ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Ankola:- ಪತ್ರಕರ್ತರನ್ನ ಪಕ್ಷವಾರು ಬೇರ್ಪಡಿಸಿತೇ ಜಿಲ್ಲಾ ಕಾಂಗ್ರೆಸ್ ! ಪತ್ರಕರ್ತರಿಗೂ ಬಂತು ಪಕ್ಷ ,ಜಾತಿ !

ಕಾರವಾರ :- ಏನೇ ಸುದ್ದಿಗಳು ಇರಲಿ ಪತ್ರಕರ್ತರನ್ನು ಯಾವುದೇ ಪಕ್ಷವಿರಲಿ ಆ ಪಕ್ಷದ ಜಿಲ್ಲಾ ಅಧ್ಯಕ್ಷರು ಅಥವಾ ಪಕ್ಷದ ಮುಖ್ಯ ಸ್ಥಾನದಲ್ಲಿ ಇರುವ ಪತ್ರಕರ್ತರನ್ನು ಆಹ್ವಾನಿಸುವುದು ಸರ್ವೆ ಸಾಮಾನ್ಯ.
10:22 PM Apr 12, 2025 IST | ಶುಭಸಾಗರ್

Ankola:- ಪತ್ರಕರ್ತರನ್ನ ಪಕ್ಷವಾರು ಬೇರ್ಪಡಿಸಿತೇ ಜಿಲ್ಲಾ ಕಾಂಗ್ರೆಸ್ ! ಪತ್ರಕರ್ತರಿಗೂ ಬಂತು ಪಕ್ಷ ,ಜಾತಿ !

Advertisement

ಕಾರವಾರ :- ಏನೇ ಸುದ್ದಿಗಳು ಇರಲಿ ಪತ್ರಕರ್ತರನ್ನು ಯಾವುದೇ ಪಕ್ಷವಿರಲಿ ಆ ಪಕ್ಷದ ಜಿಲ್ಲಾ ಅಧ್ಯಕ್ಷರು ಅಥವಾ ಪಕ್ಷದ ಮುಖ್ಯ ಸ್ಥಾನದಲ್ಲಿ ಇರುವ ಪತ್ರಕರ್ತರನ್ನು ಆಹ್ವಾನಿಸುವುದು ಸರ್ವೆ ಸಾಮಾನ್ಯ.

ಅದ್ರಲ್ಲೂ  ರಾಷ್ಟ್ರಮಟ್ಟದ ಪಕ್ಷಗಳು ಪ್ರತಿಭಟನೆ, ಬಂದ್ ಹೀಗೆ ಕೆಲವು ಹೋರಾಟಗಳನ್ನು ನಡೆಸುವಾಗ ಸ್ಥಳೀಯ ಹಾಗೂ ಜಿಲ್ಲಾ,ರಾಜ್ಯ ಮಟ್ಟದ ಮಾಧ್ಯಮ ಪ್ರತಿನಿಧಿಗಳಿಗೆ  ಮಾಹಿತಿ ನೀಡುತ್ತವೆ .ಇನ್ನು ಪತ್ರಿಕಾ ಗೋಷ್ಟಿಗಳು ಸಹ ಮಾಹಿತಿ ನೀಡಿ ಆಹ್ವಾನಿಸಿದ ನಂತರ ನಡೆಯುವುದು ವಾಡಿಕೆ.

ಆದರೇ ಇತ್ತೀಚಿನ ದಿನದಲ್ಲಿ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಪತ್ರಕರ್ತರನ್ನು ಸಹ ಜಾತಿವಾರು, ಪಕ್ಷವಾರು ಬೇರ್ಪಡಿಸುವ ಕಾಯಕಕ್ಕೆ ಕೈ ಹಾಕಿದಂತಿದೆ.

Advertisement

ಹೌದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿಗಾವಂಕರ್ ರವರು ಅಂಕೋಲದಲ್ಲಿ ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರೋಧಿ ಪ್ರತಿಭಟನೆಯಲ್ಲಿ ಕಾರವಾರ ಮತ್ತು ಅಂಕೋಲ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಮಾಧ್ಯಮಗಳಿಗೆ ಆಹ್ವಾನಿಸಿದ್ದರು. ಆದರೇ ಕೇವಲ ಕೆಲವೇ ಮಾಧ್ಯಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಕರೆಸಿದ್ದಾರೆ. ಈ ನಡೆ ಏಕೆ ಎಂದು ಕೆಲವು ಮಾಧ್ಯಮ ಪ್ರತಿನಿಧಿಗಳು ಮೂಲಗಳ ಮಾಹಿತಿ ಕಲೆಹಾಕಿದಾಗ ಈ ಹಿಂದೆ ಅಧ್ಯಕ್ಷರು ಮಾಧ್ಯಮಗಳ ಪಟ್ಟಿಯನ್ನು ಮಾಧ್ಯಮ ಪ್ರತಿನಿಧಿಗಳ ಬಳಿ ಪಡೆದುಕೊಂಡಿದ್ದಾರೆ.

ಆದರೇ ಎಂದಿನಂತೆ ಎಲ್ಲರಿಗೂ ತಿಳಿಸುವ ಬದಲು ಯಾರು ತಮ್ಮ ಪಕ್ಷದ ಪರ ಇದ್ದಾರೆ ಯಾರು ವಿರೋಧ ಇದ್ದಾರೆ! ಯಾರು ಯಾವ ಜಾತಿಯವರು ಎಂಬುದನ್ನು ಹುಡಿಕಿ ಕರೆದಿದ್ದಾರೆ ಎಂಬ ಸುದ್ದಿ ಇದೀಗ ಹರಿದಾಡುತ್ತಿದೆ.

ಇದನ್ನೂ ಓದಿ:-Uttara kannda :15 ಸಾವಿರ ಲಂಚ ಪಡೆದ PDO ಗೆ ನಾಲ್ಕು ವರ್ಷ ಜೈಲು ಶಿಕ್ಷೆ!

ಇನ್ನು ಈ ಬಗ್ಗೆ ಮಾಧ್ಯಮಗಳಲ್ಲೂ ಕಾಂಗ್ರೆಸ್ ಒಡೆದು ಆಳುವ ನೀತಿ ಗೆ ಕೈ ಹಾಕಿತಾ ಎಂಬ ಬಗ್ಗೆ ಅಂಕೋಲ ಹಾಗೂ ಕಾರವಾರದ ಮಾಧ್ಯಮದಲ್ಲಿ ಸುದ್ದಿ ಗುಜಿಗುಡುತ್ತಿದೆ.

ಪ್ರಕೃತಿ ಮೆಡಿಕಲ್ ,ಕಾರವಾರ.

ಇನ್ನು ಈ ಬಗ್ಗೆ ಜಿಲ್ಲಾಧ್ಯಕ್ಷರನ್ನು ಕೇಳಿದ್ರೆ ನಮ್ಮಕಡೆಯಿಂದ ಪತ್ರಕರ್ತರೊಬ್ಬರಿಗೆ ಎಲ್ಲಾರಿಗೂ ಹೇಳಲು ಹೇಳಿದ್ದೆವು ಆದ್ರೆ ಅವರು ಹೇಳಿಲ್ಲ ಎಂದರು.ಆ ಪತ್ರಕರ್ತ ಎಲ್ಲರಿಗೂ ಹೇಳಲು ಕಾಂಗ್ರೆಸ್ ಪಕ್ಷದ ವಕ್ತಾರರೇ ಎಂದು ಕೇಳಿದರೇ ಅದು ಕಾಂಗ್ರೆಸ್ ಪಕ್ಷದಿಂದ ಮಾಡಿದ ಪ್ರತಿಭಟನೆ ಅಲ್ಲ,ಮಹಿಳಾ ಕಾಂಗ್ರೆಸ್ ನಿಂದ ಮಾಡಿದ್ದು ನಮಗೆ ಸಮ್ಮಂದ ಇಲ್ಲ ಎಂದರು. ಮಹಿಳಾ ಕಾಂಗ್ರೆಸ್ ಏನಾದರೂ ಬೇರೆ ಇದೆಯಾ ? ಅದು ರಾಜ್ಯ ಕಾಂಗ್ರೆಸ್ ಗೆ ಸೇರುವುದಿಲ್ಲವೇ? ಪ್ರತಿಭಟನೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಭಾಗಿ ಆಗಿಲ್ಲವೇ ಎಂಬ ಪ್ರಶ್ನೆಗೆ ಮಾತ್ರ ಉತ್ತರ ಸಿಕ್ಕಿಲ್ಲ. ಇನ್ನು ಹೀಗೆ ಪತ್ರಕರ್ತರನ್ನು ವಿಭಾಗಿಸಿ ಕರೆಯುವುದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿದೆ.

ಹೀಗೆ ಪತ್ರಕರ್ತರನ್ನ ಪ್ರತ್ತೇಕಿಸಿ ಆಹ್ವಾನಿಸುವ ಈ ಕೆಟ್ಟ ಬೆಳವಣಿಗೆ ಸರಿಯಲ್ಲ ಎಂಬುದು ಎಲ್ಲಾ ಪತ್ರಕರ್ತರ ಒಮ್ಮತದ ಅಭಿಪ್ರಾಯ . ಮುಂದಾದದರೂ ಈಗಿನ ಅಧ್ಯಕ್ಷರು ಸಮ್ಮಂದ ಪಟ್ಟವರು ತಿದ್ದಿಕೊಳ್ಳಲಿ ,ಪತ್ರಕರ್ತರನ್ನು ವಿಭಾಗಿಸುವ ಕೆಟ್ಟ ಸಂಪ್ರದಾಯ ಕೊನೆಗೊಳ್ಳಲಿ ಎಂಬುದು ನಮ್ಮ ಆಶಯ.

Advertisement
Advertisement
Next Article
Advertisement