For the best experience, open
https://m.kannadavani.news
on your mobile browser.
Advertisement

Ashish Vidyarthi | ಕಾರವಾರದಲ್ಲಿ ನೆನಪಿನ ಬುತ್ತಿ ಬಿಚ್ಚಿಟ್ಟ ನಟ ಆಶಿಶ್ ವಿದ್ಯಾರ್ಥಿ

Ashish Vidyarthi, Ashish Vidyarthi Karwar, Karwar news, Food vlog, Celebrity visit, Bollywood actor, Kannada news, Karwar beach, Karwar food vlog, Indian food vlogger, Ashish Vidyarthi father Karwar connection, Kill movie actor, Ashish Vidyarthi travel, Local food culture, Coastal Karnataka food, Karwar fish market, Viral video, Social media influencer, Actor vlog, Karnataka news, Food tourism, Movie actor visit, Karwar memories, Travel and food, Actor nostalgia, Trending news, Entertainment news, Celebrity vlog India
02:57 PM Nov 16, 2025 IST | ಶುಭಸಾಗರ್
Ashish Vidyarthi, Ashish Vidyarthi Karwar, Karwar news, Food vlog, Celebrity visit, Bollywood actor, Kannada news, Karwar beach, Karwar food vlog, Indian food vlogger, Ashish Vidyarthi father Karwar connection, Kill movie actor, Ashish Vidyarthi travel, Local food culture, Coastal Karnataka food, Karwar fish market, Viral video, Social media influencer, Actor vlog, Karnataka news, Food tourism, Movie actor visit, Karwar memories, Travel and food, Actor nostalgia, Trending news, Entertainment news, Celebrity vlog India
ashish vidyarthi   ಕಾರವಾರದಲ್ಲಿ ನೆನಪಿನ ಬುತ್ತಿ ಬಿಚ್ಚಿಟ್ಟ ನಟ ಆಶಿಶ್ ವಿದ್ಯಾರ್ಥಿ

Ashish Vidyarthi | ಕಾರವಾರದಲ್ಲಿ ನೆನಪಿನ ಬುತ್ತಿ ಬಿಚ್ಚಿಟ್ಟ ನಟ ಆಶಿಶ್ ವಿದ್ಯಾರ್ಥಿ

ಪ್ರಕೃತಿ ಮೆಡಿಕಲ್ ,ಕಾರವಾರ.

Advertisement

ಕಾರವಾರ :-ಖ್ಯಾತ  ನಟ ಆಶಿಶ್ ವಿದ್ಯಾರ್ಥಿ ( actor Ashish Vidyarthi) ಯಾರಿಗೆ ತಾನೆ ಗೊತ್ತಿಲ್ಲ. ಈ ನಟ ಸಿನಿಮಾ ನಟನೆ ಜೊತೆ ದೇಶ ಸುತ್ತಿ ಅಲ್ಲಿನ ಆಹಾರ ಪದ್ದತಿ ಬಗ್ಗೆ ಫುಡ್ ವ್ಲಾಗಿಂಗ್‌ನಲ್ಲಿ  (food volg)ತೊಡಗಿದ್ದಾರೆ.ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್ ಮಾಡುವ ಮೂಲಕ ಮಿಲಿಯನ್ ಗಟ್ಟಲೇ ಅಭಿಮಾನಿಗಳನ್ನು ಹೊಂದಿದ್ದಾರೆ.

ದೇಶದ ನಗರ ಸುತ್ತಿ ಫುಡ್ ವಾಗ್ಲಿಂಗ್ ಮಾಡುವ ಇವರು ಇಂದು ಕಾರವಾರಕ್ಕೆ ಆಗಮಿಸಿದ್ದಾರೆ. ಕಾರವಾರದ ನಗರ ಸುತ್ತಿದ ಇವರು ಕಾರವಾರದ ಮೀನು ಮಾರುಕಟ್ಟೆಗೆ ಭೇಟಿ ನೀಡಿ ಅಲ್ಲಿನ ವಿಶೇಷ ಮೀನುಗಳ ಬಗ್ಗೆ ಮಾಹಿತಿ ಪಡೆದು ತಮ್ಮ ಫುಡ್ ವ್ಲಾಗಿಂಗ್ ಗಾಗಿ ಚಿತ್ರೀಕರಣ ನಡೆಸಿದರು.

https://chat.whatsapp.com/HbI3YG8zHwtAYxenaKEbAg?mode=ems_copy_ta

ಇನ್ನು ಇಲ್ಲಿನ ಸ್ಥಳೀಯ ಹೋಟಲ್ ,ಕ್ಯಾಂಟೀನ್ ಗಳಿಗೆ ತೆರಳಿ ಚಹ , ಬನ್ಸ್, ಮಸಾಲದೋಸೆ , ಮೀನಿನ ಖಾಧ್ಯ ಸವಿದ ಅವರು ಕಾರವಾರದ ಕಡಲ ತೀರದಲ್ಲಿ ಒಂದಿಷ್ಟಿ ಸಮಯ ಕಳೆದರು.

ಕಾರವಾರದ ನಂಟು!

Actor Ashish Vidyarthi
ಕಾರವಾರದ ಪ್ರಸಿದ್ಧ ಹೋಟಲ್ ಉದ್ಯಮಿಗಳ ಜೊತೆ ಆಶಿಶ್ ವಿದ್ಯಾರ್ಥಿ

ಆಶಿಶ್ ವಿದ್ಯಾರ್ಥಿ ತಂದೆ ಕಾರವಾರದಲ್ಲಿ ಬ್ರಿಟೀಷ್ ಕಾಲದಲ್ಲಿ  ಸರ್ಕಾರಿ ಉದ್ಯೋಗದಲ್ಲಿ ಇದ್ದರು. ಹೀಗಾಗಿ ಆಶಿಶ್ ವಿದ್ಯಾರ್ಥಿಗೆ ಕಾರವಾರ ಹಳೆಯ ನಂಟು . ಕಾರವಾರಕ್ಕೆ ಬಂದ ಅವರು ತಾವು ಚಿಕ್ಕ ವಯಸ್ಸಿನಲ್ಲಿ ತಂದೆಯೊಂದಿಗೆ ಓಡಾಡಿದ ಜಾಗಗಳಲ್ಲಿ ತಿರುಗಾಡಿದರು. ಹಳೆಯ ನೆನಪನ್ನು ಮತ್ತೆ ಮಾಡಿಕೊಂಡ ಅವರು ತಾನೂ ಹಿಂದೆ ಕಾರವಾರದಲ್ಲಿ ಓಡಾಡಿದ ರಸ್ತೆ ಗಳಲ್ಲಿ ಓಡಾಡಿ ಹಳೆಯ ನೆನಪನ್ನು ನೆನಸಿಕೊಂಡರು. ಸಮಯ ಕಡಿಮೆ ಇದೆ ಇಂದು ಬೇರೆಡೆ ಹೋಗಬೇಕಿದ್ದು ಮತ್ತೊಮ್ಮೆ ಇಲ್ಲಿಗೆ ಬರುವುದಾಗಿ ಹೇಳಿ ಮರಳಿದರು.

ಆಶಿಶ್ ವಿದ್ಯಾರ್ಥಿ ಫುಡ್ ವ್ಲಾಗರ್ ಆಗಿದ್ದು ಹೇಗೆ?

Famous film actor Ashish Vidyarthi
ಆಶಿಶ್ ವಿಧ್ಯಾರ್ಥಿ

ಕೋವಿಡ್ ಸಮಯದಲ್ಲಿ ಕಾಲಿ ಇದ್ದ ಅವರು ಇತ್ತೀಚೆಗೆ ಅವರು ಸಿನಿಮಾ ಆಯ್ಕೆಯಲ್ಲ ಚ್ಯೂಸಿ ಆಗಿದ್ದಾರೆ.

2024ರಲ್ಲಿ ರಿಲೀಸ್ ಆದ ‘ಕಿಲ್’ ಬಳಿಕ ಅವರ ನಟನೆಯ ಸಿನಿಮಾ ತೆರೆಗೆ ಬಂದಿದ್ದು ಕಡಿಮೆ . ಆಹಾರದ ಬಗ್ಗೆ ಹೆಚ್ಚು ಒಲವು ಹೊಂದಿದ್ದ ಅವರು ಮೊದಲು ಚಿಕ್ಕ ಪುಟ್ಟ ವಿಡಿಯೋ ವನ್ನ ಪೋಸ್ಟ್ ಮಾಡುತಿದ್ದರು.

Karwar |ಬೇಲಿಕೇರ ಅದಿರು ಪ್ರಕರಣ| ಕಾರವಾರ ಶಾಸಕ ಸೈಲ್ ಗೆ ನ.20 ರ ವರೆಗೆ ಜಾಮೀನು ವಿಸ್ತರಣೆ.

ಕೆಲವೇ ತಿಂಗಳಲ್ಲಿ 2 ಮಿಲಿಯನ್ ಗೂ ಹೆಚ್ಚು ಫಾಲೋವರ್ಸ್ ಗಳು ಇವರ ಫುಡ್ ವ್ಲಾಗಿಂಗ್ ಗೆ ಆಗಿದ್ದು ತಮ್ಮ ಇತರ ಚಟುವಟಿಕೆ ಜೊತೆ ಈಗ ಅವರು ಫುಡ್ ವ್ಲಾಗಿಂಗ್ ಕೂಡ ಮಾಡುತ್ತಾರೆ.

Karwar fish market visit actor Ashish Vidyarthi
ಕಾರವಾರದ ಮೀನು ಮಾರುಕಟ್ಟೆಯಲ್ಲಿ ನಟ ಆಶಿಶ್ ವಿದ್ಯಾರ್ಥಿ

ತಿಂಡಿಗಳನ್ನು ನಾನು ಯಾವಾಗಲೂ ಇಷ್ಪಡುತ್ತೇನೆ. ನನ್ನ ತಾಯಿ ವಿವಿಧ ಖಾದ್ಯಗಳನ್ನು ಮಾಡುತ್ತಿದ್ದರು. ನಾನು ಈಗ ಬೇರೆ ಬೇರೆ ಜಾಗಗಳಿಗೆ ಹೋಗಿ ಅಲ್ಲಿನ ತಿಂಡಿಗಳನ್ನು ಹುಡುಕುತ್ತಿದ್ದೇನೆ. ನಾನು ತಿಂಡಿಗಳನ್ನು ಹುಡುಕಿ, ಮೆಚ್ಚುಗೆ ಸೂಚಿಸುತ್ತೇನೆ. ನನಗೆ ಇದು ಇಷ್ಟ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ.

ಆಶಿಶ್ ಅವರು ಕಾಮಿಡಿ ಶೋ, ಟಾಕ್ ಶೋಗಳನ್ನು ಮಾಡಿದ್ದಾರೆ. ಅವರು ಈಗ ವಿವಿಧ ನಗರಗಳಿಗೆ ತೆರಳಿ ಅಲ್ಲಿನ ವಿಶೇಷ ರೆಸ್ಟೋರೆಂಟ್, ರಸ್ತೆ ಬದಿಯ ಅಂಗಡಿಗಳಿಗೆ ಭೇಟಿ ನಿಡಿ ಅಲ್ಲಿನ ತಿಂಡಿಗಳನ್ನು ಮೆಚ್ಚಿ ಹೊಗಳುವ ಕೆಲಸ ಮಾvolgದ್ದಾರೆ.

ಅವರು ಫೇಮಸ್ ಆಗಿರುವುದರಿಂದ ಅವರ ಯೂಟ್ಯೂಬ್​ಗೆ ಸಬ್​ಸ್ಕ್ರೈಬ್​ಗಳು ಕೂಡ ಸುಲಭವಾಗಿ ಬರುತಿದ್ದು ಹಲವು ಭಾಷೆಯಲ್ಲಿ ಕಳನಾಯಕನಾಗಿ ಮಿಂಚಿರುವ ಅವರು ವಿಲನ್ ಪಾತ್ರಗಳ ಮೂಲಕ ಫೇಮಸ್ ಆದವರು.

ಅವರು ಪೊಲೀಸ್ ಪಾತ್ರ ಮಾಡಿದರೂ ಅಲ್ಲಿಯೂ ನೆಗೆಟಿವ್ ಶೇಡ್ ಇರುತ್ತಿತ್ತು. ಆ ರೀತಿಯಲ್ಲಿ ಆಶಿಶ್ ಅವರು ಪಾತ್ರಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಕನ್ನಡದಲ್ಲಿ ಅವರು ಸುದೀಪ್​ ಜೊತೆ ‘ಬಚ್ಚನ್’ ಹೆಸರಿನ ಚಿತ್ರ ಮಾಡಿದ್ದರು. ಈ ಸಿನಿಮಾದಲ್ಲಿ ಅವರ ನಟನೆ ಪ್ರೇಕ್ಷಕರ ಮನಸ್ಸು ತಟ್ಟಿತ್ತು.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ