ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Honnavara ಗರ್ಭಧರಿಸಿದ್ದ ಗೋಹತ್ಯೆ ಮಾಡಿದ್ದ ಓರ್ವ ಆರೋಪಿ ಬಂಧನ ! ಕೆಂಡ ಹಿಡಿದು ನಿಂತವರ ಸುತ್ತಾ ಹಲವು ಪ್ರಶ್ನೆ? ಏನದು

03:10 PM Jan 25, 2025 IST | ಶುಭಸಾಗರ್
Honnavara news

Honnavara news :-ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ(honnavara) ತಾಲೂಕಿನ ಸಾಲ್ಕೋಡು ಗ್ರಾಮದ ಅರಣ್ಯದಲ್ಲಿ ಗರ್ಭಧರಿಸಿದ್ದ ಗೋ ಹತ್ಯೆ ಮಾಡಿ ಮಾಂಸ ಕದ್ದೊಯ್ದ ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ಹೊನ್ನಾವರ ಪೊಲೀಸರು ಬಂಧಿಸಿದ್ದಾರೆ.ಹೊನ್ನಾವರ ತಾಲೂಕಿನ ವಲ್ಕಿಯ ತೌಪಿಕ್ ಅಹ್ಮದ್ ಜಿದ್ದಾ ಬಂಧಿತ ಆರೋಪಿ.

Advertisement

ಜನವರಿ 19 ರಂದು ಗರ್ಭಧರಿಸಿದ್ದ ಗೋವಿನ ವಧೆ ನಡೆಸಿ ರುಂಡ ,ಕಾಲುಗಳನ್ನು ಬಿಟ್ಟು ಗೋಮಾಂಸ ಹಾಗೂ ಹೊಟ್ಟೆಯಲ್ಲಿ ಇದ್ದ ಕರುವಿನ ಮಾಂಸ ಹೊತ್ತೊಯ್ದಿದ್ದರು. ಈ ಕುರಿತು ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಸ್.ಪಿ ಎಂ ನಾರಾಯಣ್ ರವರು ಆರು ವಿಶೇಷ ತಂಡ ರಚಿಸಿ ತನಿಖೆ ಕೈಗೊಂಡಿದ್ದರು.

ಹೊನ್ನಾವರದ(honnavara) ಸಾಲ್ಕೋಡು ಗ್ರಾಮದಲ್ಲಿ ನಡೆದಿದ್ದ ಕೃತ್ಯದಲ್ಲಿ ಬಂಧಿತ ಆರೋಪಿಯು ವಧೆಗೆ ಸಹಕರಿಸು ಜೊತೆ ಬೈಕ್ ಮೂಲಕ ಮಾಂಸವನ್ನು ಕೊಂಡೊಯ್ದಿದ್ದನು. ಇನ್ನು ಕೃತ್ಯದಲ್ಲಿ ಭಾಗಿಯಾದ ಮೂರು ಜನರನ್ನು ಬಂಧಿಸಬೇಕಿದ್ದು ಸದ್ಯ ತನಿಖೆ ಪ್ರಗತಿಯಲ್ಲಿದೆ.

ಗೋಹತ್ಯೆ ನಿಗ ಇಡಬೇಕಾದವರು ಎಲ್ಲಿ? ಪೊಲೀಸರಿಗೆ ಮಾತ್ರ ಜವಬ್ದಾರಿಯೇ?

ಉತ್ತರ ಕನ್ನಡ ಜಿಲ್ಲೆಯಲ್ಲಿ ಗೋಹತ್ಯೆಗಳು,ಗೋ ಸಾಗಾಟ ನಿರಂತರವಾಗಿ ನಡೆಯುತ್ತಲೇ ಬಂದಿದೆ. ಇತ್ತೀಚಿನ ದಿನದಲ್ಲಿ ಗೋವು ಕಳ್ಳಸಾಗಾಣಿಕೆಯನ್ನು ತಡೆಯಲು ಪೊಲೀಸ್ ಇಲಾಖೆ ಮಾಹಿತಿ ಆಧರಿಸಿ ಗೋವುಗಳ ಸಾಗಾಟಕ ಮಾಡುವವವರನ್ನು ವಶಕ್ಕೆ ಪಡೆದು ಗೋ ರಕ್ಷಣೆ ಮಾಡುತ್ತಿದ್ದಾರೆ.

Advertisement

ಆದರೇ ಈ ರಕ್ಷಣೆ ಮಾಡಿದ ಗೋವುಗಳನ್ನು ಸರ್ಕಾರದಿಂದ ನಿಗದಿಯಾದ ಗೋ ಶಾಲೆಗಳಿಗೆ ಕಳುಹಿಸುವುದೇ ಕಷ್ಟವಾಗಿದೆ‌. ಒಂದೆಡೆ ಜಿಲ್ಲೆಯಲ್ಲಿ ಇರುವ ಗೋ ಶಾಲೆಗಳಲ್ಲಿ ರಕ್ಷಣೆ ಮಾಡಿದ ಗೋವುಗಳನ್ನು ತೆಗೆದುಕೊಳ್ಳಲು ಹಿಂದೆಮುಂದೆ ನೋಡಿದರೇ ,ಮೇವುಗಳ ಕೊರತೆ ಆಹಾರದ ಕೊರತೆಗಳಿದ್ದು ಸರ್ಕಾರದಿಂದ ನೀಡುತ್ತಿರುವ ಹಣ ಸಾಕಾಗುತ್ತಿಲ್ಲ. ಇನ್ನು ಖಾಸಗಿ ಗೋ ಶಾಲೆಗಳೂ ಸಹ ಇದಕ್ಕಿಂತ ಭಿನ್ನವಾಗಿಲ್ಲ. ಜಿಲ್ಲಾಡಳಿತ ,ಪಶುಸಂಗೋಪನೆ ಇಲಾಖೆ ಹಾಗೂ ತಾಲೂಕು ಆಡಳಿತದ ನಿರ್ಲಕ್ಷ ಗೋವುಗಳು ಬೀದಿಗೆ ಬೀಳುವಂತಾಗಿದ್ದು ಹೆದ್ದಾರಿ ಪಕ್ಕದ ಸ್ಥಳಗಳು ,ನಗರದ ಬೀದಿಗಳೇ ಗೋವುಗಳ ಕೊಟ್ಟಿಗೆಯಾಗಿದೆ.

ಕಸಾಯಿ ಖಾನೆಗಳ ಬಗ್ಗೆ ನಿಗವಿಲ್ಲ!

ಜಿಲ್ಲಾಡಳಿತಕ್ಕೆ ಕಸಾಯಿಖಾನೆಗಳು ಎಷ್ಟಿವೆ ಎಂದು ಮಾಹಿತಿಯೇ ಇಲ್ಲ. ಸ್ಥಳೀಯ ಆಡಳಿತ ಅಂದರೆ ನಗರಸಭೆ,ಪುರಸಭೆ,ಪಟ್ಟಣ ಪಂಚಾಯತ್ ಗಳು ಇವುಗಳ ಬಗ್ಗೆ ಗಮನ ಹರಿಸುತಿಲ್ಲ.

ಗೋವುಗಳ ಸಾಗಾಟಕ್ಕೆ ಅನುಮತಿ ಪತ್ರ ಕಡ್ಡಾಯ. ಹೀಗಿರುವಾಗ ಕಸಾಗಿ ಖಾನೆಗೆ ಹೋಗುವ ಗೋವುಗಳಿಗು ಸಹ ಅನುಮತಿ ಪತ್ರಗಳು ದೊರೆಯುತ್ತಿರುವುದು ವಿಪರ್ಯಾಸ. ಹೀಗಾಗಿ ಪೊಲೀಸರು ದಾಳಿ ಮಾಡಿದಾಗ ಅನುಮತಿ ಪತ್ರ ತೋರಿಸಿ ಕಳ್ಳರು ತಪ್ಪಿಸಿಕೊಳ್ಳುತಿದ್ದಾರೆ‌ . ಇನ್ನು ಪೊಲೀಸರು ರೈಡ್ ಮಾಡಿದರೂ ಈ ಅನುಮತಿ ಪತ್ರಗಳು (ಪಶು ಸಾಕಾಣಿಕೆಗೆ) ಪೊಲೀಸರ ಕೈ ಕಟ್ಟಿಹಾಕುತಿದ್ದು ಕಸಾಗಿಖಾನೆಗೆ ಹೋಗುತ್ತವೆ ಎಂದು ಗೊತ್ತಾದರೂ ಸುಮ್ಮನಾಗುವಂತಾಗಿದೆ.

ಇನ್ನು ಆಹಾರಕ್ಕಾಗಿ ಗೋಹತ್ಯೆಗೆ ಕೇವಲ ಒಂದೇ ಧರ್ಮದ ಜನರು ಕಾರಣವಲ್ಲ. ಅಲ್ಪ ಹಣದ ಆಸೆಗಾಗಿ ಈ ಜಾಲದಲ್ಲಿ ಎಲ್ಲಾ ಧರ್ಮದವರು ಭಾಗಿಯಾಗಿದ್ದಾರೆ.

ಇದನ್ನೂ ಓದಿ:-Honnavara ಗರ್ಭಿಣಿ ಆಕಳು ರುಂಡ ,ಕಾಲು ಕಡಿದು ,ಕರುಹತ್ಯೆ ಮಾಡಿದ ದುರುಳರು!

ಗೋ ಸಾಕಲು ಕಷ್ಟ ,ಬಂದಷ್ಟು ಹಣ ಸಿಗಲಿ ಎಂದು ಮನೆಯಲ್ಲಿ ಇರುವ ಹಾಲು ನೀಡದ ಹಸುಗಳು,ಕರು, ಕೋಣಗಳನ್ನು ಸಿಕ್ಕ ಹಣಕ್ಕೆ ಮಾರಾಟಮಾಡುತ್ತಾರೆ. ಹೀಗೆ ಅಲ್ಪ ಹಣಕ್ಕೆ ಪಡೆಯುವವರು ಒಂದೇ ಕೋಮಿನವರಲ್ಲ. ಗೋಗಳನ್ನು ಕೊಡುವವನಿಗೆ ಹಣ ಮುಖ್ಯ ಹೀಗಾಗಿ ಆತ ಎಲ್ಲದಕ್ಕೂ ಸಿದ್ದವಾಗುತ್ತಿರುವುದು ಗೋಹತ್ಯೆಗೆ ಪ್ರಮುಖ ಕಾರಣ.

ಇನ್ನು ರಸ್ತೆಯಲ್ಲಿ ಇರುವ ಹಸುಗಳನ್ನು ರಾತ್ರಿ ಕದ್ದು ಕೊಂಡೊಯ್ಯಲಾಗುತ್ತಿದೆ. ಈ ಹಸುಗಳು ರಸ್ತೆಮೇಲೆ ಇರದಂತೆ ನೋಡಿಕೊಳ್ಳಬೇಕಾದ್ದು ಸ್ಥಳೀಯ ಆಡಳಿತದ ಜವಬ್ದಾರಿ . ಈ ಜವಬ್ದಾರಿ ಮರೆತ ಆಡಳಿತ ಗೋವುಗಳ ರಕ್ಷಣೆ ಮಾಡುವ ಕಾರ್ಯ ಮರೆತಿದೆ.
ಇನ್ನು ಭಟ್ಕಳದಂತ ತಾಲೂಕಿನಲ್ಲಿ ಗೋ ಶಾಲೆಗಳಿಲ್ಲ.

ಭಟ್ಕಳದ ತಂಜಿಮ್ ಸಂಘಟನೆ ಮಾಡಿದ್ದೇನು!

ಭಟ್ಕಳದಲ್ಲಿ ತಂಜಿಮ್ ಸಂಘಟನೆ ಕೆಲವು ತಿಂಗಳ ಹಿಂದೆ ಗೋಮಾಂಸ ಭಕ್ಷಣೆ ಮಾಡದಂತೆ ಹಾಗೂ ಗೋಹತ್ಯೆ ಮಾಡದಂತೆ ತಮ್ಮವರಿಗೆ ಫೃರ್ಮಾನ್ ಹೊರಡಿಸಿತ್ತು. ಈ ಮೂಲಕ ಈ ಸಂಘಟನೆ ಇನ್ನೊಂದು ಧರ್ಮಧ ನಂಬಿಕೆಗೆ ಬೆಲೆಕೊಡುವ ಮೊದಲ ಹೆಜ್ಜೆಗೆ ಕೈಹಾಕಿತ್ತು. ಇದಲ್ಲದೇ ಹೊನ್ನಾವರದಲ್ಲಿ ನಡೆದ ಗೋ ಹತ್ಯೆ ಆರೋಪಿಗಳನ್ನು ಹುಡುಕುವಲ್ಲಿ ಸಹಾಯಮಾಡಿದೆ‌ .

ಹೀಗಿದ್ದರೂ ಭಟ್ಕಳದಲ್ಲಿ ಕೆಲವು ಮಂದಿ ಕಡಿಮೆ ಬೆಲೆಗೆ ಸಿಗುವ ಗೋವುಗಳನ್ನು ಹತ್ಯೆ ಮಾಡಿ ಮಾಂಸ ಭಕ್ಷಣೆಮಾಡುತಿದ್ದಾರೆ. ಇನ್ನು ಇವುಗಳ ಮೇಲೆ ನಿಗಾ ಇಡಬೇಕಾದ್ದು ಪುರಸಭೆ ಆಡಳಿತದ ಕರ್ತವ್ಯ. ಆದರೇ ಇದ್ಯಾವುದೂ ನಡೆದಿಲ್ಲ.

ಇನ್ನು ಜಿಲ್ಲಾಡಳಿತ ಸಹ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದೇ ತಟಸ್ತವಾಗಿದೆ‌.

ಇದನ್ನೂ ಓದಿ:-Lokayukta ride|ಉತ್ತರ ಕನ್ನಡ ಜಿಲ್ಲೆಯ ಇಬ್ಬರು ಉನ್ನತ ಅಧಿಕಾರಿಗಳ ಮನೆಯ ಮೇಲೆ ಲೋಕಾಯುಕ್ತ ದಾಳಿ.

ಕೆಂಡ ಹಿಡಿದು ನಿಂತವರು!

ಗೋ ಕಳ್ಳಸಾಗಾಟವಾಯ್ತು ಅಥವಾ ಗೋ ಹತ್ಯೆಯಾಯಿತು ಎಂದಾಕ್ಷಣ ಗೋ ಪ್ರೇಮಿಗಳನ್ನು ಬಳಸಿಕೊಂಡು ತಮ್ಮಲ್ಲಿರುವ ಕೆಂಡವನ್ನು ಗೋ ಪ್ರೇಮಿಗಳ ಒಡಲಿಗೆ ಹಾಕಿ ಬೆಂಕಿ ಹಚ್ಚಿ ಚಳಿಕಾಯಿಸಿಕೊಳ್ಳುವ ನಾಯಕರು ಕೊನೆಗೆ ಈ ಹೋರಾಟಗಾರರನ್ನು ಬಾವಿಗೆ ತಳ್ಳಿ ಮೇಲೆಬಂದ ನೀರನ್ನು ಬಳಸುವ ಜಾಯಮಾನದವರು.

ಈ ಹಿಂದೆ ಪರೇಷ್ ಮೇಸ್ತಾ ಪ್ರಕರಣದಲ್ಲಿ ಸಹ ಇದೇ ರೀತಿಯಾಗಿದ್ದು , ಹೋರಾಟ ಮಾಡಿದ ಯುವಕರು ಇಂದಿಗೂ ಕೋರ್ಟ ಅಲೆಯುತಿದ್ದಾರೆ. ನೆಪಕ್ಕೆ ಕೇಸ್ ಹಾಕಿಸಿಕೊಂಡ ನಾಯಕರು ಸರ್ಕಾರದಿಂದ ವಿನಾಯ್ತಿಯುಂಡರು.ಲಾಭ ಪಡೆದರು.

ಸಧ್ಯ ಚುನಾವಣೆ ಬಂದಿದ್ದರೇ ಇದೇ ಪ್ರಕರಣ ಸಂಘರ್ಷದ ಕಿಚ್ಚು ಹತ್ತಿಸುತಿತ್ತು.

ಸದ್ಯ ಪೊಲೀಸ್ ಇಲಾಖೆ ಜಾಣ ನಡೆ ಒಂದಿಷ್ಟು ಪ್ರಕರಣದಲ್ಲಿ ಆರೋಪಿಗಳನ್ನು ಹಿಡಿಯುವಲ್ಲಿ ಸಹಕಾರಿಯಾಗಿದೆ. ಶೀಘ್ರ ಮೂವರು ಆರೋಪಿಗಳನ್ನು ಹಿಡಿಯಲಿದ್ದು ಪ್ರಕರಣದ ಸತ್ಯಾಸತ್ಯತೆ ಹೊರಬರಲಿದೆ‌.

 

Advertisement
Tags :
AnimalProtectionArrestCowProtectionCowSlaughterCrimenewsHonnavarHonnavara newsKarnatakaNewsLawAndOrderUttara kannda
Advertisement
Next Article
Advertisement