ಮಧ್ಯಪ್ರದೇಶ್/ಭೂಪಾಲ್ : ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹೋಟ್ ಅವರ ಮೊಮ್ಮಗನ ವಿರುದ್ಧ ವರದಕ್ಷಿಣೆ ವರದಕ್ಷಿಣೆ ಕಿರುಕುಳ ಆರೋಪ ಬಂದಿದ್ದು ದೂರು ಸಹ ದಾಖಲಾಗಿದೆ.

ಥಾವರ್‌ಚಂದ್ ಗೆಹೋಟ್ ರವರ ಮೊಮ್ಮಗ ದೇವೇಂದ್ರ ಗೆಹೋಟ್ ಅವರ ಪತ್ನಿ ದಿವ್ಯಾಗೆಹೋಟ್, ಪತಿ ವಿರುದ್ಧ ವರದಕ್ಷಿಣೆ ಕಿರುಕುಳ, ದೈಹಿಕ-ಮಾನಸಿಕ ಹಿಂಸೆ, ಕೊಲೆ ಯತ್ನ ಹಾಗೂ ನಾಲ್ಕು ವರ್ಷದ ಮಗಳ ಅಪಹರಣದ ಗಂಭೀರ ಆರೋಪಗಳನ್ನು ಹೊರಿಸಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ.

ಏನಿದು ಆರೋಪ.

ರಾಜ್ಯಪಾಲರ ಮೊಮ್ಮಗ ,ಪತ್ನಿ

ದಿವ್ಯಾ ಅವರು ರತ್ನಂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಕುಮಾ‌ರ್ ಅವರಿಗೆ ಸಲ್ಲಿಸಿರುವ ದೂರಿನಲ್ಲಿ, ತಮ್ಮ ಮಗಳನ್ನು ಉಜ್ಜಯಿನಿ ಜಿಲ್ಲೆಯ ನಾಗ್ದಾದಲ್ಲಿ ಅತ್ತೆ-ಮಾವ ಬಲವಂತವಾಗಿ ಇರಿಸಿಕೊಂಡಿದ್ದಾರೆಂದು ಆರೋಪಿಸಿದ್ದಾರೆ. ಮಗುವನ್ನು ಸಹ ಸುರಕ್ಷಿತವಾಗಿ ಮರಳಿ ಪಡೆಯಲು ಕ್ರಮಕೈಗೊಳ್ಳಬೇಕು ಎಂದು ಅವರು ಮನವಿರೂಪದ ದೂರು ನೀಡಿದ್ದಾರೆ.

ವರ್ಷಗಳಿಂದ ಮುಂದುವರಿದ ವರದಕ್ಷಿಣೆ ಒತ್ತಡ|ದೂರಿನಲ್ಲಿ ಏನಿದೆ?

ದಿವ್ಯಾ ದೂರಿನಲ್ಲಿ ಪತಿ ದೇವೇಂದ್ರ ಗೆಹೋಟ್ (33), ಮಾವ ಅಲೋಟ್‌ನ ಮಾಜಿ ಶಾಸಕ ಜಿತೇಂದ್ರ ಗೆಹೋಟ್ (55), ಸೋದರ ಮಾವ ವಿಶಾಲ್ ಗೆಹೋಟ್ (25), ಅಜ್ಜಿ ಅನಿತಾ ಗೆಹೋಟ್ (60) ಇವರು 50 ಲಕ್ಷ ರೂ. ವರದಕ್ಷಿಣೆಗೆ ಒತ್ತಾಯಿಸಿ ಹಲವು ವರ್ಷಗಳಿಂದ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ. ಮದುವೆಗೆ ಮುನ್ನ ಪತಿಯ ಮದ್ಯಪಾನ, ಮಾದಕ ವ್ಯಸನ ಹಾಗೂ ಅಕ್ರಮ ಸಂಬಂಧಗಳ ವಿಚಾರವನ್ನು ಮುಚ್ಚಿಡಲಾಗಿತ್ತು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

Karnataka| ಬ್ರೇಕ್ ಫಾಸ್ಟ್ ಮೀಟಿಂಗ್ ನಲ್ಲಿ ಜೋಡೆತ್ತುಗಳು ಕಟ್ಟಿಕೊಂಡ ವಾಚಿನದ್ದೇ ಸದ್ದು| ಎಷ್ಟು ದುಬಾರಿ ಗೊತ್ತ ಈ ವಾಚ್!

2018ರ ಏಪ್ರಿಲ್ 29ರಂದು ತಾಲ್ (ಅಲೋಟ್) ನಲ್ಲಿ ಮುಖ್ಯಮಂತ್ರಿ ಕನ್ಯಾದಾನ ಯೋಜನೆಯಡಿ ಇವರ ವಿವಾಹ ನಡೆದಿತ್ತು. ಆಗಿನ ಕೇಂದ್ರ ಸಚಿವೆ ಹಾಗೂ ಲೋಕಸಭೆಯ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಮದುವೆಯ ನಂತರ ಪತಿಯ ವ್ಯಸನ, ಅಸಭ್ಯ ವರ್ತನೆ ಮತ್ತು ದೈಹಿಕ ಹಿಂಸೆ ನಿತ್ಯವೂ ನಡೆಯುತ್ತಿತ್ತು ,ಹಣ ತರದಿದ್ದರೆ ನಿಂದನೆ, ಹಲ್ಲೆ ಎಲ್ಲವು ಸಹಜವಾಗಿಬಿಟ್ಟಿತ್ತು ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.

ದಿವ್ಯಾ ಅವರು ಗರ್ಭಿಣಿಯಾಗಿದ್ದಾಗ 2021ರಲ್ಲಿ ಹಿಂಸೆ ಮತ್ತಷ್ಟು ತೀವ್ರಗೊಂಡಿತ್ತೆಂದು ಅವರು ಹೇಳಿದ್ದಾರೆ. ಆಹಾರವನ್ನೂ ನೀಡದೆ ಮಾನಸಿಕವಾಗಿ ಹಿಂಸೆ ನೀಡಲಾಗುತ್ತಿತ್ತು. ಮಗು ಜನಿಸಿದ ಬಳಿಕವೂ ಪರಿಸ್ಥಿತಿ ಹಾಗೆಯೇ ಮುಂದುವರಿದಿತ್ತು ಹಿಂಸೆ ನೀಡಲಾಗುತಿತ್ತು ಎಂದು ಅವರು ದೂರಿನಲ್ಲಿ ವಿವರಿಸಿದ್ದಾರೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ