Ankola: ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಬೆಂಕಿ ಲಕ್ಷಾಂತರ ವಸ್ತುಗಳಿಗೆ ಹಾನಿ
Ankola: ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಬೆಂಕಿ ಲಕ್ಷಾಂತರ ವಸ್ತುಗಳಿಗೆ ಹಾನಿ

ಕಾರವಾರ :-ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ (ankola) ತಾಲೂಕಿನ ಪುರಸಭಾ ವ್ಯಾಪ್ತಿಯ ಬೊಗ್ರಿಬೈಲ್‌ನಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕದ ಆವರಣದಲ್ಲಿ ಮಧ್ಯಾಹ್ನದ ವೇಳೆ ಬೆಂಕಿ ಕಾಣಿಸಿಕೊಂಡು ಅಲ್ಲಿ ಸಂಗ್ರಹಿಸಿಟ್ಟಿದ್ದ ಘನತ್ಯಾಜ್ಯಗಳು ಹೊತ್ತಿ ಉರಿದಿದೆ.
ಘಟನೆಯಲ್ಲಿ ಸ್ಥಳದಲ್ಲಿರುವ ಪ್ಲಾಸ್ಟಿಕ್ ತ್ಯಾಜ್ಯ ಸಂಪೂರ್ಣ ಬೆಂಕಿಗಾಹುತಿಯಾಗಿದ್ದು ಅಗ್ನಿಶಾಮಕ ದಳದವರು ತಕ್ಷಣ ಆಗಮಿಸಿದ್ದರಿಂದ ಆಗುವ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಇದನ್ನೂ ಓದಿ:-Ankola ಮೈಕ್ರೋ ಫೈನಾನ್ಸ್ ಸಾಲ ವಸೂಲಿಗೆ ಹೋದ ಸಿಬ್ಬಂದಿ ಆತ್ಮಹ*ತ್ಯೆಗೆ ಯತ್ನ!
ಈ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ಜೊತೆಯಲ್ಲಿ ಕೆಲವು ಬ್ಯಾಟರಿ ಶೆಲ್‌ಗಳು ಸೇರಿದಂತೆ ಹಲವು ವಿವಿಧ ಸಾಮಾಗ್ರಿಗಳು ಇರುವುದರಿಂದ ಬಿಸಿಲಿನ ಬೇಗೆಗೆ ಬೆಂಕಿ ತಾಗಿ ಈ ರೀತಿ ದೊಡ್ಡದಾದ ಬೆಂಕಿ ಕಾಣಿಸಿಕೊಂಡಿರಬಹುದು ಎನ್ನುವುದು ಪುರಸಭೆಯ ಮುಖ್ಯಾಧಿಕಾರಿ ತಿಳಿಸಿದ್ದಾರೆ.

ಅಗ್ನಿಶಾಮಕ ದಳದವರು ನೀರಿನ ಟ್ಯಾಂಕ್‌ನಿಂದ ನೀರು ಹಾಕಿದರೂ ಪ್ಲಾಸ್ಟಿಕ್‌ಗೆ ಬೆಂಕಿ ತಾಗಿರುವುದರಿಂದ ಆರಿಸಲು ಹರಸಾಹಸ ಪಟ್ಟರೂ ಸಾಧ್ಯವಾಗಿಲ್ಲ.
ಇದನ್ನೂ ಓದಿ:-Ankola ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಸರ್ವರ್ ಹ್ಯಾಕ್ 33 ಲಕ್ಷಕ್ಕೂ ಅಧಿಕ ಹಣ ಕದ್ದ ಸೈಬರ್ ಕಳ್ಳರು.
ಪುರಸಭೆಯವರು ಸಹ ಈ ಬೆಂಕಿಯ ಅವಘಡವನ್ನು ನಂದಿಸಲು ಟ್ಯಾಂಕರ ಮೂಲಕ ನೀರು ತಂದು ಜೆ.ಸಿ.ಬಿ ಬಳಸಿ ಮಣ್ಣು ಸುರಿಸಿ ಈ ಪ್ಲಾಸ್ಟಿಕ್‌ಗಳನ್ನು ಬೇರ್ಪಡಿಸಿ ಬೆಂಕಿ ಮುಂದೆ ಹರಡದಂತೆ ಜಾಗ್ರತಿ ವಹಿಸಿದರು.
ಸ್ಥಳದಲ್ಲಿ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಪುರಸಭಾ ಮುಖ್ಯಾಧಿಕಾರಿ ಅಕ್ಷತಾ, ಪುರಸಭಾ ಸದಸ್ಯರಾದ ಮಂಜುನಾಥ ನಾಯ್ಕ, ಕಾರ್ತಿಕ, ರೇಖಾ ಗಾಂವಕರ ಸೇರಿದಂತೆ ಇತರರು ಉಪಸ್ಥಿತರಿದ್ದು ಬೆಂಕಿ ಆರಿಸುವಲ್ಲಿ ಸಹಕರಿಸಿದ್ದಾರೆ.
ಇದನ್ನೂ ಓದಿ:-Bank ನಿಂದ ಸಾಲಕ್ಕೆ ಲಾರಿ ಜಪ್ತಿ ಟೈರನ್ನೇ ಕದ್ದ ಅಧಿಕಾರಿಗಳು!
ಆದರೂ ಬೆಂಕಿಯ ಕೆನ್ನಾಲಿಗೆಯಿಂದ ಸಂಪೂರ್ಣ ಆರಿಸಲಾಗಿಲ್ಲ. ಬೆಂಕಿ ಹೊತ್ತಿಕೊಂಡ ಶೆಡ್‌ನಲ್ಲಿ ಪ್ಲಾಸ್ಟಿಕಗಳಿದ್ದು, ಈ ಪ್ಲಾಸ್ಟಿಕಗಳನ್ನು ಸಿಮೆಂಟ್ ಕಾರ್ಖಾನೆಗೆ ಕಳುಹಿಸಿ ವಿಲೇವಾರಿ ಮಾಡಲು ಇರಿಸಲಾಗಿತ್ತು.
ಹಠಾತ್ತನೆ ಬೆಂಕಿ ಕಾಣಿಸಿಕೊಂಡು ಈ ಪ್ಲಾಸ್ಟಿಕ ಸುಟ್ಟು ಕರಕಲಾಗಿದೆ. ಬೆಂಕಿ ಎಲ್ಲಿಂದ ಹೊತ್ತಿಕೊಂಡಿತು ಅಥವಾ ಯಾರಾದರೂ ಬೆಂಕಿ ಹೊತ್ತಿಸಿರಬಹುದೇ ಅಥವಾ ಇನ್ನಾವುದೇ ಕಾರಣದಿಂದ ಬೆಂಕಿ ತಾಗಿರಬಹುದು ಎನ್ನುವುದು ಚರ್ಚೆಗೆ ಗ್ರಾಸವಾಗಿದ್ದು ಅಂಕೋಲ ಪೊಲೀಸರು ಸಿ.ಸಿ ಕ್ಯಾಮೆರಾವನ್ನು ಪರಿಕ್ಷೀಸಿದ್ದು ಮಾಹಿತಿಗಳು ತಿಳಿದು ಬರಬೇಕಿದೆ.