ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Ankola| ಅಲೆಗಳ ಅಬ್ಬರಕ್ಕೆ ದೋಣಿಗೆ ನೀರುತುಂಬಿ ಮುಳುಗಡೆ-ಲಕ್ಷಾಂತರ ಹಾನಿ

fishing boat named Shri Sharadamba sank at Belekeri Port in Ankola, Uttara Kannada, after being hit by high waves. Damages worth lakhs reported. Fishermen urge the government to build a breakwater. No casualties have been reported.
03:55 PM Oct 09, 2025 IST | ಶುಭಸಾಗರ್
fishing boat named Shri Sharadamba sank at Belekeri Port in Ankola, Uttara Kannada, after being hit by high waves. Damages worth lakhs reported. Fishermen urge the government to build a breakwater. No casualties have been reported.

Ankola| ಅಲೆಗಳ ಅಬ್ಬರಕ್ಕೆ ದೋಣಿಗೆ ನೀರುತುಂಬಿ ಮುಳುಗಡೆ-ಲಕ್ಷಾಂತರ ಹಾನಿ

Advertisement

ಅಂಕೋಲಾ (october 09);- ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೇಲೆಕೇರಿ (belikeri)ಬಂದರಿನಲ್ಲಿ ಗುರುವಾರ ಅಲೆಗಳ ಅಬ್ಬರಕ್ಕೆ “ಶ್ರೀ ಶಾರದಾಂಬ” ಎಂಬ ಮೀನುಗಾರಿಕಾ ಬೋಟ್ ಮುಳುಗಡೆಯಾಗಿದೆ

Advertisement

ಸ್ಥಳೀಯ ಮೂಲಗಳ ಪ್ರಕಾರ, ಸರಸ್ವತಿ ಅಶೋಕ್ ಬನವಳ್ಕರ್ ಅವರಿಗೆ ಸೇರಿದ ಈ ಪರ್ಷಿಯನ್ ಮೀನುಗಾರಿಕಾ ದೋಣಿ ಬಂದರಿನಲ್ಲಿ ನಿಲುಗಡೆಗೊಂಡಿದ್ದ ವೇಳೆ ನೀರು ತುಂಬಿ ಸಂಪೂರ್ಣವಾಗಿ ಮುಳುಗಿದೆ. ಈ ಅಪಘಾತದಲ್ಲಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ದೋಣಿಯ ಎಂಜಿನ್, ಮೀನುಗಾರಿಕಾ ಬಲೆಗಳು ಮತ್ತು ಇತರ ಸಾಧನಗಳು ಹಾಗೂ ಸರಕುಗಳು ಸಮುದ್ರಪಾಲಾಗಿದೆ.

Ankola| ಪ್ರವಾಸಕ್ಕೆ ಬಂದು ನೀರಿನಲ್ಲಿ ತೇಲಿಹೋದ ಯುವಕನ ಶವ ಪತ್ತೆ

ಘಟನೆಯ ನಂತರ ಪೊಲೀಸರು, ಕರಾವಳಿ ರಕ್ಷಣಾ ಪಡೆಯ ಅಧಿಕಾರಿಗಳು ಮತ್ತು ಮೀನುಗಾರಿಕಾ ಇಲಾಖೆಯ ಪ್ರತಿನಿಧಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಸ್ಥಳೀಯ ಮೀನುಗಾರರು ಬೇಲೆಕೇರಿಯಲ್ಲಿ ಪದೇಪದೇ ಸಂಭವಿಸುತ್ತಿರುವ ಇಂತಹ ಅಪಘಾತಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಂದರಿನಲ್ಲಿ ಸರಿಯಾದ ಬ್ರೇಕ್‌ವಾಟರ್ (ಅಲೆ ತಡೆಗೋಡೆ) ನಿರ್ಮಾಣವಾಗಿಲ್ಲದ ಕಾರಣ ಈ ರೀತಿಯ ದುರಂತಗಳು ಪುನಃ ಪುನಃ ಸಂಭವಿಸುತ್ತಿವೆ. ಬಲವಾದ ಅಲೆಗಳಿಂದ ಬಂದರಿನ ಒಳಗಿನ ದೋಣಿಗಳು ಅಪಾಯಕ್ಕೀಡಾಗುತ್ತಿವೆ ಎಂದು ಆರೋಪಿಸಿದ್ದಾರೆ.

ಈ ರೀತಿಯ ಅವಘಡ ತಪ್ಪಿಸಲು ಶಾಶ್ವತ ತಡೆಗೋಡೆ ನಿರ್ಮಾಣವಾಗಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಕೃತಿ ಮೆಡಿಕಲ್ ,ಕಾರವಾರ.

Advertisement
Tags :
Ankola newsbelikeri portboat sinksBreaking newsKarnatakaNewsUttara Kannada
Advertisement
Next Article
Advertisement