Ankola | ಮಗು ಕೊಡಿಸುವುದಾಗಿ ನಾಲ್ಕು ಲಕ್ಷ ವಂಚನೆ | ಅಂಕೋಲದಲ್ಲಿ ಐವರ ವಿರುದ್ಧ ಪ್ರಕರಣ ದಾಖಲು
Ankola | ಮಗು ಕೊಡಿಸುವುದಾಗಿ ನಾಲ್ಕು ಲಕ್ಷ ವಂಚನೆ | ಅಂಕೋಲದಲ್ಲಿ ಐವರ ವಿರುದ್ಧ ಪ್ರಕರಣ ದಾಖಲು
Ankola news: ಮಗು ಕೊಡಿಸುವುದಾಗಿ ನಂಬಿಸಿ ದಂಪತಿಯೋರ್ವರಿಂದ 4.5 ಲಕ್ಷ ರೂ. ಪಡೆದು ವಂಚಿಸಿದ ಕುರಿತು ಕುಮಟಾ,ಹೊನ್ನಾವರದ ಐದು ಜನರ ಮೇಲೆ ಅಂಕೋಲ (ankola)ಠಾಣೆಯಲ್ಲಿ ದೂರು ದಾಖಲಾಗಿದೆ.
ಮಾಲಿನ ಗಣಪತಿ ಅಂಬಿಗ, ಶ್ರೀಧರ ಕುಮಟಾಕರ , ಲೀಹಿತ ಈಶ್ವರ ತಾಂಡೇಲ, ಹೊನ್ನಾವರ,ರಾಘವೇಂದ್ರ ಉದಯ ನಾಯ್ಕ, ಕುಮಟಾ , ರಾಜೇಂದ್ರ ಮೇಸ್ತಾ, ಹೊನ್ನಾವರ ಇವರ ಮೇಲೆ ದೂರು ದಾಖಲಾಗಿದೆ.
ತೆಂಕಣಕೇರಿಯ ತುಕಾರಾಮ ಖಾರ್ವಿ ದಂಪತಿಗೆ ಮಕ್ಕಳಿಲ್ಲದಿರುವುದನ್ನು ತಿಳಿದ ಹೊನ್ನಾವರದ ಲೋಹಿತ್ ತಾಂಡೇಲ್,ಕಾನೂನುಬದ್ಧವಾಗಿ ಮಗು ಕೊಡಿಸುತ್ತೇವೆ ಎಂದು ನಂಬಿಸಿದ್ದಾನೆ. ಬಳಿಕ ತನ್ನ ಪರಿಚಯದ ಮಾಲಿನಿ ಶ್ರೀಧರ ಕುಮಟಾಕರ್ ಅವರನ್ನು ಮಧ್ಯವರ್ತಿಯಾಗಿ ಕಳುಹಿಸಿ, ಮಗುವಿನ ಪೋಷಕರನ್ನು ಭೇಟಿಮಾಡಿಸುವ ನಾಟಕ ಮಾಡಿದ ಆರೋಪ ಮಾಡಲಾಗಿದೆ.
2024ರ ಸೆಪ್ಟೆಂಬರ್ 12ರಂದು ಮಾಲಿನಿ ಅಂಕೋಲಾಕ್ಕೆ ಬಂದು,ತನ್ನ ಕಾರಿನ ಚಾಲಕ ರಾಘವೇಂದ್ರ ನಾಯ್ಕ ಮೂಲಕ ದಂಪತಿಯಿಂದ 3 ಲಕ್ಷ ರೂ. ಚೆಕ್, 1 ಲಕ್ಷ ರೂ. ನಗದು ಪಡೆದಿದ್ದಾಳೆ. ಬಳಿಕ ದಸ್ತಕ ,ನೋಂದಣಿ ಶುಲ್ಕ, ಕಾನೂನು ಪತ್ರಗಳು ಹಾಗೂ ವಕೀಲರ ಪೀಸ್ ಎಂದು ಹೇಳಿ ಸೆಪ್ಟೆಂಬರ್ 24ರಂದು ಫೋನ್‌ಪೇ ಮೂಲಕ 50 ಸಾವಿರ ರೂ. ಪಡೆದುಕೊಂಡಿದ್ದಾರೆ.
Ankola| ಉಪನ್ಯಾಸಕನ ಲೈಂಕಿಕ ಕಿರುಕುಳ-ವಿದ್ಯಾರ್ಥಿಗಳು,ಪೋಷಕರಿಂದ ಕಾಲೇಜಿಗೆ ಮುತ್ತಿಗೆ.
ಒಟ್ಟು 4.5 ಲಕ್ಷ ರೂ. ಪಡೆದ ಬಳಿಕ ಮಗು ಕೊಡಿಸುವ ಬಗ್ಗೆ ಯಾವುದೇ ಪ್ರಕ್ರಿಯೆ ಕೊಡದೆ,ಕರೆಗಳಿಗೆ ಉತ್ತರಿಸದೆ ದಂಪತಿಯನ್ನು ತೊಂದರೆಗೊಳಪಡಿಸಿರುವುದು ದೂರಿನಲ್ಲಿ ದಾಖಲಾಗಿದೆ. ಹಣ ಮರಳಿಸಿ ಅಥವಾ ಕಾನೂನುಬದ್ಧವಾಗಿ ಮಗು ನೀಡಿ ಎಂದು ಹೇಳಿದಾಗಲೂ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದರೆಂದು ದಂಪತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ವಿಷಯ ಗಂಭೀರವಾಗಿದ್ದರಿಂದ ದೂರು ಸ್ವೀಕರಿಸಿದ ಅಂಕೋಲಾ ಪೊಲೀಸ್ ಠಾಣೆ ಪೊಲೀಸರು, ಲೋಹಿತ್ ತಾಂಡೇಲ್, ಮಾಲಿನಿ ಅಂಬಿಗ, ಶ್ರೀಧರ ಕುಮಟಾಕರ್ ಮತ್ತು ರಾಘವೇಂದ್ರ ನಾಯ್ಕ ಇವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
FIR ನಲ್ಲಿ ಏನಿದೆ?
ಫಿರ್ಯಾದುದಾರರಾದ ಶ್ರೀ ತುಕಾರಾಮ ತಂದೆ ಪೇಟು ಖಾರ್ವಿ ಪ್ರಾಯ: 52 ವರ್ಷ. ಉದ್ಯೋಗ: ಖಾಸಗಿ ಗುತ್ತಿಗೆದಾರ ಸಾ॥ ತೆಂಕಣಕೇರಿ ಅಂಕೋಲಾ ತಾಲೂಕ ಇವರು ಅಂಕೋಲಾ ಪೊಲೀಸ್ ಠಾಣೆಯಲ್ಲಿ ನೀಡಿದ ಗಣಕೀಕೃತ ದೂರಿನಲ್ಲಿ" ಫಿರ್ಯಾದುರಾರರು ತಮಗೆ ಮಕ್ಕಳಾಗದೇ ಇರುವದರಿಂದ ತನ್ನ ಹೆಂಡತಿಯೊಂದಿಗೆ ಸಮಾಲೋಚಿಸಿ ಒಂದು ಮಗುವನ್ನು ಕಾನೂನು ಬದ್ದವಾಗಿ ದತ್ತು ಪಡೆಯಲು ನಿರ್ಧರಿಸಿದ್ದು, ಈ ವಿಷಯ ತಿಳಿದ ಫಿರ್ಯಾದಿ ಸಂಬಂಧಿ ಹೊನ್ನಾವರದಲ್ಲಿರುವ ಲೋಹಿತ ಈಶ್ವರ ತಾಂಡೇಲ ಇತನು ತಾನು ಕಾನೂನು ಬದ್ಧವಾಗಿ ಒಂದು ಗಂಡು ಮಗುವನ್ನು ತನ್ನ ಪರಿಚಯಸ್ಥ ಮಾಲಿನಿ ಗಣಪತಿ ಅಂಬಿಗ @ ಮಾಲಿನಿ ಶ್ರೀಧರ ಕುಮಟಾಕರ ಇವರ ಮುಖಾಂತರ ಮಗುವಿನ ತಂದೆ ತಾಯಿಗೆ ಬೇಟಿ ಮಾಡಿಸಿ ಮಗುವನ್ನು ಕೊಡಿಸುತ್ತೇನೆ ಅಂತಾ ಭರವಸೆ ನೀಡಿ. ದಿನಾಂಕ: 12-09-2024 ರಂದು ಲೋಹಿತ ಈಶ್ವರ ತಾಂಡೇಲ ಇತನು ಫಿರ್ಯಾದಿಗೆ ಕರೆ ಮಾಡಿ, ಮಾಲಿನಿ ಗಣಪತಿ ಅಂಬಿಗ ಇವರೊಂದಿಗೆ ತಾನು ಜಾಗದ ವ್ಯವಹಾರ ಮಾಡಿದ್ದು ತನಗೆ ಹಣದ ಸಹಾಯವನ್ನು ಮಾಡಿ ಅಂತಾ ಹೇಳಿ, ಹಣವನ್ನು ಮಾಲಿನಿ ಇವರಿಗೆ ನೀಡಲು ಹೇಳಿದಂತೆ.
Honnavar| ಅಪ್ರಾಪ್ತ ಬಾಲಕಿ ಪುಸಲಾಯಿಸಿ ಯುವಕರಿಂದ ಅತ್ಯಾಚಾರ -ಗರ್ಭಿಣಿಯಾದ ಬಾಲಕಿ!
ಅದೇ ದಿನ ಕಾರ ನಂಬರ ಕೆ.ಎ47/ಎನ್-0535 ನೇದರಲ್ಲಿ ಸಂಜೆ 05-30 ಗಂಟೆಗೆ ಸುಮಾರಿಗೆ ಅಂಕೋಲಾ ತಾಲೂಕಿನ ಕೆ.ಸಿ ರಸ್ತೆಯಲ್ಲಿನ ಎಸ್.ಬಿ.ಐ ಬ್ಯಾಂಕ ಹತ್ತಿರ ಬಂದ ಆಪಾದಿತೆ ಮಾಲಿನಿ ಗಣಪತಿ ಅಂಬಿಗ @ ಮಾಲಿನಿ ಶ್ರೀಧರ ಕುಮಟಾಕರ ಇವರು ತಮ್ಮ ಕಾರಿನ ಡ್ರೈವರ್‌ನಾದ ರಾಘವೇಂದ್ರ ಉದಯ ನಾಯ್ಕ ಇವನ ಹತ್ತಿರ 3 ಲಕ್ಷ ರೂಪಾಯಿ ಹಣವನ್ನು ಚಕ್. ಮೂಲಕ, 1 ಲಕ್ಷ ರೂಪಾಯಿ ನಗದು ಹಣವನ್ನು ಇವರ ಖಾತೆಗೆ ನೀಡಲು ಹೇಳಿದಂತೆ, ಫಿರ್ಯಾದಿಯು 1 ಲಕ್ಷ ನಗದು ಹಣವನ್ನು, ಬ್ಯಾಂಕ ಆಪ್ ಬರೋಡ ಅಂಕೋಲಾ ಶಾಖೆಯ 3 ಲಕ್ಷ ರೂಪಾಯಿಯ ಚಕ್‌ನ್ನು ನೀಡಿದ್ದು ಇರುತ್ತದೆ.
Kalaburgi ಶೇಖ್ ದರ್ಗಾದಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ: 6 ಮಂದಿ ವಿರುದ್ಧ FIR
ನಂತರ ಮಾಲಿನಿ ಗಣಪತಿ ಅಂಚಿಗ @ ಮಾಲಿನಿ ಶ್ರೀಧರ ಕುಮಟಾಕರ ಇವರು ದಿನಾಂಕ 14-03-2024 ರಂದು ಫಿರ್ಯಾದಿಯ ಮನೆಗೆ ಬಂದು ಮಗು ದತ್ತಕ್ಕೆ ಪಡೆಯಲು ಕೆಲವು ದಾಖಲೆಗಳು ಅವಶ್ಯಕ ಇದೆ ಅಂತಾ ದಾಖಲಾತಿಗಳನ್ನು ಪಡೆದುಕೊಂಡು ಹೋಗಿ. ಕೆಲವು ದಿನಗಳ ಕಾಲ ಮೊಬೈನಲ್ಲಿ ಫಿರ್ಯಾದಿಯವರೊಂದಿಗೆ ವಿನಯತೆಯಿಂದ ಮಾತನಾಡುತ್ತಾ ಇದ್ದಳು. ದಿನಾಂಕ 29-09-2024 ರಂದು ಲೋಹಿತ ಈಶ್ವರ ತಾಂಡೇಲ ಇತನು ಫಿಯಾದಿಗೆ ಕರೆ ಮಾಡಿ ಮಗುವನ್ನು ಕಾನೂನು ಪ್ರಕಾರವಾಗಿ ದತ್ತಕ್ಕೆ ನೀಡಲು ನೊಂದಣಿ ಪೀ, ವಕೀಲರ ಪೀ ಹಾಗೂ ಕಾರಿನ ಬಾಡಿಯನ್ನು ನೀಡಲು 50,000 ರೂಪಾಯಿಗಳು ನೀಡಲು ತಿಳಿಸಿದಾಗ. ಫಿರ್ಯಾದಿಯು ಮಾಲಿನಿ ಇವರ ಮೊಬೈಲಗೆ 50,000 ರೂಪಾಯಿಗಳನ್ನು ವರ್ಗಾಯಿಸಿದ್ದು ಇರುತ್ತದೆ.
ನಂತರ ಫಿರ್ಯಾದಿಯು ಮಗುವನ್ನು ಕಾನೂನು ಪ್ರಕಾರ ದತ್ತು ಪಡೆಯುವ ವಿಷಯವಾಗಿ ಮಾಲಿನಿ ಇವರ ಹತ್ತಿರ ಕೇಳಿದಾಗ, ಮಗುವನ್ನು ದತ್ತಕ್ಕೆ ಪಡೆಯಲು ಬೇರೆ ಕಾನೂನು ವಿಧಾನಳಿವೆ ಅದಕ್ಕೆ 2 ಲಕ್ಷ ರೂಪಾಯಿಗಳು ವೆಚ್ಚ ಇರುವದಾಗಿ ಹೇಳಿ, ಹಣದ ಬೇಡಿಕೆ ಇಟ್ಟಾಗ, ಫಿರ್ಯಾದಿಯು ಮತ್ತೇ ತನಗೆ ಹಣವನ್ನು ನೀಡಲು ಸಾಧ್ಯವಿಲ್ಲ ಅಂತಾ ತಿಳಿಸಿದ್ದು, ಅದಕ್ಕೆ ಆಪಾದಿತೆ ಮಾಲಿನಿ ಇವಳು ಫಿರ್ಯಾದಿಯರಿಗೆ ತುಚ್ಯವಾಗಿ ಮಾತನಾಡಿ ತಾನು ಪಡೆದ ಹಣವನ್ನು ಲೊಹಿತನ ಮುಖಾಂತರ ಮರಳಿಸುವದಾಗಿ ಹೇಳಿದ್ದು, ಫಿರ್ಯಾದಿಯು ಹಣವನ್ನು ಮರಳಿಸುವಂತೆ ಅನೇಕ ಬಾರಿ ಪಾದಿತೆಗೆ ಕರೆ ಮಾಡಿದ್ದು, ಸಂದೇಶಗಳನ್ನು ಕಳುಹಿಸಿದರು ಸಹಿತ ಯಾವದೇ ಪ್ರತಿಕ್ರಿಯೇ ನೀಡದೆ, ಆಪಾದಿತ ಶ್ರೀಧರ ಕುಮಟಾಕರ ಇತನಿಂದ ಕರೆ ಮಾಡಿಸಿ ಪದೆ ಪದೆ ನೀನು ಪೋನ ಮಾಡ ಬೇಡ, ನಿನ್ನ ಹಣ ಕೊಡಲು 6 ತಿಂಗಳು, 9 ತಿಂಗಳು ಬೇಕಾಗುತ್ತದೆ. ಇದೇ ರೀತಿಯಲ್ಲಿ ಪೋನ್ ಮಾಡಿದರೇ ನಿಮ್ಮ ಮನೆಗೆ ಬಂದು ಎತ್ತಿಕೊಂಡು ಹೋಗಿ ಕಟ್ಟಿಹಾಕಿ ಹೊಡೆಯುವದಾಗಿ ಧಮಕಿ ಹಾಕಿದ್ದಲ್ಲದೇ, ಫಿರ್ಯಾದಿಯ ಮೇಲೆ ಕ್ರಿಮಿನಲ್ಲ ಕೇಸ್ ದಾಖಲಿಸುವದಾಗಿ ಹೇಳಿರುತ್ತಾನೆ.
ನಂತರ ಫಿರ್ಯಾದಿಯು ಈ ವ್ಯಕ್ತಿಗಳ ಹಿನ್ನಲೆ ಬಗ್ಗೆ ವಿಚಾರಿಸಿದಾಗ ಮಕ್ಕಳ ಮಾರಾಟ ಮಾಡುವ ದೊಡ್ಡ ಜಾಲ ಇದ್ದು ಆಪಾದಿತರಾದ 1) ಮಾಲಿನ ಗಣಪತಿ ಅಂಬಿಗ @ ಮಾಲಿನಿ ಶ್ರೀಧರ ಕುಮಟಾಕರ 2) ಶ್ರೀದರ ಕುಮಟಾಕರ, ಕುಮಟಾ 3) ಲೀಹಿತ ಈಶ್ವರ ತಾಂಡೇಲ, ಹೊನ್ನಾವರ 4) ರಾಘವೇಂದ್ರ ಉದಯ ನಾಯ್ಕ, ಕುಮಟಾ 5) ರಾಜೇಂದ್ರ ಮೇಸ್ತಾ, ಹೊನ್ನಾವರ ಹಾಗೂ ಇನ್ನಿತರರು ಸೇರಿ ಕಾನೂನು ಬದ್ದವಾಗಿ ಮಗುವನ್ನು ದತ್ತಕ್ಕೆ ಪಡೆಯಲು ಇಚ್ಚಿಸಿದ ಫಿರ್ಯಾದಿಗೆ ಮೋಸ ಹಾಗೂ ವಂಚನೆಯನ್ನು ಮಾಡಿದ್ದು, ಸದರಿ ಆರೋಪಿತರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂದು ದೂರು ನೀಡಲಾಗಿದೆ.