Ankola| ಮಂಗಳವಾರ ಅಂಕೋಲ ಬಂದ್ | ಮದ್ಯ ಮಾರಾಟಕ್ಕೆ ನಿರ್ಬಂಧ
Ankola| ಮಂಗಳವಾರ ಅಂಕೋಲ ಬಂದ್ | ಮದ್ಯ ಮಾರಾಟಕ್ಕೆ ನಿರ್ಬಂಧ
Ankola:-ಕೇಣಿ ವಾಣಿಜ್ಯ ಬಂದರು ನಿರ್ಮಾಣ ವಿರೋಧಿಸಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲ(ankola) ದಲ್ಲಿ ನ.25 ರಂದು ಅಂಕೋಲ ಬಂದ್ ಗೆ ಕೇಣಿ ವಾಣಿಜ್ಯ ಬಂದರು ವಿರೋಧಿ ಹೋರಾಟ ಸಮಿತಿ ಕರೆ ಕೊಟ್ಟಿದೆ.
ಕೇಣಿ ವಾಣಿಜ್ಯ ಬಂದರುನ್ನು ವಿರೋಧಿಸಿ ನ.25 ಕ್ಕೆ ಒಂದು ವರ್ಷ ಪೂರೈಸುತ್ತದೆ. ಮೀನುಗಾರರು ಸೇರಿದಂತೆ ಅಂಕೋಲದ ಜನತೆ ಕೇಣಿ ಖಾಸಗಿ ಬಂದರು ವಿರೋಧಿಸುತ್ತಾ ಬಂದಿದ್ದಾರೆ. ಇದಲ್ಲದೇ ನಿರಂತರ ಹೋರಾಟ ಮಾಡುತ್ತಾ ಬಂದಿದ್ದು ಇದೀಗ ಒಂದು ವರ್ಷಗಳು ಕಳೆಯುತ್ತಿದೆ.
Ankola | ಮಗು ಕೊಡಿಸುವುದಾಗಿ ನಾಲ್ಕು ಲಕ್ಷ ವಂಚನೆ | ಅಂಕೋಲದಲ್ಲಿ ಐವರ ವಿರುದ್ಧ ಪ್ರಕರಣ ದಾಖಲು
ಆದರೂ ಉದ್ದೇಶಿತ ವಾಣಿಜ್ಯ ಬಂದರು ನಿರ್ಮಾಣಕ್ಕೆ ಜೆ.ಎಸ್.ಡಬ್ಲು ಕಂಪನಿ (jsw) ನಿರಂತರ ಪ್ರಯತ್ನದಲ್ಲಿದೆ. ಹೀಗಾಗಿ ಈ ಬಾರಿ ಕೇಣಿ ವಾಣಿಜ್ಯ ಬಂದರು ವಿರೋಧಿ ಹೋರಾಟ ಸಮಿತಿ ಬಂದ್ ಗೆ ಕರೆ ಕೊಟ್ಟಿದ್ದು ಇದಕ್ಕೆ ಬೆಂಬಲವಾಗಿ ವ್ಯಾಪಾರಸ್ತರು,ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ. ಈ ಹಿನ್ನೆಲೆಯಲ್ಲಿ ಈ ಭಾರಿ ಬಂದ್ ನನ್ನು ಯಶಸ್ವಿಗೊಳಿಸುವ ಜೊತೆ ಹೋರಾಟವನ್ನು ಮತ್ತಷ್ಟು ತೀವ್ರ ಗೊಳಿಸಲು ಸಿದ್ದವಾಗಿದ್ದಾರೆ.
ನ.25 ಅಂಕೋಲ ಮದ್ಯ ಮಾರಾಟ ನಿರ್ಬಂಧ
ಇನ್ನು ಬಂದ್ ಕರೆಕೊಟ್ಟ ಬೆನ್ನಲ್ಲೇ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾರವರು ನವಂಬರ್ 25 ರಂದು ಅಂಕೋಲದಾಧ್ಯಾಂತ ಮದ್ಯ ಮಾರಾಟಕ್ಕೆ ನಿರ್ಬಂಧ ವಿಧಿಸಿ ಆದೇಶಿಸಿದ್ದು ಮಂಗಳವಾರ ಅಂಕೋಲದಾಧ್ಯಾಂತ ಮದ್ಯ ಮಾರಾಟ ಸಂಪೂರ್ಣ ನಿಷೇಧ ಇರಲಿದೆ.