Karwar|ವಯಸ್ಸಾದರೂ ವಿವಾಹವಾಗದೇ ಮನನೊಂದ ವ್ಯಕ್ತಿ ಚಾಕು ಇರಿದುಕೊಂಡು ಆತ್ಮಹತ್ಯೆ ಗೆ ಯತ್ನ
Karwar|ವಯಸ್ಸಾದರೂ ವಿವಾಹವಾಗದೇ ಮನನೊಂದ ವ್ಯಕ್ತಿ ಚಾಕು ಇರಿದುಕೊಂಡು ಆತ್ಮಹತ್ಯೆ ಗೆ ಯತ್ನ
ಕಾರವಾರ ( 03 November 2025) :-ವಯಸ್ಸಾದರೂ ಮದುವೆಯಾಗದ ನೋವಿನಿಂದ ಕಿನ್ನತೆಗೆ ಒಳಗಾದ ವ್ಯಕ್ತಿಯೊಬ್ಬ ಮನನೊಂದು ಹೊಟ್ಟೆಗೆ ಚಾಕು ಇರಿದುಕೊಂಡು ಆತ್ಮಹತ್ಯೆ ಗೆ ಯತ್ನಿಸಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ (karwar)ನಗರದ ಮಾರುತಿ ಗಲ್ಲಿಯಲ್ಲಿ ನಡೆದಿದೆ.
ಪ್ರಜ್ಞೇಶ್ ಪ್ರಕಾಶ್ ಶೇಟ್ (45) ಆತ್ಮಹತ್ಯೆ ಗೆ ಯತ್ನಿಸಿದ ವ್ಯಕ್ತಿ ಯಾಗಿದ್ದು, ಈತ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದು ,ಕುಟುಂಬದಿಂದ ಪ್ರತ್ತೇಕವಾಗಿ ವಾಸಿಸುತಿದ್ದನು . ವಯುಸ್ಸು 45 ಆದರೂ ವಿವಾಹ ಆಗಿರಲಿಲ್ಲ. ಇದರಿಂದ ಮನನೊಂದಿದ್ದ ಈತ ,ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆ ಗೆ ಪ್ರಯತ್ನಿಸಿದ್ದಾನೆ .ತಕ್ಷಣ ಅಸ್ವಸ್ತನಾದ ಪ್ರಜ್ಞೇಶ್ ರನ್ನು ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಘಟನೆ ಸಂಬಂಧ ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.