For the best experience, open
https://m.kannadavani.news
on your mobile browser.
Advertisement

Haliyala | ಪರೀಕ್ಷಾ ಕೇಂದ್ರದಲ್ಲೇ ಮಗನಿಗೆ ಕಾಪಿ ಹೊಡೆಸಿದ ಶಿಕ್ಷಕ .

Haliyala news 13 December 2025 :-ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ನವೋದಯ ಪ್ರವೇಶ ಪರೀಕ್ಷೆ ವೇಳೆ ತನ್ನ ಮಗನಿಗೆ ಪರೀಕ್ಷಾ ಕೇಂದ್ರದಲ್ಲೇ ಅಕ್ರಮವಾಗಿ ಉತ್ತರ ಹೇಳಿಕೊಟ್ಟ ಶಿಕ್ಷಕನ ವಿರುದ್ಧ ವಿದ್ಯಾರ್ಥಿಗಳು ಹಾಗೂ ಪೋಷಕರು ದೂರು ನೀಡಿದ ಘಟನೆ ನಡೆದಿದೆ. ಬಿಇಒ ಪರಿಶೀಲನೆ ನಡೆಸಿದ್ದಾರೆ.
04:11 PM Dec 13, 2025 IST | ಶುಭಸಾಗರ್
Haliyala news 13 December 2025 :-ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ನವೋದಯ ಪ್ರವೇಶ ಪರೀಕ್ಷೆ ವೇಳೆ ತನ್ನ ಮಗನಿಗೆ ಪರೀಕ್ಷಾ ಕೇಂದ್ರದಲ್ಲೇ ಅಕ್ರಮವಾಗಿ ಉತ್ತರ ಹೇಳಿಕೊಟ್ಟ ಶಿಕ್ಷಕನ ವಿರುದ್ಧ ವಿದ್ಯಾರ್ಥಿಗಳು ಹಾಗೂ ಪೋಷಕರು ದೂರು ನೀಡಿದ ಘಟನೆ ನಡೆದಿದೆ. ಬಿಇಒ ಪರಿಶೀಲನೆ ನಡೆಸಿದ್ದಾರೆ.
haliyala   ಪರೀಕ್ಷಾ ಕೇಂದ್ರದಲ್ಲೇ ಮಗನಿಗೆ ಕಾಪಿ ಹೊಡೆಸಿದ ಶಿಕ್ಷಕ 

Haliyala | ಪರೀಕ್ಷಾ ಕೇಂದ್ರದಲ್ಲೇ ಮಗನಿಗೆ ಕಾಪಿ ಹೊಡೆಸಿದ ಶಿಕ್ಷಕ .

Advertisement

Haliyala news (13 December 2025) ಕಾರವಾರ:-ನವೋದಯ ಪರೀಕ್ಷೆಯಲ್ಲಿ ತನ್ನ ಮಗನಿಗೆ ಪರೀಕ್ಷಾ ಕೇಂದ್ರಕ್ಕೆ ಅಕ್ರಮವಾಗಿ ಪ್ರವೇಶಿಸಿ ಉತ್ತರ ಹೇಳಿಕೊಡುತಿದ್ದ ಶಿಕ್ಷಕನ ವಿರುದ್ಧ ಪರೀಕ್ಷೆ ಬರೆಯಲು ಬಂದ ಮಕ್ಕಳು ವಿರೋಧ ವ್ಯಕ್ತಪಡಿಸಿ ದೂರು ನೀಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ನಡೆದಿದೆ.

Haliyal| ಟ್ರಾಕ್ಟರ್ ಮತ್ತು ಟ್ರೇಲರ್ ಕಳ್ಳತನ ಪ್ರಕರಣ: ಆರೋಪಿ ಬಂಧನ

 ಹಳಿಯಾಳ (haliyala) ಪಟ್ಟಣದ ಕಾರ್ಮೆಲ್ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು ಚರ್ಚಿಲ್ ಸಂತಾನ್ ದಾಲ್ಮೆಟ್‌ ಕಾರ್ಮೇಲ್ ತನ್ನ ಮಗನಿಗೆ ತನ್ನದೇ ಶಾಲೆಯ

ಪರೀಕ್ಷಾ ಕೇಂದ್ರಕ್ಕೆ ಅಕ್ರಮವಾಗಿ ಪ್ರವೇಶಿಸಿ ತನ್ನ ಮಗನಿಗೆ ಉತ್ತರ ಹೇಳಿಕೊಡುತಿದ್ದನು.

ನವೋದಯ ಶಾಲೆಯ ಪ್ರವೇಶಾತಿಗಾಗಿ 5ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತಿದ್ದು ಇಲ್ಲಿ ಕರ್ತವ್ಯ ಇಲ್ಲದಿದ್ದರೂ ಪರೀಕ್ಷೆಯ ಸೂಪರ್‌ವೈಸರ್ ಜತೆ ಕೈ ಜೋಡಿಸಿ ತನ್ನ ಮಗನಿಗೆ ಉತ್ತರ ಹೇಳಿಕೊಡ್ತಿದ್ದ ಶಿಕ್ಷಕ ಚರ್ಚಿಲ್ ನನ್ನು ಪರೀಕ್ಷೆ ಬರೆಯುತಿದ್ದ ಮಕ್ಕಳು ಹಾಗೂ ಪೋಷಕರು ಗಮನಿಸಿದ್ದು ಅಕ್ರೋಶ ವ್ಯಕ್ತಪಡಿಸಿದರು.

ಬಿಇಓ ಗೆ ದೂರು ನೀಡಿದ್ದು ಸ್ಥಳಕ್ಕೆ ಆಗಮಿಸಿದ ಬಿಇಒ ಪ್ರಮೋದ್ ಮಹಾಲೆ ಪರಿಶೀಲನೆ ನಡೆಸಿದ್ದು ಇದೇ ವೇಳೆ ಘಟನೆ ಸಂಬಂಧ ಪೋಷಕರು ಹಳಿಯಾಳ ಠಾಣೆಗೆ ದೂರು ಸಲ್ಲಿಸಿದ್ದು ,ಮಗನಿಗೆ ಪರೀಕ್ಷೆ ನಕಲು ಮಾಡಿಸುವ ಈ ಶಿಕ್ಷಕ ಬಡ್ಡಿ ವ್ಯವಹಾರ ನಡೆಸ್ತಿದ್ದ ಬಗ್ಗೆ ಸಹ  ದೂರು ನೀಡಿದ್ದಾರೆ. ಇನ್ನು ತಾನು ಮಾಡಿದತಪ್ಪನ್ನು ಶಿಕ್ಷಕ ಒಪ್ಪಿಕೊಂಡಿದ್ದು ತನ್ನನ್ನು ಕ್ಷಮಿಸುವಂತೆ ಕೇಳಿಕೊಂಡನು.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ