Karwar | ಕಾಲೇಜು ವಿದ್ಯಾರ್ಥಿಗಳಿಗೆ ಕಾರಿನಲ್ಲಿ ಅಡ್ಡಗಟ್ಟಿ ಗನ್ ತೋರಿಸಿ ಬೆದರಿಕೆ ! ಏನಿದು ಘಟನೆ
Karwar | ಕಾಲೇಜು ವಿದ್ಯಾರ್ಥಿಗಳಿಗೆ ಕಾರಿನಲ್ಲಿ ಅಡ್ಡಗಟ್ಟಿ ಗನ್ ತೋರಿಸಿ ಬೆದರಿಕೆ ! ಏನಿದು ಘಟನೆ
ವರದಿ -ಶುಭಸಾಗರ್.
ಕಾರವಾರ (12 december 2025) :-ಕಾಲೇಜಿನಿಂದ ಬರುತಿದ್ದ ಕಾಲೇಜು ವಿದ್ಯಾರ್ಥಿಗಳಿಗೆ ಥಾರ್ ಕಾರಿನಲ್ಲಿ ಅಡ್ಡಹಾಕಿ ಗನ್ ತೋರಿಸಿ ಉದ್ಯಮಿಯೊಬ್ಬರು ಬೆದರಿಸಿದ ಘಟನೆ ಕಾರವಾರದಲ್ಲಿ (karwar) ನಡೆದಿದೆ.
ಘಟನೆ ಸಂಬಂಧ ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಥಾರ್ ಕಾರನ್ನು ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಲಾಗಿದೆ.
ಘಟನೆ ಏನು?

ಬಿಣಗಾದ ಸಂದೀಪ್ ಕೆ ಎಂಬಾತ ಕಾರವಾರ ನಗರದ ನಂದನಗದ್ದಾದ ಪ್ರೀಮಿಯರ್ ಕಾಲೇಜಿಗೆ ಮೊದಲ ವರ್ಷದ ಪಿ.ಯು.ಸಿ ಓದುತಿದ್ದ ತಮ್ಮ ಮಗಳನ್ನು ಕರೆತರಲು ಕಾರಿನಲ್ಲಿ ಹೋಗಿದ್ದಾರೆ. ಇದೇ ಸಂದರ್ಭದಲ್ಲಿ ದ್ವಿತೀಯ ಪಿ.ಯು.ಸಿ ಓದುತ್ತಿರುವ ಇದೇ ಕಾಲೇಜಿನ ಕೆಲವು ವಿದ್ಯಾರ್ಥಿಗಳು ಈತನ ಕಾರಿನ ಮುಂದೆಯೇ ಹೋಗಿದ್ದು ವಿದ್ಯಾರ್ಥಿಗಳು ತಮಾಷೆ ಮಾಡಿಕೊಂಡು ಹೋಗಿದ್ದಾರೆ.
Karwar | ರಾತ್ರೋ ರಾತ್ರಿ ಮತ್ತೆ ಜೈಲಿನಲ್ಲಿ ದಾಂಧಲೆ ಮಾಡಿದ ಕೈದಿಗಳು!
ಈವೇಳೆ ತನ್ನನ್ನೇ ನೋಡಿ ಗೇಲಿ ಮಾಡಿದ್ದಾರೆ ಎಂದು ತಪ್ಪಾಗಿ ತಿಳಿದ ಸಂದೀಪ್ ರವರು ಕಾರಿನಲ್ಲಿ ಅವರನ್ನು ಅಡ್ಡ ಹಾಕಿ ಅವರ ಬಳಿ ಇದ್ದ ಗನ್ ನನ್ನು ತೆಗೆದು ನಡು ರಸ್ತೆಯಲ್ಲಿ ಬೆದರಿಸಿದ್ದಾರೆ.
Ankola| ನೌಕಾನೆಲೆಯ ವಜ್ರಕೋಶದಲ್ಲಿ ಸ್ಪೋಟ |ಬಿರುಕು ಬಿಟ್ಟ ಹಲವು ಮನೆಗಳು
Be aware of me, I will shool u all ಎಂದು ಗುಂಡುಹಾಕುವ ಬೆದರಿಕೆ ಒಡ್ಡಿದ್ದಾನೆ. ಇದರಿಂದ ಬೆದರಿದ ವಿದ್ಯಾರ್ಥಿಗಳು ನಂತರ ಕಾರವಾರ ನಗರ ಠಾಣೆಗೆ ಹೋಗಿ ದೂರು ನೀಡಿದ್ದಾರೆ.

ಇನ್ನು ದೂರು ದಾಖಲಿಸಿಕೊಂಡ ಪೊಲೀಸರು ಸ್ಥಳಕ್ಕೆ ತೆರಳಿ ಸುತ್ತಮುತ್ತಲ ಸಿ.ಸಿ ಕ್ಯಾಮರಾ ದೃಶ್ಯಾವಳಿ ವೀಕ್ಷಿಸಿದಾಗ ಘಟನೆ ನಡೆದಿರುವುದು ಸಾಬೀತಾಗಿದ್ದು, ಆತನನ್ನು ಪತ್ತೆಮಾಡಿ ಕೃತ್ಯಕ್ಕೆ ಬಳಸಿದ ಏರ್ ಗನ್ , ಥಾರ್ ಕಾರ್ ನನ್ನು ವಶಕ್ಕೆ ಪಡೆದಿದ್ದಾರೆ.ಇನ್ನು ಈ ಕುರಿತು ತನಿಖೆ ಕೈಗೊಳ್ಳಲಾಗಿದೆ.
Uttara kannada|ದಾಂಡೇಲಿಗೆ ಮತ್ತೆ ಹಳಿ ಏರಿದ ಪ್ರಯಾಣಿಕರ ರೈಲು|ಹೊಸ ಡೆಮು ವೇಳಾಪಟ್ಟಿ ಪ್ರಕಟ
ಇನ್ನು ಸಂದೀಪ್ ರವರು ಅನುಮತಿ ಪಡೆಯದೇ ಏರ್ ಗನ್ ನನ್ನು (ಪಿಸ್ತೂಲ್ ರೀತಿಯ ಏರ್ ಗನ್) ಇಟ್ಟಿಕೊಂಡಿದ್ದು ಈ ಕುರಿತು ಕಾರವಾರ ನಗರ ಠಾಣೆಯಲ್ಲಿ ಕಲಂ 126 (2) 351(1), ಭಾರತೀಯ ನ್ಯಾಯ ಸಂಹಿತೆ 2023 ಹಾಗೂ 3,25,ಭಾರತ ಆಯುಧ ಅಧಿನಿಯಮ 1959 ನಡಿ ಪ್ರಕರಣ ದಾಖಲಾಗಿದೆ.

