Actor Darshan ಗೆ ಐಟಿಸಂಕಷ್ಟ- ಜೈಲಲ್ಲೇ ನಡೆಯಲಿದೆ ವಿಚಾರಣೆ!
Bellary New:-ಕೊಲೆ ಪ್ರಕರಣದಲ್ಲಿ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿರುವ ಆರೋಪಿ ದರ್ಶನ್ (Darshan) ಇಂದು ಐಟಿ ವಿಚಾರಣೆ ಎದುರಿಸಲಿದ್ದಾರೆ.
ರೇಣುಕಾಸ್ವಾಮಿ (Renukaswami)ಕೊಲೆ ಪ್ರಕರಣದ ಸಾಕ್ಷಿ ನಾಶ ಹಾಗೂ ಬೇರೊಬ್ಬರನ್ನ ಈ ಪ್ರಕರಣದಲ್ಲಿ ಆರೋಪಿಯನ್ನಾಗಿಸುವ ಸಲುವಾಗಿ ಲಕ್ಷ ಲಕ್ಷ ಡೀಲ್ ಮಾಡಿದ್ದ ಪ್ರಕರಣವೇ ಇದೀಗ ದರ್ಶನ್ ಗೆ ಸಂಕಷ್ಟ ತಂದೊಡ್ಡಿದೆ.
ಇದನ್ನೂ ಓದಿ:- ನೀರಿಗಿಳಿದ ತುಪ್ಪದ ಬೆಡಗಿ ರಾಗಿಣಿ|ಮೈಮಾಟಕ್ಕೆ ಪಡ್ಡೆಗಳು ಫಿದಾ.
ರೇಣುಕಾಸ್ವಾಮಿ ಕೊಲೆಯ ನಂತರದ ಬೆಳವಣಿಗೆಯಲ್ಲಿ ನಡೆದಿದ್ದ ಹಣದ ವಹಿವಾಟಿನ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಲು ಇದೀಗ ಐಟಿ ಅಧಿಕಾರಿಗಳು( income tax officer) ತನಿಖೆಗೆ ಮುಂದಾಗಿದ್ದಾರೆ.
ಇಂದು ಮತ್ತು ನಾಳೆ ಬಳ್ಳಾರಿ ಜೈಲಿಗೆ ಐಟಿ ಅಧಿಕಾರಿಗಳು ಬಂದು ಆರೋಪಿ ದರ್ಶನ್ ವಿಚಾರಣೆ ನಡೆಸಲಿದ್ದಾರೆ.
ಈಗಾಗಲೇ ಆರೋಪಿ ದರ್ಶನ್ ವಿಚಾರಣೆಗೆ ಕೋರ್ಟ್ ಕೂಡಾ ಅದೇಶ ಕೊಟ್ಟಿದೆ. ಹೀಗಾಗಿ ಐಟಿ ಅಧಿಕಾರಿಗಳಿಗೆ ಸಹಕಾರ ನೀಡುವಂತೆ ಕೋರ್ಟ್ ನಿಂದ ಬಳ್ಳಾರಿ ಜೈಲಿಗೆ ಮೇಲ್ ಕಳುಹಿಸಲಾಗಿದೆ.
ಹಣ ಕೊಟ್ಟು ಕೊಲೆ ಆರೋಪವನ್ನು ಮತ್ತೊಬ್ಬರ ಮೇಲೆ ಹೊರಿಸಲು ಪ್ಲಾನ್ ಮಾಡಲಾಗಿತ್ತು ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.
ಈ ಕಾರಣ ಅಷ್ಟೊಂದು ಹಣ ಎಲ್ಲಿಂದ ಬಂತು?. ಹೇಗೆಲ್ಲ ಹಣ ವರ್ಗಾವಣೆ ಮಾಡಲಾಗಿದೆ ಎನ್ನುವ ನಿಟ್ಟಿನಲ್ಲಿ ಐಟಿ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ.
ಕೊಲೆ ಪ್ರಕರಣದಲ್ಲಿ ಈಗಾಗಲೇ ಮೂರು ಆರೋಪಿಗಳಿಗೆ ಜಾಮೀನು ಸಿಕ್ಕಿದ್ರಿಂದ ತನಗೂ ಆದಷ್ಟು ಬೇಗ ಜಾಮೀನು ಸಿಗುತ್ತೆ ಅನ್ನೋ ವಿಶ್ವಾಸದಲ್ಲಿ ಆರೋಪಿ ದರ್ಶನ್ ಇದ್ರು. ಆದ್ರೆ ಇದೀಗ ಸಾಕ್ಷಿ ನಾಶಕ್ಕೆ ಲಕ್ಷ ಲಕ್ಷ ಹಣ ಬಳಕೆಯಾಗಿರುವ ಬಗ್ಗೆ ಐಟಿ ಅಧಿಕಾರಿಗಳು ತನಿಖೆ ಮಾಡುತ್ತಿದೆ.