Ankola: ದೇಶಸೇವೆಗಾಗಿ 30 ಕ್ಕೂ ಹೆಚ್ಚು ಶ್ವಾನಗಳನ್ನು ನೀಡಿದ ಅಂಕೋಲದ ರಾಘವೇಂದ್ರ ಭಟ್
Ankola: ದೇಶಸೇವೆಗಾಗಿ 30 ಕ್ಕೂ ಹೆಚ್ಚು ಶ್ವಾನಗಳನ್ನು ನೀಡಿದ ಅಂಕೋಲದ ರಾಘವೇಂದ್ರ ಭಟ್
ಕಾರವಾರ:- ಆ ಸರ್ಕಾರಿ ಅಧಿಕಾರಿಗೆ ಸೈನ್ಯ ಸೇರಿ ದೇಶಸೇವೆ ಮಾಡಬೇಕು ಎಂಬ ಹಂಬಲ ಆದರೇ ಆ ಅವಕಾಶ ಸಿಗದಿದ್ದಾಗ ತಾನು ಸಾಕಿದ ಶ್ವಾನದ ಸಂತತಿಯನ್ನ ದೇಶ ಸೇವೆಗಾಗಿ ಮುಡಿಪಾಗಿಟ್ಟಿದ್ದು ಮೂವತ್ತಕ್ಕೂ ಹೆಚ್ಚು ಶ್ವಾನಗಳನ್ನು ದೇಶದ ಭದ್ರತೆಗಾಗಿ ನೀಡಿದ್ದು ಇದೀಗ ಎರಡು ಮರಿಗಳು ಸಿ.ಆರ್.ಪಿ.ಎಫ್ ತುಕಡಿಗೆ ಸೇರಲು ಸಿದ್ದವಾಗಿದೆ. ಯಾವುದು ಈ ಶ್ವಾನ ಏನಿದರ ವಿಶೇಷ ಅಂತೀರಾ ಈ ಸ್ಟೋರಿ ನೋಡಿ.
ಚಿರತೆ ವೇಗ,ಹದ್ದಿನ ಕಣ್ಣು, ಚಾಣಾಕ್ಷ ಬುದ್ದಿ,ಎಂಟೆದೆ ಬಂಟನಂತ ದೈರ್ಯ ಹೌದು ಇವು ದೇಶ ಸೇವೆಗಾಗಿ ಪಣತೊಟ್ಟ ಶ್ವಾನದ ವೈಷಿಷ್ಟ್ಯ
ಹೌದು ಈ ಶ್ವಾನಗಳು ಉತ್ತರ ಕನ್ನಡ ಜಿಲ್ಲೆಯ ಅಂಕೋಲ (ankola) ತಾಲೂಕಿನ ಬಾವಿಕೇರಿಯ ರಾಘವೇಂದ್ರ ಭಟ್ ರವರ ಮನೆಯಲ್ಲಿ ಸಾಕಿರುವ ಬೆಲ್ಝಿಯಂ ಮೆಲಿನೋಯ್ಸ್ ತಳಿಯ ಶ್ವಾನಗಳು. ನೋಟದಲ್ಲೇ ಶತ್ರುಗಳ ಹುಟ್ಟಡಗಿಸು ಛಾಯೇ ಈ ಶ್ವಾನಗಳ ಸ್ಪೆಷಾಲಿಟಿ.
ತಾವು ಸೈನ್ಯಸೇರಬೇಕು ಎಂಬ ಕನಸು ನನಸಾಗದಿದ್ದಾಗ ತನ್ನ ಶ್ವಾನಗಳಾದರರೂ ಸೈನ್ಯ ಸೇರಬೇಕು ಎಂದು ಮೊದಲ ಬಾರಿಗೆ ತಾನು ಸಾಕಿದ ಲೀಸಾ ಮತ್ತು ಟೈನಿ ಎಂಬ ಎರಡು ಶ್ವಾನಗಳ ಸಂಪೂರ್ಣ ಸಂತತಿಯನ್ನ ದೇಶ ಮತ್ತು ರಾಜ್ಯದ ಸೇವೆಗೆ ಮುಡಿಪಾಗಿರಿಸಿದ ರಾಘವೇಂದ್ರ ಭಟ್ ರವರು ತಮ್ಮ ಮಕ್ಕಳಂತೆ ಈ ಶ್ವಾನಗಳನ್ನು ಬೆಳಸಿದರು ಇದರ ಫಲವಾಗಿ ಮೊದಲ ಬಾರಿ ಹುಟ್ಟಿದ ಟೈನಿ ಶ್ವಾನದ -8 ಲೀಸಾ ಶ್ವಾನದ 9 ಮರಿಗಳನ್ನು ಆರ್ಮಿಗಳಿಗೆ ನೀಡಿದರು.
ಇದರ ಜೊತೆಗೆ 6 ವರ್ಷಗಳಲ್ಲಿ ಹುಟ್ಟಿದ 15 ಮರಿಗಳನ್ನು ರಾಜ್ಯದ ಪೊಲೀಸ್ ಇಲಾಖೆಗೆ ನೀಡಿದ್ದಾರೆ. ಅಸ್ಸಾಂ ರೈಫಲ್ ತುಕಡಿಯಲ್ಲಿ ಇವರು ನೀಡಿದ 16 ಶ್ವಾನಗಳು ದೇಶ ಸೇವೆ ಮಾಡುತಿದ್ದು ಬಾಂಬ್ ಪತ್ತೆಕಾರ್ಯ, ಮಾದಕ ವಸ್ತುಗಳ ಪತ್ತೆ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.
ಇನ್ನು ರಾಜ್ಯ ಪೊಲೀಸ್ ಇಲಾಖೆಯ ಬೆಳಗಾವಿಯ (Belagavi)ಬಾಂಬ್ ನಿಷ್ಕ್ರಿಯ ದಳದಲ್ಲಿರುವ ಇವರ ಮಾಯಾ ಎಂಬ ಶ್ವಾನವು ಎಕ್ಸ್ ಪ್ಲೋಸಿವ್ ಟ್ರೇಡ್ ನಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಇನ್ನು ಬೆಂಗಳೂರಿನ ಏರ್ ಪೋರ್ಟ , ರಾಜ್ಯದ ಬಾಂಬ್ ನಿಷ್ಕ್ರಿಯ ದಳದಲ್ಲಿ ಕರ್ತವ್ಯ ನಿರ್ವಹಿಸಿತ್ತಿವೆ.
ಇದೀಗ ಲೀಸಾ ಶ್ವಾನವು ಮೂರು ಮರಿಗಳನ್ನು ಹಾಕಿದ್ದು ಪೆಹಲ್ಗಾವ್ ದಾಳಿಯ ನಂತರ ತಮ್ಮ ಮರಿಗಳನ್ನು ಸಿ.ಆರ್.ಪಿ.ಎಫ್ ಗೆ ನೀಡಬೇಕು ಎಂಬ ಹಂಬಲದಲ್ಲಿ ರಾಘವೇಂದ್ರ ಭಟ್ ರವರು ಸಿ.ಆರ್.ಪಿ.ಎಫ್ ನ ಅಧಿಕಾರಿಗಳನ್ನು ಸಂಪರ್ಕಿಸಿದ್ದರು. ಉತ್ತಮ ಶ್ವಾನದ ಹುಡುಕಾಟದಲ್ಲಿ ಇದ್ದ ಸಿ.ಆರ್.ಪಿ.ಎಫ್ ಅಧಿಕಾರಿಗಳು ತಕ್ಷಣ ಇವರ ಮನೆಗೆ ಆಗಮಿಸಿ ಮರಿಗಳನ್ನು ತಪಾಸಣೆ ಮಾಡಿದಾಗ ಉತ್ತಮ ಆರೋಗ್ಯ ,ಚುರುಕುತನದಿಂದ ಕೂಡಿದ ಭಲಶಾಲಿಯಾದ ಬೆಲ್ಝಿಯಂ ಮೆಲಿನೋಯ್ಸ್ ನ ಎರಡು ಮರಿಗಳು ಆಯ್ಕೆಯಾಗಿದ್ದು ಉಚಿತವಾಗಿ ದೇಶಸೇವೆಗಾಗಿ ಈ ಮರಿಗಳನ್ನು ಸಿ.ಆರ್.ಪಿ.ಎಫ್ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ ರಾಘವೇಂದ್ರ ಭಟ್.
ಕಾರವಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಯಾಗಿರುವ ರಾಘವೇಂದ್ರ ಭಟ್ ರವರು ಹವ್ಯಾಸಕ್ಕಾಗಿ ಕಳೆದ 25 ವರ್ಷಗಳಿಂದ ಹಲವು ತಳಿಯ ಶ್ವಾನಗಳನ್ನು ಸಾಕಿದ್ದರು.
ಈಗ ಇವರ ಬಳಿ ಬೆಲ್ಝಿಯಂ ಮೆಲಿನೋಯ್ಸ್ ಒಟ್ಟು ಐದು ಶ್ವಾನಗಳಿದ್ದು, ಇವುಗಳಲ್ಲಿ ಮೂರು ಹೆಣ್ಣು ,ಎರಡು ಗಂಡುಗಳಿವೆ. ಇವುಗಳ ಮರಿಗಳೆಲ್ಲವೂ ದೇಶಸೇವೆಗೆ ಮುಡಿಪಾಗಿಡಲಾಗಿದೆ. ಲೀಸಾ ಶ್ವಾನದ ಎರಡು ಮರಿಗಳನ್ನು ಬೆಂಗಳೂರಿನ ಸಿ.ಆರ್.ಪಿ.ಎಫ್ ನ ಡಾಗ್ ಬ್ರೀಡ್ ಸೆಂಟರ್ ಗೆ ಕರೆದೊಯ್ಯಲಾಗುತಿದ್ದು ಇಲ್ಲಿ ಒಂದು ವರ್ಷಗಳ ತರಬೇತಿ ನೀಡಿದ ನಂತರ ಮಾದಕ ವಸ್ತು ಪತ್ತೆ,ಬಾಂಬ್ ಪತ್ತೆ ಕಾರ್ಯಕ್ಕೆ ಇವುಗಳ ನಿಯೋಜನೆಯಾಗಲಿದ್ದು ನಕ್ಸಲ್ ನಿಗ್ರಹ ಪಡೆಯಲ್ಲಿ ಈ ಶ್ವಾನದ ಮರಿಗಳು ಕಾರ್ಯ ನಿರ್ವಹಿಸಲಿದೆ.
ಇದನ್ನೂ ಓದಿ:-Shirur :ಗುಡ್ಡ ಕುಸಿತದಲ್ಲಿ ಮಾಲೀಕನನ್ನು ಕಳೆದುಕೊಂಡು ಅನಾಥವಾಗಿದ್ದ ಶ್ವಾನ ಮ್ಯಾರಥಾನ್ ನಲ್ಲಿ ಓಟ :ಬೆಳ್ಳಿ ಪದಕ
ದೇಶದ ಸೈನ್ಯದ (Army) ಪ್ರತಿ ಒಂದು ತುಕಡಿಗಳಿಗೆ 14 ಶ್ವಾನಗಳ ಅವಷ್ಯಕತೆ ಇರುತ್ತವೆ. ಇವುಗಳು ಯೋಧರ ಜೀವ ರಕ್ಷಣೆಯ ಹೊಣೆ ಹೊರುವ ಜೊತೆ ಬಾಂಬ್ ಪತ್ತೆ ಕಾರ್ಯ , ಮಾದಕ ವಸ್ತುಗಳ ಪತ್ತೆ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇತ್ತೀಚಿನ ದಿನದಲ್ಲಿ ಸೈನ್ಯಕ್ಕೆ ಉತ್ತಮ ತಳಿಯ ಶ್ವಾನಗಳ ಅವಷ್ಯಕತೆ ಹೆಚ್ಚಿವೆ.ಇತ್ತೀಚಿನ ದಿನದಲ್ಲಿ ಶ್ವಾನಗಳ ತರಬೇತಿಯಲ್ಲಿ ಮಾದಕ ವಸ್ತು,ಬಾಂಬ್ ಪತ್ತೆ ಕಾರ್ಯದ ಜೊತೆ ದ್ರೋಣ್ ಪತ್ತೆಕಾರ್ಯ ಸಹ ಮಾಡುತ್ತಿವೆ. ಒಟ್ಟಿನಲ್ಲಿ ಹಳ್ಳಿಯ ಒಂದು ಮೂಲೆಯಲ್ಲಿರುವ ಈ ಶ್ವಾನಗಳು ತನ್ನ ಇಡೀ ಕುಟುಂಬವನ್ನೇ ದೇಶ ಸೇವೆಗಾಗಿ ನೀಡಿರುವುದು ನಿಜವಾಗಿಯೂ ಶ್ಲಾಘನೀಯ.