Gokarna | ಬೆಂಕಿ ಅವಘಡ ಲಕ್ಷಾಂತರ ಮೌಲ್ಯದ ನಾಟ ಸಂಪೂರ್ಣ ನಾಶ.
Gokarna | ಬೆಂಕಿ ಅವಘಡ ಲಕ್ಷಾಂತರ ಮೌಲ್ಯದ ನಾಟ ಸಂಪೂರ್ಣ ನಾಶ.
Gikarna news (13 december 2025):- ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ (gokarna ) ಹೊಸಕೇರಿಯಲ್ಲಿ ಷಾಮಿಲ್ ನಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದೆ.
ಬೆಂಕಿಯ ಕೆನ್ನಾಲಿಗೆಗೆ ಷಾಮಿಲ್ ನಲ್ಲಿರುವ ವಿವಿಧ ಜಾತಿಯ ನಾಟ(ಕಟ್ಟಿಗೆ)ಗಳು ಬೆಂಕಿಗಾಹುತಿಯಾಗಿದೆ.

ಶಂಕರ ಈರಯ್ಯ ಆಚಾರ್ಯ ಅವರಿಗೆ ಸೇರಿದ ಷಾಮಿಲ್ ಇದಾಗಿದ್ದು ,ಲಕ್ಷಾಂತರ ರೂಪಾಯಿ ಮೌಲ್ಯದ ಬೆಲೆಬಾಳುವ ನಾಟ(ಕಟ್ಟಿಗೆ ) ಸಂಪೂರ್ಣವಾಗಿ ಸುಟ್ಟು ನಾಶವಾಗಿದೆ.
Gokarna Eden Ember Castle Resort ಪ್ರವಾಸಿಗರಿಗಾಗಿ ಹೊಸ ಆಥಿತ್ಯದ ಮನೆ ಹೇಗಿದೆ ಗೊತ್ತಾ?
ಬೆಂಕಿಯ ತೀವ್ರತೆ ಹೆಚ್ಚಾಗುತ್ತಿದ್ದಂತೆ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಕೂಡಲೇ ಎರಡು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿವೆ. ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಅಗ್ನಿ ಅವಘಡದ ಕಾರಣ ತಿಳಿದು ಬರಬೇಕಿದ್ದು,ಕಂದಾಯ ಇಲಾಖೆ ಅಧಿಕಾರಿಗಳು ಮಾಹಿತಿ ಕಲೆಹಾಕಿದ್ದಾರೆ. ಈ ಕುರಿತು ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಗ್ನಿ ಅವಘಡದ ಕಾರಣಗಳ ಬಗ್ಗೆ ತನಿಖೆ ಮುಂದುವರಿದಿದೆ.
