Fish bite death| ಮೀನು ಕಡಿದು ಚಿಕಿತ್ಸೆ ಫಲಕಾರಿಯಾಗದೇ ಯುವಕ ಸಾವು
Fish bite death| ಮೀನು ಕಡಿದು ಚಿಕಿತ್ಸೆ ಫಲಕಾರಿಯಾಗದೇ ಯುವಕ ಸಾವು

ಕಾರವಾರ (october 16):- ಮೀನುಗಾರಿಕೆಗೆ ತೆರಳಿದ್ದ ವೇಳೆ ಮೀನು ಚುಚ್ಚಿ (fish bite) ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ (karwar)ನಡೆದಿದೆ.
ಅಕ್ಷಯ ಅನಿಲ ಮಾಜಾಳಿಕರ್(24) ಮೃತಯುವಕನಾಗಿದ್ದಾನೆ. ಕಾರವಾರದ (karwar)ಮಾಜಾಳಿ ದಾಂಡೇಭಾಗದಲ್ಲಿ ಮೀನುಗಾರಿಕೆಗೆ ತೆರಳಿದ್ದ ಯುವಕಮಂಗಳವಾರ(ಅ.14) ದೋಣಿ ಮೂಲಕ ಮೀನುಗಾರಿಕೆಗೆ ತೆರಳಿದ್ದ ವೇಳೆ ದೋಣಿಯಲ್ಲಿ ಕುಳಿತಿದ್ದ ಯುವಕನಿಗೆ ಚೂಪು ಮೂತಿಯ ಕಾಂಡೆ(ತೊಳೆ) ಮೀನು ನೀರಿನಿಂದ ಜಿಗಿದು ಹೊಟ್ಟೆಗೆ ಚುಚ್ಚಿದೆ.
Karwar |ಈ ಕೆಲಸ ಸಿ.ಎಂ ಮಾಡದಿದ್ರೆ ರಾಜಕೀಯ ನಿವೃತ್ತಿ,ಯಾವ ಪಕ್ಷ ಸೇರೋಲ್ಲ ಎಂದ ಕಾರವಾರ ಸತೀಶ್ ಸೈಲ್

ನೀರಿನಿಂದ ಜಿಗಿದ 8ರಿಂದ 10 ಇಂಚು ಉದ್ದವಿದ್ದ ಮೀನಿನ ಮೂತಿ ಚುಚ್ಚಿದ ಪರಿಣಾಮ ಗಂಭೀರ ಗಾಯಗೊಂಡಿದ್ದ ಯುವಕನನ್ನು ಕಾರವಾರ ಕ್ರಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.ಕಳೆದೆರಡು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕನ ಗಾಯಕ್ಕೆ ಹೊಲಿಗೆ ಹಾಕಿ ಡಿಸ್ಚಾರ್ಜ್ ಮಾಡಲಾಗಿತ್ತು.ಡಿಸ್ಚಾರ್ಜ್ ಮಾಡಿದ್ದರೂ ನೋವಿದ್ದ ಹಿನ್ನಲೆ ಆಸ್ಪತ್ರೆಯಲ್ಲೇ ಇದ್ದ ಯುವಕ ನಿನ್ನೆ ರಾತ್ರಿ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾನೆ.
ಇನ್ನು ಮೀನಿನ ಮೂತಿ ಚುಚ್ಚಿದ ಪರಿಣಾಮ ಯುವಕನ ಕರುಳಿಗೂ ಗಾಯವಾಗಿದ್ದು ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದಲೇ ಯುವಕ ಸಾವನ್ನಪ್ಪಿದ್ದಾಗಿ ಕುಟುಂಬಸ್ಥರು ಆರೋಪ ಮಾಡಿದ್ದಾರೆ.