For the best experience, open
https://m.kannadavani.news
on your mobile browser.
Advertisement

Ankola :ನಿಲ್ಲಿಸಿಟ್ಟ ಕಾರಿನಲ್ಲಿ ಒಂದು ಕೋಟಿಗೂ ಹೆಚ್ಚು ಹಣ ಪತ್ತೆ

ಕಾರವಾರ:- ನಿರ್ಜನ ಪ್ರದೆಶದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಒಂದು ಕೊಟಿ ಹದಿನೈದು ಲಕ್ಷ ರೂಪಾಯಿ ಪತ್ತೆಯಾದ ಘಟನೆ ಅಂಕೋಲದ ರಾಮನಗುಳಿ ಬಳಿಯ ರಾಷ್ಟ್ರಿಯ ಹೆದ್ದಾರಿ ಪಕ್ಕದ ನಿರ್ಜನ ಪ್ರದೇಶದಲ್ಲಿ ನಡೆದಿದೆ.
11:55 PM Jan 28, 2025 IST | ಶುಭಸಾಗರ್
ankola  ನಿಲ್ಲಿಸಿಟ್ಟ ಕಾರಿನಲ್ಲಿ ಒಂದು ಕೋಟಿಗೂ ಹೆಚ್ಚು ಹಣ ಪತ್ತೆ
Ankola: More than one crore rupees found in a parked car
ಪ್ರಕೃತಿ ಮೆಡಿಕಲ್ ,ಕಾರವಾರ.

Ankola :ನಿಲ್ಲಿಸಿಟ್ಟ ಕಾರಿನಲ್ಲಿ ಒಂದು ಕೋಟಿಗೂ ಹೆಚ್ಚು ಹಣ ಪತ್ತೆ

Advertisement

ಕಾರವಾರ:- ನಿರ್ಜನ ಪ್ರದೆಶದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಒಂದು ಕೊಟಿ ಹದಿನೈದು ಲಕ್ಷ ರೂಪಾಯಿ ಪತ್ತೆಯಾದ ಘಟನೆ ಅಂಕೋಲದ (ankola) ರಾಮನಗುಳಿ ಬಳಿಯ ರಾಷ್ಟ್ರಿಯ ಹೆದ್ದಾರಿ ಪಕ್ಕದ ನಿರ್ಜನ ಪ್ರದೇಶದಲ್ಲಿ ನಡೆದಿದೆ.

ಸಂಜೆಯಿಂದ ನಿರ್ಜನ ಪ್ರದೇಶದಲ್ಲಿ ಕಾರನ್ನು ಪಾರ್ಕ್ ಮಾಡಲಾಗಿತ್ತು, ಈ ಬಗ್ಗೆ ಅಂಕೋಲಾ ಪೊಲೀಸರಿಗೆ ಮಾಹಿತಿ ಸಿಗುತ್ತಿದ್ದಂತೆ ಪರಿಶೀಲನೆಗೆ ಬಂದ ಪೊಲೀಸರು ಕಾರಿ ಡೊರ್ ಓಪನ್ ಮಾಡಿ ಪರಿಶೀಲನೆ ವೇಳೆ ಒಂದು ಕೋಟಿ ರೂಪಾಯಿ ಪತ್ತೆಯಾಗಿದೆ.

ಅಂಕೋಲ ಠಾಣೆಯಲ್ಲಿ ಇರಿಸಿದ ಕಾರು

ಅಂಕೋಲ ಠಾಣೆಗೆ ಈ ಕಾರನ್ನು ತೆಗೆದುಕೊಂಡು ಬಂದಿದ್ದು ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ:-Ankola: PDO ಮನೆಯಲ್ಲಿದ್ದ ಮೂರ್ತಿ ಕದ್ದ ಆರೋಪಿಗಳ ಬಂಧನ

ಇನ್ನು ಸಿಕ್ಕ ಕಾರು ಕ್ರಿಟಾ ಕಾರಾಗಿದ್ದು ನಂಬರ್ ನನ್ನು ಪರಿಶೀಲಿಸಿದಾಗ ಹೊಂಡಾ ಅಲ್ಟ್ರೋಸ್ ನ ನೊಂದಣಿ ಸಂಖ್ಯೆ ತೋರಿಸುತಿದ್ದು ,ಫೇಕ್ ನಂಬರ್ ಪ್ಲೇಟ್ ಬಳಸಿರುವ ಶಂಕೆ ವ್ಯಕ್ತವಾಗಿದೆ.

ಅಂಕೋಲ ಬಾಳೆಗುಳಿಯಲ್ಲಿ ಸಿಕ್ಕ ಕಾರು

ಘಟನೆ ಏನು?

ಕೆಎ 51 ಎಮ್.ಬಿ 9634 ನಂಬರ್ ಪ್ಲೇಟಿನ ಅನುಮಾನಾಸ್ಪದವಾಗಿ ನಿಂತ ಕಾರು ಇದಾಗಿದ್ದು ಕಾರಿನ ರಿಜಿಸ್ಟ್ರೇಷನ್ ನಂಬರ್ ನ್ನು ಪರಿಶೀಲಿಸಿದಾಗ ಆಲ್ಟ್ರೋಜ್ ಕಾರು ಎಂದು ತೋರಿಸುತ್ತಿದ್ದು
ಮಡಿಕೇರಿ ಆರ್.ಟಿ.ಓ ಪಾಸಿಂಗ್ ಹೊಂದಿದೆ.

ಇದನ್ನೂ ಓದಿ:-Ankola ಕರ್ತವ್ಯದಲ್ಲಿದ್ದ ಪೊಲೀಸ್ Police Constable ಹೃದಯಾಘಾತದಿಂದ ಸಾವು.

ಅಸಲಿಗೆ ಇದು ಕ್ರೇಟಾ ಕಾರಾಗಿದ್ದು, ಇದು ಹಲವು ಸಂಶಯಗಳಿಗೆ ಕಾರಣವಾಗಿದೆ. ಈ ಕಾರಿನ ಬೋನಟ್, ಡಿಕ್ಕಿ ತೆರೆದ ಸ್ಥಿತಿಯಲ್ಲಿದ್ದು, ಕಾರಿನ ಸೀಟ್ ಕಿತ್ತು ಹೊರಗೆ ಬಿದ್ದಿರುವ ಸ್ಥಿತಿಯಲ್ಲಿ, ಕಿಟಕಿ ಗಾಜುಗಳು ಒಡೆದ ಸ್ಥಿತಿಯಲ್ಲಿರುವುದು ಕಂಡುಬಂದಿದೆ.

ಹಣ ಸಿಕ್ಕ ಕಾರಿನ ಸೀಟಿನ ಭಾಗ

ಈ ವಿಷಯವನ್ನು ಸ್ಥಳೀಯರು ಅಂಕೋಲಾ ಪೋಲಿಸ್ ಠಾಣೆಗೆ ಮಾಹಿತಿ ನೀಡಿದಾಗ ತಕ್ಷಣ ಸ್ಥಳಕ್ಕೆ ಆಗಮಿಸಿದ ಸಿಪಿಐ ಚಂದ್ರಶೇಖರ ಮಠಪತಿ, ಪಿಎಸ್ಐ ಉದ್ದಪ್ಪ ಧರೇಪ್ಪನವರ್, ಪಿಎಸ್ಐ ಸುನೀಲ್, ಎ.ಎಸ್.ಐ ರಿತೇಶ ನಾಗೇಕರ್, ಹವಾಲ್ದಾರ ಸಂತೋಷ ಹಾಗೂ ಸಿಬ್ಬಂದಿಗಳು ಮಾಹಿತಿ ಪಡೆದು ಪರಿಶೀಲಿಸಿ, ಪಂಚನಾಮೆ ಮಾಡಿ ಕಾರನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಕಾರಿನಲ್ಲಿ ಕಬ್ಬಿಣದ ಬಾಕ್ಸ್ ಸಿಕ್ಕಿದ್ದು ಅದನ್ನು ತೆರೆದು ನೋಡಿದಾಗ ಅದರಲ್ಲಿ 1ಕೋಟಿ 15 ಲಕ್ಷ ಹಣ ಇರುವುದು ಕಂಡುಬಂದಿದೆ. ಈ ಕುರಿತು ತನಿಖೆ ನಡೆಯುತ್ತಿದ್ದು ತನಿಖೆ ಪ್ರಗತಿಯಲ್ಲಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ