For the best experience, open
https://m.kannadavani.news
on your mobile browser.
Advertisement

Siddapura| ಪಕ್ಕದ ಮನೆಗೇ ಕನ್ನ ಹಾಕಿದ ಬೆಂಗಳೂರು ನೆಂಟ!

Siddapura news 28 November 2024:- ಆತ ಚಿಕ್ಕಪುಟ್ಟ ಕಳ್ಳತನ ಮಾಡಿಕೊಂಡು ಬೆಂಗಳೂರು(Bangalore) ಸೇರಿ ಕೂಲಿ ಕೆಲಸ ಮಾಡಿಕೊಂಡಿದ್ದ. ಆದ್ರೆ ಊರಿಗೆ ಬಂದಾತ ಪಕ್ಕದ ಮನೆಗೇ ಕನ್ನ ಹಾಕಿ ಬಂಗಾರ ಲೂಟಿ ಮಾಡಿದ್ದ.
09:14 PM Nov 28, 2024 IST | ಶುಭಸಾಗರ್
siddapura  ಪಕ್ಕದ ಮನೆಗೇ ಕನ್ನ ಹಾಕಿದ ಬೆಂಗಳೂರು ನೆಂಟ

Siddapura news 28 November 2024:- ಆತ ಚಿಕ್ಕಪುಟ್ಟ ಕಳ್ಳತನ ಮಾಡಿಕೊಂಡು ಬೆಂಗಳೂರು(Bangalore) ಸೇರಿ ಕೂಲಿ ಕೆಲಸ ಮಾಡಿಕೊಂಡಿದ್ದ. ಆದ್ರೆ ಊರಿಗೆ ಬಂದಾತ ಪಕ್ಕದ ಮನೆಗೇ ಕನ್ನ ಹಾಕಿ ಬಂಗಾರ ಲೂಟಿ ಮಾಡಿದ್ದ.

Advertisement

ಹೌದು ಪಕ್ಕದ ಮನೆಗೆ ಕನ್ನ ಹಾಕಿ 1,26 ,000 ಮೌಲ್ಯದ 21 ಗ್ರಾಂ ಚಿನ್ನ ಕದ್ದಿದ್ದ ಬೇಡ್ಕಣಿ ಯ ಗಣೇಶ್ ಎಂಬಾತನನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ:-Siddapura : ಮಿತಿಮೀರಿದ ಆನೆ ಹಾವಳಿ ಗದ್ದೆ,ಮನೆಗಳ ಬಳಿ ಪುಂಡಾಟ.

ತಮ್ಮ ಮನೆಯ ಪಕ್ಕದಲ್ಲೇ ಇರುವ ಬೇಡ್ಕಣಿಯ ಠಾಣೆಗೇರಿಯ ಜಯಂತ್ ರಾಮಾನಾಯ್ಕ ಎಂಬುವವರ ಮನೆಗೆ ಬೀಗ ಮುರಿದು ಕನ್ನಹಾಕಿ ಬಂಗಾರ ದೋಚಿ ಪರಾರಿಯಾಗಿದ್ದ.

ಈ ಕುರಿತು ಸಿದ್ದಾಪುರ ಪೊಲೀಸ್ (siddapura police) ಠಾಣೆಯಲ್ಲಿ ದೂರು ದಾಖಲಾಗಿದ್ದು ಚಿನ್ನಾಭರಣ ಸಮೇತ ಈತನನ್ನು ಬಂಧಿಸಿದ್ದಾರೆ.

ಈತನಿಂದ 21 ಗ್ರಾಂ ಬಂಗಾರವನ್ನು (Gold) ವಶಕ್ಕೆ ಪಡೆದು ನ್ಯಾಯಾಲಯದ(Court) ವಶಕ್ಕೆ ಒಪ್ಪಿಸಲಾಗಿದೆ.

ಈ ಹಿಂದೆ ಊರಿನಲ್ಲಿ ಚಿಕ್ಕಪುಟ್ಟ ಕಳ್ಳತನ ಮಾಡುತಿದ್ದ ಈತ ಬೆಂಗಳೂರು ಸೇರಿದ್ದ. ಊರಿನವರೂ ಉದ್ದಾರ ಆಗ್ತಾನೆ ಎಂದು ತಿಳಿದು ಚಿಕ್ಕಪುಟ್ಟ ತಪ್ಪುಗಳನ್ನ ಕ್ಷಮಿಸಿದ್ದರು.ಆದ್ರೆ ಇದೀಗ ದೊಡ್ಡ ಅಪರಾಧ ಮಾಡಿ ಕಂಬಿ ಹಿಂದೆ ಸರಿದಿದ್ದಾನೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ