ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Ankola| ಪುರಸಭೆ 19 ಸದಸ್ಯರಿಂದ ದಿಢೀರ್ ರಾಜೀನಾಮೆ !? ಅಧ್ಯಕ್ಷರು ಹೇಳಿದ್ದು ಏನು?

Ankola Municipality President and 19 members have threatened mass resignation if suspended officials accused of corruption are reinstated. The members sent letters to top Karnataka leaders, urging not to reappoint the suspended Commissioner and Engineer.
08:25 PM Oct 26, 2025 IST | ಶುಭಸಾಗರ್
Ankola Municipality President and 19 members have threatened mass resignation if suspended officials accused of corruption are reinstated. The members sent letters to top Karnataka leaders, urging not to reappoint the suspended Commissioner and Engineer.

Ankola| ಪುರಸಭೆ 19 ಸದಸ್ಯರಿಂದ ದಿಢೀರ್ ರಾಜೀನಾಮೆ !? ಅಧ್ಯಕ್ಷರು ಹೇಳಿದ್ದು ಏನು?

"ಅಂಕೋಲ ಪುರಸಭೆ ಆಡಳಿತಾಧಿಕಾರಿ ಮರು ನಿಯೋಜನೆ ಮಾಡಿದರೇ ಸಾಮೂಹಿಕ ರಾಜೀನಾಮೆ -ಪುರಸಭೆ ಅಧ್ಯಕ್ಷ "

Advertisement

ಕಾರವಾರ (26 october 2025) :- ಆಡಳಿತ ದುರುಪಯೋಗ ಹಾಗೂ ಬ್ರಷ್ಟಾಚಾರ ಆರೋಪ ಹೊತ್ತು ಅಮಾನತಾಗಿದ್ದ ಅಂಕೋಲದ(ankola) ಪುರಸಭೆ ಕಮಿಷಿನರ್ ಹಾಗೂ ಮುಖ್ಯ ಇಂಜಿನಿಯರ್ ರನ್ನು ಮರು ನೇಮಕ ಮಾಡಿದಲ್ಲಿ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಅಧ್ಯಕ್ಷರು ಹಾಗೂ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ ಅಂಕೋಲ ಪುರಸಭೆ ಅಧ್ಯಕ್ಷ ಸೂರಜ್ ಎಂ.ನಾಯ್ಕ  ಪುರಸಭೆಯ ಈ ಹಿಂದಿನ ಮುಖ್ಯಾಧಿಕಾರಿ ಎಚ್ ಅಕ್ಷತಾ ಹಾಗೂ ಕಿರಿಯ ಅಭಿಯಂತರರಾದ ಶಲ್ಯಾ ನಾಯ್ಕ ಅವರು ಹಿಂದಿನಿಂದಲೂ ಆಡಳಿತ ಮಂಡಳಿಯ ಗಮನಕ್ಕೆ ತರದೇ ಹಲವು ಕಾನೂನು ಬಾಹೀರವಾಗಿ ಕರ್ತವ್ಯವನ್ನು ನಿರ್ವಹಿಸಿ, ಕರ್ತವ್ಯಲೋಪ ಎಸಗಿದ್ದರಿಂದ ಜಿಲ್ಲಾಧಿಕಾರಿ ರವರು ಯೋಜನಾ ನಿರ್ದೇಶಕರು ಉತ್ತರ ಕನ್ನಡ, ಪೌರಾಡಳಿತ ಇಲಾಖೆ ಬೆಂಗಳೂರು ರವರಿಗೆ ನಾವೆಲ್ಲರೂ ದೂರು ನೀಡಿದ್ದ ಕಾರಣ ಈ ಕುರಿತು ಪ್ರಾಥಮಿಕ ತನಿಖೆ ನಡೆಸಿ ಕಾರಣ ಕೇಳಿ ನೋಟಿಸ್ ನೀಡಿ ಸಾಕಷ್ಟು ಕಾಲಾವಕಾಶ ನೀಡಿದ ನಂತರ ಮುಖ್ಯಾಧಿಕಾರಿ ಹಾಗೂ ಕಿರಿಯ ಇಂಜಿನಿಯರನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದರು.

Ankola| ಹೆಂಡತಿ ಹಬ್ಬಕ್ಕೆ ಬರಲಿಲ್ಲ -ಪತಿ ಮನನೊಂದು ಆತ್ಮಹತ್ಯೆ 

Advertisement

ಆದರೆ ಅಮಾನತ್ ಆದ ಅಧಿಕಾರಿಗಳು ನ್ಯಾಯಾಲದ ಮೋರೆಹೋಗಿ ಆದೇಶಕ್ಕೆ ತಡೆ ತಂದಿದ್ದು ಇರುತ್ತದೆ. ಆದರೆ ನ್ಯಾಯಾಲಯ ಅಮಾನತ ಆದ ಸ್ಥಳದಲ್ಲಿಯೇ ಮರುನಿಯೋಜನೆ ಮಾಡಬೇಕು ಎನ್ನುವ ಕುರಿತು ಸ್ಪಷ್ಟತೆ ನೀಡಿಲ್ಲ. ಇದು ಕೇವಲ ಮಧ್ಯಂತರ ಆದೇಶದವಾಗಿದೆ.

ಯಾವುದೇ ಅಧಿಕಾರಿಯೂ ಕರ್ತವ್ಯಲೋಪ ಎಸಗಿ ಅದೇ ಸ್ಥಳದಲ್ಲಿ ಮುಂದುವರೆದರೆ ಸಾಕ್ಷ್ಯನಾಶ ಅಥಾವ ಪ್ರಭಾವ ಬೀರುವ ಹಿನ್ನಲೇಯಲ್ಲಿ ಅಮಾನತ್ತು ಮಡಲಾಗುತ್ತದೆ.

Ankola :ಮರ ಕಡಿದು ಕಡಿದ ಟೊಂಗೆ ನೆಟ್ಟ ಪುರಸಭೆ ಸಿಬ್ಬಂದಿ-ಹೀಗೂ ಇರುತ್ತೆ ನೋಡಿ

ಹೀಗಿರುವಾಗ  ಈಗಾಗಲೇ ಅಮಾನತು ಆದೇಶದ ನಂತರ ಅಂಕೋಲಾ (ankoal)ಪುರಸಭೆಗೆ ಪ್ರಭಾರಿ ಮುಖ್ಯಾಧಿಕಾರಿಯನ್ನು ಸಹ ನಿಯೋಜನೆ ಮಾಡಲಾಗಿದ್ದು, ಉತ್ತಮ ಆಡಳಿತಕ್ಕೆಕಾರಣವಾಗಿದೆ.

ಹೀಗಿದ್ದು, ಹಿಂದಿನ ಮುಖ್ಯಾಧಿಕಾರಿ ಎಚ್ ಆಕ್ಷತಾ ಅವರನ್ನು ಮರುನಿಯೋಜಿಸಿದರೆ ಅವರ ಮೇಲಿನ ಆರೋಪಗಳು ಕಛೇರಿಯ ದಾಖಲೆಗೆ ಸಂಬಂಧಿಸಿದ್ದಾದ್ದರಿಂದ ಸಾಕ್ಷ್ಯನಾಶಕ್ಕೆ ಕಾರಣವಾಗಬಹುದು. ಆದ್ದರಿಂದ ಸರ್ಕಾರ ಮತ್ತು ಸಾರ್ವಜನಿಕರ ಹಣ ದುರೋಪಯೋಗಕ್ಕೆ ಆಡಳಿತವೇ ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ.

ಹಾಗಾಗಿ ನಮ್ಮ ಪುರಸಭೆಯ ಸಾರ್ವಜನಿಕ ಹಿತಾಸಕ್ತಿಯಿಂದ ಹಿಂದಿನ ಮುಖ್ಯಾಧಿಕಾರಿ ಎಚ್ ಅಕ್ಷತಾ ಅವರನ್ನು ಮರುನಿಯೋಜನೆ ಮಾಡಿದಲ್ಲಿ ಪುರಸಭೆಯ 23 ಸದಸ್ಯರ ಪೈಕಿ 19 ಸದಸ್ಯರು ಒಮ್ಮತದ ತೀರ್ಮಾನ ಕೈಗೊಂಡಿದ್ದು ಸಾಮೂಹಿಕ ರಾಜೀನಾಮೆ ಪತ್ರವನ್ನು ಈಗಾಗಲೇ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಪೌರಾಡಳಿತ ಇಲಾಖೆಯ ಸಚಿವರು, ಆಡಳಿತ ಸುಧಾರಣ ಆಯೋಗದ ಅಧ್ಯಕ್ಷರು ಜಿಲ್ಲಾ ಉಸ್ತುವಾರಿ ಸಚಿವರು, ಅಂಕೋಲಾ-ಕಾರವಾರ (ankola-karwar) ವಿಧಾನ ಸಭಾ ಕ್ಷೇತ್ರ ಹಾಗೂ ಜಿಲ್ಲಾಧಿಕಾರಿಗಳಿಗೆ ರವಾನೆಮಾಡಿದ್ದೇವೆ ಎಂದು ಅವರು ಹೇಳಿದ್ದಾರೆ.

ಸಾಮೂಹಿಕ ರಾಜಿನಾಮೆ ಸಲ್ಲಿಸಿರುವುದು

ಇನ್ನು ರಾಜೀನಾಮೆ ಪತ್ರ ಸಂಬಂಧ ಇಂದು ಪುರಸಭೆ ಸದಸ್ಯರು ಮುಖ್ಯಮಂತ್ರಿಗಳ ಭೇಟಿಗೆ ತೆರಳಿದ್ದು ಒಂದುವೇಳೆ ಅಮಾನತಾಗಿರುವ ಕಮಿಷಿನರ್ ಮರು ನೇಮಕ ಆದರೇ ತಾವು ನೀಡಿದ ಮನವಿಯೇ ರಾಜೀನಾಮೆ ಎಂದು ಅಂಗೀಕರಿಸಲು ತಿಳಿಸಿದ್ದಾರೆ.

Advertisement
Tags :
AnkolaAnkola CommissionerAnkola municipalityAnkola newsAnkola town councilBreaking newsCorruption CaseKarnataka newsKarnataka politicslocal governancemass resignationmunicipal politicspolitical protestSuraj NaikUttara Kannada
Advertisement
Next Article
Advertisement