Karwar :ಕಾಳಿ ಸೇತುವೆ ಬಳಿ ಕಳಚಿದ ಪಿಲ್ಲರ್ ! ಅಧಿಕಾರಿಗಳು ಹೇಳಿದ್ದಿಷ್ಟು!?
ಕಾಳಿ ಸೇತುವೆ ಬಳಿ ಕಳಚಿದ ಪಿಲ್ಲರ್ ! ಅಧಿಕಾರಿಗಳು ಹೇಳಿದ್ದಿಷ್ಟು!?

ಕಾರವಾರ :- ಮುರಿದು ಬಿದ್ದ ಸೇತುವೆ ಅವಶೇಷಗಳನ್ನು ತೆರವು ಮಾಡುವ ವೇಳೆ ಸೇತುವೆ ಅವಶೇಷದ ಪಿಲ್ಲರ್ ಮುರಿದು ಮೇಲ್ಭಾಗಕ್ಕೆ ಸೇತುವೆ ಸ್ಲಾಬ್ ಎದ್ದುನಿಂತ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ರಾಷ್ಟ್ರೀಯ ಹೆದ್ದಾರಿ 66 ರ ಕಾಳಿ ಸೇತುವೆ ಬಳಿ ನಡೆದಿದೆ.
2024 ರ ಆಗಷ್ಟ್ 7 ರಂದು ಹಳೆಯ ಕಾಳಿ ಬ್ರಿಡ್ಜ್ ಮುರಿದು ಬಿದ್ದಿದ್ದಿತ್ತು. ಈ ಹಿನ್ನಲೆಯಲ್ಲಿ ಹೊಸ ಸೇತುವೆ ನಿರ್ಮಿಸಲು IRB ಕಂಪನಿ ಹಳೆಯ ಸೇತುವೆಯ ಪಿಲ್ಲರ್ ಮೇಲೆಯೇ ಕಾಮಗಾರಿ ಪ್ರಾರಂಭಿಸಿತ್ತು. ಇನ್ನು ಮುರಿದ ಅವಶೇಷಗಳನ್ನು ತೆರವು ಮಾಡುವ ವೇಳೆ ಪಿಲ್ಲರ್ ಸಹಿತ ಸ್ಲಾಬ್ ನ ಮೇಲ್ಭಾಗ ಎದ್ದು ನಿಂತಿದ್ದು ಪಕ್ಕದಲ್ಲೇ ಇರುವ ಹೊಸ ಸೇತುವೆ ಬಳಿಯೇ ವಾಲಿ ನಿಂತಿದೆ.
ಇದನ್ನೂ ಓದಿ:-Karwar| ಕಾಳಿ ಸೇತುವೆ ದೃಢತೆ ಪ್ರಮಾಣ ಪತ್ರ ನೀಡಲು NHAI ಹಿಂದೇಟು? ವರದಿಯಲ್ಲೇನಿದೆ ?
ಇದರಿಂದ ಹೊಸ ಸೇತುವೆಗೆ ಹಾನಿಯಾಗುವ ಆತಂಕ ಎದುರಾಗಿದ್ದು ,ಹೊಸ ಸೇತುವೆ ಮೇಲೆ ಬಿದ್ದರೇ ಎಂಬುವ ಆತಂಕ ವ್ಯಕ್ತವಾಗಿದೆ.

ಅಧಿಕಾರಿಗಳು ಏನಂದ್ರು ?
ಇನ್ನು ಸೇತುವೆ ಅವಶೇಷಗಳು ಹೊಸ ಬ್ರಿಡ್ಜ್ ಬಳಿ ವಾಲಿರುವ ಕುರಿತು ಇದರ ಉಸ್ತುವಾರಿ ನೋಡುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯಾಧಿಕಾರಿ ಶಿವಕುಮಾರ್ ರವರು ಈ ಬಗ್ಗೆ ಮಾಹಿತಿ ನೀಡಿದ್ದು , ಸೇತುವೆಯ ಅವಶೇಷಗಳನ್ನು ತೆಗೆಯುತಿರುವಾಗ ಹೀಗೆ ವಾಲಿದೆ.
ಇದನ್ನೂ ಓದಿ:-Uttrakannda| ಕಾಳಿ ಸೇತುವೆ ಸುರಕ್ಷಿತ: ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ.
ಹೀಗೆ ವಾಲುವ ಸಾಧ್ಯತೆ ಬಗ್ಗೆ ನಮಗೆ ಸಂಶಯವಿತ್ತು ,ಹಾಗಾಗಿಯೇ ವೈಜ್ಞಾನಿಕವಾಗಿ ಇದರ ಅಳತೆ ಪಡೆದು ತೆರವುಕಾರ್ಯ ಮಾಡಿದ್ದೇವೆ. ವಾಲಿರುವ ಬಗ್ಗೆ ಆತಂಕ ಬೇಡ.
ಈ ತುಂಡನ್ನು ಹಂತ ಹಂತವಾಗಿ ತೆಗೆಯುತ್ತೇವೆ. ಈ ಬಗ್ಗೆ ತಜ್ಞರು ಸಹ ಇದ್ದಾರೆ. ಹೊಸ ಸೇತುವೆಗೆ ಯಾವುದೇ ಅಪಾಯವಿಲ್ಲ ಎಂದು ತಿಳಿಸಿದ್ದಾರೆ.