ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

USA ದಲ್ಲಿ ಸರ್ಜರಿ ನಂತರ ಡಿಸ್ಚಾರ್ಜ್‌ ಆದ ನಟ ಶಿವಣ್ಣ

ಕ್ಯಾನ್ಸರ್‌ನಿಂದ (Cancer) ಬಳಲುತ್ತಿದ್ದ ನಟ ಶಿವರಾಜ್‌ ಕುಮಾರ್‌ (Shiva Rajkumar) ಅವರು ಅಮೆರಿಕದಲ್ಲಿ ಸರ್ಜರಿ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದು ಜನವರಿ 24 ರ ಬಳಿಕ ಬೆಂಗಳೂರಿಗೆ ಆಗಮಿಸಲಿದ್ದಾರೆ
02:15 PM Jan 04, 2025 IST | ಶುಭಸಾಗರ್
Actor Shivanna discharged after surgery in the USA.

ಕ್ಯಾನ್ಸರ್‌ನಿಂದ (Cancer) ಬಳಲುತ್ತಿದ್ದ ನಟ ಶಿವರಾಜ್‌ ಕುಮಾರ್‌ (Shiva Rajkumar) ಅವರು ಅಮೆರಿಕದಲ್ಲಿ ಸರ್ಜರಿ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದು ಜನವರಿ 24 ರ ಬಳಿಕ ಬೆಂಗಳೂರಿಗೆ ಆಗಮಿಸಲಿದ್ದಾರೆ.

Advertisement

ನಟ ಶಿವರಾಜ್ ಕುಮಾರ್ ಗೆ ಅಮೆರಿಕಾದ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್‌ನಲ್ಲಿ ಕ್ಯಾನ್ಸರ್ ಗೆ ಸರ್ಜರಿ ನಡೆದಿತ್ತು. ಸರ್ಜರಿ ಯಶಸ್ವಿ ನಂತರ ಶಿವಣ್ಣ ಡಿಸ್ಚಾರ್ಜ್ ಆಗಿದ್ದಾರೆ.

ಇನ್ನು ಎರಡು ಚೆಕಪ್ ಬಾಕಿ ಇದ್ದು, ನಂತರ ಸಂಪೂರ್ಣ ಗುಣಮುಖರಾಗಿ ಜ.24ರ ಬಳಿಕ ಬೆಂಗಳೂರಿಗೆ ವಾಪಸಾಗಲಿದ್ದಾರೆ ಎಂದು ಕುಟುಂಬ ಮೂಲದಿಂದ ತಿಳಿದು ಬಂದಿದೆ.

ಇದನ್ನೂ ಓದಿ:-Bollywood Actor ಸೋನಾಕ್ಷಿ, ಜಹೀರ್ ದಂಪತಿ ಫೋಟೋ ಪೋಸ್ ! ಹೇಗಿದೆ ಗೊತ್ತಾ?

Advertisement

ಶಸ್ತ್ರಚಿಕಿತ್ಸೆ ಬಳಿಕ ಶಿವಣ್ಣ ಕೆಲ ದಿನಗಳ ಹಿಂದಷ್ಟೇ ಅಭಿಮಾನಿಗಳಿಗೆ ವೀಡಿಯೋ ಸಂದೇಶ ಕಳುಹಿಸಿದ್ದರು. ಕ್ಯಾನ್ಸರ್‌ನಿಂದ ಗುಣಮುಖರಾಗಿರುವ ಬಗ್ಗೆ ಸಂತಸ ಹಂಚಿಕೊಂಡಿದ್ದರು. ಶೀಘ್ರವೇ ಬೆಂಗಳೂರಿಗೆ ವಾಪಸ್‌ ಆಗಿ ಸಿನಿಮಾ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುವುದಾಗಿ ವಿಡಿಯೋ ದಲ್ಲಿ ತಿಳಿಸಿದ್ದರು.

Courtesy:ANI

ತನಗೆ ಚಿಕಿತ್ಸೆ ನೀಡಿದ ವೈದ್ಯರು, ಈ ವೇಳೆ ಜೊತೆಗೆ ನಿಂತು ಧೈರ್ಯ ತುಂಬಿದ ಆಪ್ತರು ಮತ್ತು ತನಗಾಗಿ ಪ್ರಾರ್ಥಿಸಿದ ಸಮಸ್ತ ಅಭಿಮಾನಿಗಳಿಗೂ ಶಿವಣ್ಣ ಕೃತಜ್ಞತೆ ಸಲ್ಲಿಸಿದ್ದರು.

2024 ರ ಏಪ್ರಿಲ್ ನಲ್ಲಿ ಅನಾರೋಗ್ಯದ ಕಾರಣ 61 ವರ್ಷದ ಶಿವರಾಜ್ ಕುಮಾರ್ ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ದಾಖಲಾಗಿದ್ದರು.

ಅಂದು ಅವರ ಕುಟುಂಬ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿತ್ತು. ನಂತರ ಅವರಿಗೆ ಆರೋಗ್ಯ ಸಮಸ್ಯೆ ಇರುವ ಕುರಿತು ಮಾಧ್ಯಮದಲ್ಲಿ ಸುದ್ದಿ ಬಿತ್ತರವಾಗಿತ್ತು.

ಇದರ ಬೆನ್ನಲ್ಲೇ ಚಿಕಿತ್ಸೆಗಾಗಿ ಅಮೇರಿಕಾ ತೆರಳುವ ಕುರಿತು ಕುಟುಂಬ ಮೂಲಗಳು ತಿಳಿಸಿತ್ತು. ಇದಾದ ಕೆಲವು ದಿನದಲ್ಲೇ ತಿರುಪತಿಗೆ ತೆರಳಿ ಶಿವಣ್ಣ ಜೋಡಿ ದೇವರಿಗೆ ಮುಡಿ ಕೊಟ್ಟಿದ್ದರು.

ನಂತರ ತಮ್ಮ ಅಭಿಮಾನಿಗಳಿಗೆ ಭಾವುಕ ಫೋಸ್ಟ್ ಹಾಕಿದ್ದರು.

Advertisement
Tags :
Actor Shivannadischarged after surgeryHealthUpdateKannadaActorKarnatakaNewsSandalwoodShivanna SurgeryUSA
Advertisement
Next Article
Advertisement