Ankola: ಲಾರಿ-ಬಸ್ ಮುಖಾಮುಖಿ ಡಿಕ್ಕಿ ಸ್ಥಳದಲ್ಲೇ ಇಬ್ಬರು ಸಾವು- ಎಂಟಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
 
                        'Ankola: Lorry and KSRTC bus collide head-on at Kanchinabagilu. Two dead on the spot, over eight passengers injured. Police register a case
                
 
        
                07:07 PM Sep 18, 2025 IST 
                    | 
                            ಶುಭಸಾಗರ್
                
                 
    
                
                
    
    
             
             
             
    
     
            
         
        
    
    
    
        
        
         
 
            
    
      
    Ankola: ಲಾರಿ-ಬಸ್ ಮುಖಾಮುಖಿ ಡಿಕ್ಕಿ ಸ್ಥಳದಲ್ಲೇ ಇಬ್ಬರು ಸಾವು- ಎಂಟಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
                 Advertisement 
                
  
 
            
        
ಕಾರವಾರ :- ಲಾರಿ ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿ ಯಾಗಿ ಇಬ್ಬರ ಸ್ಥಳದಲ್ಲೇ ಸಾವುಕಂಡು ,ಎಂಟುಜನರಿಗೆ ಗಂಭೀರ ಗಾಯವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66 ರ ಕಂಚಿನಬಾಗಿಲು ಬಳಿ ನಡೆದಿದೆ.
ಅಂಕೋಲಾದಿಂದ ಯಲ್ಲಾಪುರ ಕಡೆಗೆ ಹೋಗುತ್ತಿದ್ದ ಲಾರಿ ನಿರ್ಲಕ್ಷದಿಂದ ಅತೀ ವೇಗದಲ್ಲಿ ಚಲಾಯಿಸಿಕೊಂಡು ಬಂದಿದ್ದು ಎದುರಿಗೆ ಬರುತಿದ್ದ ಬಸ್ ಗೆ ಏಕಾ ಏಕಿ ಡಿಕ್ಕಿಹೊಡೆಸಿದ್ದಾನೆ.
                 Advertisement 
                
  
 
            
        ಅಪಘಾತದಲ್ಲಿ ಲಾರಿ ಚಾಲಕ ಹಾಗೂ ಬಸ್ ನಲ್ಲಿದ್ದ ಕೇಣಿ ಮೂಲದ ಭಾಸ್ಕರ್ ಪಾಂಡುರಂಗ ಗಾಂವ್ಕರ್ ಒರ್ವ ಸಾವು ಕಂಡಿದ್ದಾರೆ.ಗಾಯಗೊಂಡ ಎಂಟು ಜನರನ್ನು ಪ್ರಥಮ ಚಿಕಿತ್ಸೆಗಾಗಿ ಅಂಕೋಲಾ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕಳುಹಿಸಿಕೊಡಲಾಗುತ್ತಿದೆ.
ಘಟನೆ ಸಂಬಂಧ ಅಂಕೋಲಾ ಪೊಲೀಸರು ಸ್ಥಳಕ್ಕೆ ಭೇಟಿ, ನೀಡಿ ಪ್ರಕರಣ ದಾಖಲು ಮಾಡಿದ್ದಾರೆ.
                 Advertisement 
                
 
            
         Next Article   
        
                 Advertisement