Ankola|ಎಣ್ಣೆ ಸಾಗಿಸುತ್ತಿದ್ದ ಲಾರಿ ಪಲ್ಟಿ. ನೂರಾರು ಲೀಟರ್ ಅಡುಗೆ ಎಣ್ಣೆ ರಸ್ತೆ ಪಾಲ
Ankola|ಎಣ್ಣೆ ಸಾಗಿಸುತ್ತಿದ್ದ ಲಾರಿ ಪಲ್ಟಿ. ನೂರಾರು ಲೀಟರ್ ಅಡುಗೆ ಎಣ್ಣೆ ರಸ್ತೆ ಪಾಲು ಅಂಕೋಲಾ(october 12) : ಉತ್ತರಕನ್ನಡ ಜಿಲ್ಲೆಯ ಅಂಕೋಲಾ(Ankola) ತಾಲೂಕಿನ ಹಾರವಾಡದ(Harwad) ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡುಗೆ ಎಣ್ಣೆ ಸಾಗಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನಡೆದಿದೆ.
ಅಪಘಾತ ದಿಂದ ನೂರಾರು ಲೀಟರ್ ಅಡುಗೆ ಎಣ್ಣೆ ರಸ್ತೆ ಪಾಲಾಗಿದೆ.ಇನ್ನು ಲಾರಿ ಅಪಘಾತವಾಗಿ ಎಣ್ಣೆ ಪ್ಯಾಕೇಟ್ ಗಳು ರಸ್ತೆಯ ಮೇಲೆ ಬಿದ್ದ ಕಾರಣ ಕೆಲಕಾಲ ಸಂಚಾರ ಅಸ್ತವ್ಯಸ್ತವಾಯಿತು.

ಹುಬ್ಬಳ್ಳಿಯಿಂದ ಗೋವಾದತ್ತ(Hubli to Goa) ಸಾಗುತ್ತಿದ್ದ ಪ್ರಿಯಾ ಆಯಿಲ್ ಕಂಪನಿಯ ಗೂಡ್ಸ್ ಲಾರಿ ಇದಾಗಿದ್ದು ಚಾಲಕನ ಅಜಾಗರೂಕತೆ ಹಾಗೂ ಮದ್ಯ ಸೇವಿಸಿ ಚಾಲನೆ ಮಾಡಿದ್ದರಿಂದ ಈ ಅಪಘಾತ ಸಂಭವಿಸಿದೆ.
Ankola| ಅಲೆಗಳ ಅಬ್ಬರಕ್ಕೆ ದೋಣಿಗೆ ನೀರುತುಂಬಿ ಮುಳುಗಡೆ-ಲಕ್ಷಾಂತರ ಹಾನಿ
ರಸ್ತೆ ಬದಿಗೆ ಪಲ್ಟಿಯಾಗಿದ್ದಜಾಗದಲ್ಲಿ, ಲಾರಿಯಲ್ಲಿದ್ದ ಎಣ್ಣೆ ಡ್ರಮ್‌ಗಳು ರಸ್ತೆಗೆ ಬಿದ್ದಿವೆ. ಘಟನಾ ಸ್ಥಳಕ್ಕೆ ಅಂಕೋಲಾ ಠಾಣೆಯ ಪೊಲೀಸರು ತಕ್ಷಣವೇ ಭೇಟಿ ನೀಡಿ, ಸಂಚಾರ ನಿಯಂತ್ರಿಸಲು ಕ್ರಮ ಕೈಗೊಂಡಿದ್ದಾರೆ.
Ankola:ಬ್ರಿಟೀಷರ ಕಾಲದಿಂದ ಪೂಜೆ ಗೈಯುತ್ತಿರುವ ಗೋಡೆ ಗಣಪನ ಶಕ್ತಿ ಏನು ಗೊತ್ತಾ ?
ಘಟನೆ ಸಂಬಂಧ ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.