Ankola| ಹೆಂಡತಿ ಹಬ್ಬಕ್ಕೆ ಬರಲಿಲ್ಲ -ಪತಿ ಮನನೊಂದು ಆತ್ಮಹತ್ಯೆ
Ankola| ಹೆಂಡತಿ ಹಬ್ಬಕ್ಕೆ ಬರಲಿಲ್ಲ -ಪತಿ ಮನನೊಂದು ಆತ್ಮಹತ್ಯೆ
Ankola (22 october 2025) :-ಒಂದೆಡೆ ಮಾಡಿಕೊಂಡ ಸಾಲಭಾದೆ,ಮತ್ತದೆಡೆ ದೀಪಾವಳಿ ಹಬ್ಬಕ್ಕೆ ಪತ್ನಿ ಮನೆಗೆ ಬಾರದ ಕಾರಣ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಅಂಕೋಲದಲ್ಲಿ (ankola)ನಡೆದಿದೆ.
ಅಂಕೋಲ (ankola)ತಾಲೂಕಿನ ಬಾವಿಕೇರಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಶಿವಾನಂದ ಶಂಕರ ಆಗರ (34) ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ.
Ankola| ಪುರಸಭೆಯಲ್ಲಿ ಕರ್ತವ್ಯ ಲೋಪ ಅಧಿಕಾರ ದುರುಪಯೋಗ ಲೋಕಾಯುಕ್ತರಲ್ಲಿ ದೂರು: ಮಂಜುನಾಥ ನಾಯ್ಕ
ಕೂಲಿ ಕೆಲಸ ಮಾಡಿಕೊಂಡಿದ್ದ ಈತ ವ್ಯವಹಾರಕ್ಕಾಗಿ ಸಾಲ ಮಾಡಿಕೊಂಡಿದ್ದನು .ಇನ್ನು ಸಂಸಾರದಲ್ಲಿ ಸಹ ಆರ್ಥಿಕ ಪರಿಸ್ಥಿತಿಯ ಬಿಸಿ ಮುಟ್ಟಿದ್ದು ಪತ್ನಿ ಸಹ ತವರುಮನೆಗೆ ತೆರಳಿದ್ದಳು.
ಇನ್ನು ಸಾಲ ತೀರಸಲಾಗದೇ ಮನನೊಂದಿದ್ದ ಈತ ದೀಪಾವಳಿ ಹಬ್ಬ ಬಂದರೂ ಪತ್ನಿ ಮನೆಗೆ ಬಾರದಿರುವುದರಿಂದ ಮನನೊಂದಿದ್ದು ,ಮಂಗಳವಾರ ಮನೆಯ ಬಾಗಿಲು ಹಾಕಿಕೊಂಡು ,ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಘಟನೆ ಸಂಬಂಧ ಮೃತನ ಸಹೋದರಿ ಭಾರತಿಯವರು ಅಂಕೋಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು , ತನಿಖೆ ಕೈಗೊಳ್ಳಲಾಗಿದೆ.