Ankola| ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಉಪನ್ಯಾಸಕ ಗೋವಾಕ್ಕೆ ಪರಾರಿ!ಸಹಕರಿಸಿದ ಇಬ್ಬರು ವಶಕ್ಕೆ
Ankola| ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಉಪನ್ಯಾಸಕ ಗೋವಾಕ್ಕೆ ಪರಾರಿ!ಸಹಕರಿಸಿದ ಇಬ್ಬರು ವಶಕ್ಕೆ
ಅಂಕೋಲಾ(29 october 2025):- ಅಂಕೋಲ (ankola) ಕಾಲೇಜಿನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಕಾಲೇಜು ಉಪನ್ಯಾಸಕ ದೂರು ದಾಖಲಾಗುತಿದ್ದಂತೆ ನಾಪತ್ತೆಯಾಗಿದ್ದಾನೆ.
Ankola| ಉಪನ್ಯಾಸಕನ ಲೈಂಕಿಕ ಕಿರುಕುಳ-ವಿದ್ಯಾರ್ಥಿಗಳು,ಪೋಷಕರಿಂದ ಕಾಲೇಜಿಗೆ ಮುತ್ತಿಗೆ.
ಅಂಕೋಲಾ ತಾಲೂಕಿನ ಪೂಜುಗೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ರಾಮಚಂದ್ರ ಅಂಕೋಲೆಕರ್ ನಾಪತ್ತೆಯಾದ ಉಪನ್ಯಾಸಕನಾಗಿದ್ದಾನೆ.
ಲೈಂಗಿಕ ಕಿರುಕುಳ ಸಂಬಂಧ ವಿದ್ಯಾರ್ಥಿನಿಯೋರ್ವಳು ಅಂಕೋಲ ಠಾಣೆಯಲ್ಲಿ ಸಾಕ್ಷಿ ಸಮೇತ ಉಪನ್ಯಾಸಕನ ವಿರುದ್ಧ ದೂರು ನೀಡಿದ್ದಳು.
ಇನ್ನು ಅಕ್ಟೋಬರ್ 28 ರಂದು ಕಾಲೇಜು ಉಪನ್ಯಾಸಕನಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡುತ್ತಿರುವುದನ್ನು ಖಂಡಿಸಿ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿ ಪೋಷಕರಿಂದ ಕಾಲೇಜಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು.
Ankola| ಪುರಸಭೆ 19 ಸದಸ್ಯರಿಂದ ದಿಢೀರ್ ರಾಜೀನಾಮೆ !? ಅಧ್ಯಕ್ಷರು ಹೇಳಿದ್ದು ಏನು?
ಉಪನ್ಯಾಸಕನ ಅಮಾನತು ಆಗಬೇಕು ಹಾಗೂ ಉಪನ್ಯಾಸಕನ ಪರ ನಿಂತ ಪ್ರಾಂಶುಪಾಲರ ವರ್ಗಾವಣೆ ಯಾಗಬೇಕು ಎಂದು ಪ್ರತಿಭಟನಾಗಾರರು ಒತ್ತಾಯಿಸಿದ್ದರು.
ಇನ್ನು ಉಪನ್ಯಾಸಕನಿಗೆ ಆಶ್ರಯ ನೀಡಿ ಗೋವಾಗೆ(goa) ತೆರಳಲು ಕಾರು ನೀಡಿ ಸಹಕರಿಸಿದ ಆರೋಪದಡಿ ಗೋಕರ್ಣದ ಸನಿಹದ ನಾಗರಾಜ್ ಗೌಡ ಮತ್ತು ವಾಸು ಎನ್ನುವ ಇಬ್ಬರನ್ನು ಅಂಕೋಲಾ ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಸಧ್ಯ ತನಿಖೆ ಪ್ರಗತಿಯಲ್ಲಿದ್ದು , ಅಂಕೋಲ ಪೊಲೀಸರು ಆರೋಪಿಯ ಹುಡುಕಾಟದಲ್ಲಿದ್ದಾರೆ.
