For the best experience, open
https://m.kannadavani.news
on your mobile browser.
Advertisement

US Election Result: ಡೊನಾಲ್ಡ್‌ ಟ್ರಂಪ್ ಗೆಲವು

ವಾಷಿಂಗ್ಟನ್: ಇಡೀ ವಿಶ್ವವೇ ಭಾರೀ ಕುತೂಹಲದಿಂದ ಕಾಯುತ್ತಿದ್ದ ಬಹುನಿರೀಕ್ಷಿತ 2024ರ ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಹೊರಬಿದ್ದಿದೆ.
02:49 PM Nov 06, 2024 IST | ಶುಭಸಾಗರ್
us election result  ಡೊನಾಲ್ಡ್‌ ಟ್ರಂಪ್ ಗೆಲವು

ವಾಷಿಂಗ್ಟನ್: ಇಡೀ ವಿಶ್ವವೇ ಭಾರೀ ಕುತೂಹಲದಿಂದ ಕಾಯುತ್ತಿದ್ದ ಬಹುನಿರೀಕ್ಷಿತ 2024ರ ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಹೊರಬಿದ್ದಿದೆ.

Advertisement

ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್ ಅವರು ಬರೋಬ್ಬರಿ 270ಕ್ಕೂ ಮತಗಳು ಪಡೆಯುವ ಮೂಲಕ ಗೆಲವು ಕಂಡಿದ್ದಾರೆ.ಈ ಮೂಲಕ ಅಮೆರಿಕಾದ 47ನೇ ಅಧ್ಯಕ್ಷರಾಗಿ ಟ್ರಂಪ್​​​ ಆಯ್ಕೆಯಾಗಿದ್ದಾರೆ.

ಡೊನಾಲ್ಡ್​ ಟ್ರಂಪ್​​ 2ನೇ ಬಾರಿಗೆ ಅಧಿಕಾರಕ್ಕೆ ಬಂದಿದ್ದಾರೆ. ಇನ್ನೂ ಮುಂದಿನ 4 ವರ್ಷಗಳ ಕಾಲ ಅಮೆರಿಕಾ ಅಧ್ಯಕ್ಷರಾಗಲಿದ್ದಾರೆ.

ಇದನ್ನೂ ಓದಿ:-Karnataka : ಯಕ್ಷಗಾನ ಕಲಾವಿದ ಕೇಶವ ಹೆಗಡೆಗೆ ರಾಜ್ಯೋತ್ಸವ ಪ್ರಶಸ್ತಿ| ಯಾವ ಕ್ಷೇತ್ರಕ್ಕೆ ಯಾರ್ಯಾರಿಗೆ ಘೋಷಣೆ ವಿವರ ನೋಡಿ.

ಇನ್ನು ಭಾರತದ ಪ್ರಧಾನಿ ತನ್ನ ಆತ್ಮೀಯ ಗೆಳೆಯ
ಡೊನಾಲ್ಡ್‌ ಟ್ರಂಪ್ ಅವರಿಗೆ ಎಕ್ಸ್ ನಲ್ಲಿ ಟ್ವೀಟ್ ಮಾಡುವ ಮೂಲಕ ಶುಭ ಕೋರಿದ್ದಾರೆ.

ಟ್ರಂಪ್ ಗೆಲವು ಭಾರತದ ಷೇರುಮಾರುಕಟ್ಟೆ ( share market) ಮೇಲು ಪರಿಣಾಮ ಬೀರಲಿದ್ದು ಷೇರು ದರ ಸಹ ಜಿಗಿತ ಕಾಣುತ್ತಿದೆ.

ಈಗಾಗಲೇ ಗೆಲುವಿನ ನಂತರ ತಮ್ಮ ಭಾಷಣದಲ್ಲಿ
ದೇಶವನ್ನು ಸುಭದ್ರಗೊಳಿಸಲು ಬೇಕಾದ ಎಲ್ಲವನ್ನೂ ಮಾಡುತ್ತೇನೆ ಎಂದು ಹೇಳಿದ್ದಾರೆ. ಮೇಕ್ ಅಮೆರಿಕ ಗ್ರೇಟ್ ಅಗೇನ್ ಎಂಬ ಘೋಷಣೆಯನ್ನು ಪುನರುಚ್ಚರಿಸಿದ ಡೊನಾಲ್ಡ್ ಟ್ರಂಪ್, ನಾನು ಪ್ರತಿ ಕ್ಷಣವೂ ಅಮೆರಿಕಕ್ಕಾಗಿ ದುಡಿಯುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:-Belagavi :ಬೆಳಗಾವಿಗೆ ಅಮೇರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ!

ಇನ್ನು ಡೊನಾಲ್ಡ್ ಟ್ರಂಪ್ ಅವರು ತಮ್ಮ ಭಾಷಣದಲ್ಲಿ ಉದ್ಯಮಿ ಎಲಾನ್ ಮಸ್ಕ್ ಹೆಸರನ್ನೂ ಪ್ರಸ್ತಾಪಿಸಿದ್ದಾರೆ. ತಮ್ಮ ಬೆಂಬಲಕ್ಕೆ ಧನ್ಯವಾದ ತಿಳಿಸಿದ್ದಾರೆ. ಎಲಾನ್ ಮಸ್ಕ್ ಅವರು ಚುನಾವಣೆಯಲ್ಲಿ ಟ್ರಂಪ್ ಅವರನ್ನು ಉತ್ಸಾಹದಿಂದ ಬೆಂಬಲಿಸಿದ್ದಾರೆ ಮತ್ತು ಹಣವನ್ನು ಸಹ ಒದಗಿಸಿದ್ದಾರೆ ಎಂದರು.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ