Joida | ಕಾಡಿನಲ್ಲಿ ಮಹಿಳೆ ಅ**ರ |ಆರೋಪಿಗೆ ಹತ್ತು ವರ್ಷ ಜೈಲು ಶಿಕ್ಷೆ
Joida | ಕಾಡಿನಲ್ಲಿ ಮಹಿಳೆ ಅ**ರ |ಆರೋಪಿಗೆ ಹತ್ತು ವರ್ಷ ಜೈಲು ಶಿಕ್ಷೆ.
ವರದಿ-ಶುಭ ಸಾಗರ್
Joida news :- ಕಾಡಿನಲ್ಲಿ ಹಸು ಮೇಯಿಸುತ್ತಿದ್ದ ಮಹಿಳೆ ಮೇಲೆ ವಿಕೃತಿ ಮೆರೆದ ಕಾಮುಕನಿಗೆ ಶಿರಸಿಯ ನ್ಯಾಯಾಲಯ 10 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದೆ.
ಜೋಯಿಡಾದ ಉಲ್ಲಾಸ ಸಡಕೋ ಗಾವಡಾ ನ್ಯಾಯಾಲಯದಿಂದ ಶಿಕ್ಷೆಗೊಳಗಾದ ಅಪರಾಧಿಯಾಗಿದ್ದಾನೆ.
ಜೋಯಿಡಾದ (joida) ಈ ಹಿಂದಿನ ಪಿಐ ರಮೇಶ ಹೂಗಾರ್, ಸರ್ಕಾರಿ ಅಭಿಯೋಜಕ ರಾಜೇಶ ಮಳಗಿಕರ್ ಅವರ ಪ್ರಯತ್ನದಿಂದಾಗಿ ತಪ್ಪು ಮಾಡಿದವನಿಗೆ ಕಂಬಿ ಎಣಿಸುವ ಶಿಕ್ಷೆ ದೊರೆತಿದೆ. ಪ್ರಕರಣದ ಗಂಭೀರತೆ ಅರಿತ ನ್ಯಾಯಾಧೀಶ ಕಿರಣ ಕಿಣಿ ಅವರು ತಪ್ಪಿತಸ್ಥನಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸುವ ಮೂಲಕ ಮಹಿಳೆಗೆ ನ್ಯಾಯ ನೀಡಿದ್ದಾರೆ.
ಘಟನೆ ಏನು?
ಉತ್ತರ ಕನ್ನಡ ಜಿಲ್ಲೆಯ ಜೊಯಿಡಾದ ಅಣಶಿ ಗ್ರಾಮದ ಕೈಲವಾಡದ ಕಾಳಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಅಂಚಿನ ಊರಿನಲ್ಲಿ ಸಂತ್ರಸ್ತೆ ವಾಸವಾಗಿದ್ದರು. ಅಣಶಿ ವನ್ಯಜೀವಿ ವಲಯದ ಬಳಿ ಅವರು ಹೈನುಗಾರಿಕೆ ನಡೆಸಿಕೊಂಡಿದ್ದು, ಸಮೀಪದ ಅರಣ್ಯಕ್ಕೆ ಜಾನುವಾರುಗಳನ್ನು ಮೇವಿಗೆ ಬಿಡುತ್ತಿದ್ದರು. 2018ರ ಡಿಸೆಂಬರ್ 1ರಂದು ಆ ಮಹಿಳೆ ಎಂದಿನoತೆ ಹಸುಗಳ ಜೊತೆ ಕಾಡಿಗೆ ಹೋಗಿದ್ದರು. ದಿನವಿಡೀ ಮೇವುಣಿಸಿ ಸಂಜೆ ಮನೆಗೆ ಮರಳುವಾಗ ಅದೇ ಭಾಗದ ಉಲ್ಲಾಸ ಸಡಕೋ ಗಾವಡಾ ಎದುರಾಗಿದ್ದಾನೆ.
Joida | ಬಂಗಾರದ ಆಸೆಗೆ ಶಿಕ್ಷಕಿ ಕೊಂದವನ ಬಂಧನ
ಹುಲ್ಲು ಮೇಯಿಸುತ್ತಿದ್ದ ಮಹಿಳೆ ಒಂಟಿಯಾಗಿರುವುದನ್ನು ಉಲ್ಲಾಸ ಗಾವಡಾ ಗಮನಿಸಿ ಆಕೆಯನ್ನು ಹಿಂದಿನಿoದ ಗಟ್ಟಿಯಾಗಿ ತಬ್ಬಿಕೊಂಡು ಲೈಂಗಿಕತೆಗೆ ಪ್ರಯತ್ನ ಪಟ್ಟಾಗ ಮಹಿಳೆ ಇದನ್ನು ವಿರೋಧಿಸಿದಾಗ ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ.
ಅಸ್ವಸ್ತಳಾದ ಮಹಿಳೆ ನೆಲಕ್ಕೆ ಬಿದ್ದಾಗ ಆಕೆಯ ಸೀರೆ ಹರಿದು ಮಾನ ಕಳೆದ್ದಾನೆ . ಮಹಿಳೆ ಕೂಗಿ ಪ್ರತಿಭಟಿಸಿದರೂ ಆ ಕಾಡಿನಲ್ಲಿ ಆಕೆಯ ರಕ್ಷಣೆಗೆ ಯಾರೂ ಇರಲಿಲ್ಲ. ಈ ಸನ್ನಿವೇಶ ದುರುಪಯೋಗಪಡಿಸಿಕೊಂಡ ಉಲ್ಲಾಸ ಗಾವಡಾ ಮಹಿಳೆಯ ಇಚ್ಚೆಗೆ ವಿರುದ್ಧವಾದ ಕೆಲಸ ಮಾಡಿದ್ದಾನೆ.
Joida: ಒಂದು ತೆಂಗಿನಕಾಯಿಗಾಗಿ ನಾದಿನಿಯ ಹ** ಮಾಡಿದ ಬಾವ
ನಂತರ ವಿಷಯ ಬೇರೆಯವರಿಗೆ ಹೇಳಿದಲ್ಲಿ ಕೊಲ್ಲುವ ಬೆದರಿಕೆಯೊಡ್ಡಿದ್ದಾನೆ ಇನ್ನು ಉಲ್ಲಾಸ ಗಾವಡಾ ಸಾಕ್ಷಿನಾಶಕ್ಕಾಗಿ ತಾನು ಧರಿಸಿದ್ದ ಬಟ್ಟೆಯನ್ನು ತೊಳೆದು ಒಣಗಿಸಿದ್ದನು. ಈ ಎಲ್ಲಾ ವಿಷಯ ಅರಿತ ಆಗಿನ ಜೊಯಿಡಾ ಪಿಐ ರಮೇಶ ಹೂಗಾರ್ ಅವರು ಪ್ರಕರಣ ದಾಖಲಿಸಿ,ಸೂಕ್ತ ತನಿಖೆ ನಡೆಸಿದರು. ವಿವಿಧ ಸಾಕ್ಷಿಗಳನ್ನು ಪೊಲೀಸರು ಸಂಗ್ರಹಿಸಿದ್ದರು.
joida|ಎಂಟು ಲಕ್ಷ ಮೌಲ್ಯದ ಗೋವಾ ಮದ್ಯ ವಶ|ಓರ್ವ ಆರೋಪಿ ಬಂಧನ
ಶಿರಸಿ ನ್ಯಾಯಾಲಯದಲ್ಲಿ ಪ್ರಕರಣ ಸಂಬಂಧ ಸರ್ಕಾರಿ ಅಭಿಯೋಜಕ ರಾಜೇಶ ಎಂ ಮಳಗಿಕರ್ ಅವರು ಪ್ರಕರಣದ ಹಿನ್ನಲೆಯನ್ನು ವಿವರಿಸಿ ಸಂತ್ರಸ್ತೆಗೆ ಆದ ಅನ್ಯಾಯದ ಬಗ್ಗೆ ನ್ಯಾಯಾಲಯಕ್ಕೆ ಮನವಿ ಮಾಡಿಕೊಟ್ಟರು.
ಪೊಲೀಸ್ ಸಿಬ್ಬಂದಿ ಲಿಯಾಕತ್ ಅಲಿ ಹಾಗೂ ಖಲೀಲ್ ಮುಲ್ಲಾ ಅವರು ನ್ಯಾಯಾಲಯಕ್ಕೆ ಸಾಕ್ಷಿಗಳನ್ನು ವದಗಿಸಿದರು. ಉಲ್ಲಾಸ ಗಾವಡಾ ಅವರ ಮಾತನ್ನು ಆಲಿಸಿದ ನ್ಯಾಯಾಧೀಶ ಕಿರಣ ಕಿಣಿ ಅವರು ಆರೋಪ ಸಾಭೀತಾಗಿರುವುದನ್ನು ಖಚಿತಪಡಿಸಿಕೊಂಡರು. ಕೊನೆಗೆ ವಿಕೃತ ಕಾಮಿಗೆ 10 ವರ್ಷ ಜೈಲು ಶಿಕ್ಷೆ ಜೊತೆ 15 ಸಾವಿರ ರೂ ದಂಡ ಪಾವತಿಗೆ ಆದೇಶಿಸಿದರು. ಸಂತ್ರಸ್ತೆಗೆ 10 ಸಾವಿರ ರೂ ಪರಿಹಾರ ಒದಗಿಸುವಂತೆ ಆದೇಶ ಮಾಡಿದರು.