Ankola| ಅಲೆಗಳ ಅಬ್ಬರಕ್ಕೆ ದೋಣಿಗೆ ನೀರುತುಂಬಿ ಮುಳುಗಡೆ-ಲಕ್ಷಾಂತರ ಹಾನಿ
Ankola| ಅಲೆಗಳ ಅಬ್ಬರಕ್ಕೆ ದೋಣಿಗೆ ನೀರುತುಂಬಿ ಮುಳುಗಡೆ-ಲಕ್ಷಾಂತರ ಹಾನಿ
ಅಂಕೋಲಾ (october 09);- ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೇಲೆಕೇರಿ (belikeri)ಬಂದರಿನಲ್ಲಿ ಗುರುವಾರ ಅಲೆಗಳ ಅಬ್ಬರಕ್ಕೆ “ಶ್ರೀ ಶಾರದಾಂಬ” ಎಂಬ ಮೀನುಗಾರಿಕಾ ಬೋಟ್ ಮುಳುಗಡೆಯಾಗಿದೆ
ಸ್ಥಳೀಯ ಮೂಲಗಳ ಪ್ರಕಾರ, ಸರಸ್ವತಿ ಅಶೋಕ್ ಬನವಳ್ಕರ್ ಅವರಿಗೆ ಸೇರಿದ ಈ ಪರ್ಷಿಯನ್ ಮೀನುಗಾರಿಕಾ ದೋಣಿ ಬಂದರಿನಲ್ಲಿ ನಿಲುಗಡೆಗೊಂಡಿದ್ದ ವೇಳೆ ನೀರು ತುಂಬಿ ಸಂಪೂರ್ಣವಾಗಿ ಮುಳುಗಿದೆ. ಈ ಅಪಘಾತದಲ್ಲಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ದೋಣಿಯ ಎಂಜಿನ್, ಮೀನುಗಾರಿಕಾ ಬಲೆಗಳು ಮತ್ತು ಇತರ ಸಾಧನಗಳು ಹಾಗೂ ಸರಕುಗಳು ಸಮುದ್ರಪಾಲಾಗಿದೆ.
Ankola| ಪ್ರವಾಸಕ್ಕೆ ಬಂದು ನೀರಿನಲ್ಲಿ ತೇಲಿಹೋದ ಯುವಕನ ಶವ ಪತ್ತೆ
ಘಟನೆಯ ನಂತರ ಪೊಲೀಸರು, ಕರಾವಳಿ ರಕ್ಷಣಾ ಪಡೆಯ ಅಧಿಕಾರಿಗಳು ಮತ್ತು ಮೀನುಗಾರಿಕಾ ಇಲಾಖೆಯ ಪ್ರತಿನಿಧಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಸ್ಥಳೀಯ ಮೀನುಗಾರರು ಬೇಲೆಕೇರಿಯಲ್ಲಿ ಪದೇಪದೇ ಸಂಭವಿಸುತ್ತಿರುವ ಇಂತಹ ಅಪಘಾತಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಂದರಿನಲ್ಲಿ ಸರಿಯಾದ ಬ್ರೇಕ್‌ವಾಟರ್ (ಅಲೆ ತಡೆಗೋಡೆ) ನಿರ್ಮಾಣವಾಗಿಲ್ಲದ ಕಾರಣ ಈ ರೀತಿಯ ದುರಂತಗಳು ಪುನಃ ಪುನಃ ಸಂಭವಿಸುತ್ತಿವೆ. ಬಲವಾದ ಅಲೆಗಳಿಂದ ಬಂದರಿನ ಒಳಗಿನ ದೋಣಿಗಳು ಅಪಾಯಕ್ಕೀಡಾಗುತ್ತಿವೆ ಎಂದು ಆರೋಪಿಸಿದ್ದಾರೆ.
ಈ ರೀತಿಯ ಅವಘಡ ತಪ್ಪಿಸಲು ಶಾಶ್ವತ ತಡೆಗೋಡೆ ನಿರ್ಮಾಣವಾಗಬೇಕು ಎಂದು ಆಗ್ರಹಿಸಿದ್ದಾರೆ.
