Mundgod ನಲ್ಲಿದೆ ಬಾಳಂತಿ ದೇವರು ಈ ದೇವರ ಜಾತ್ರೆ ವಿಷೇಶವೇನು ಗೊತ್ತಾ?
ಕಾರವಾರ :- ದಕ್ಷಿಣ ಕಾಶಿ ಎಂದೇ ಪ್ರಸಿದ್ದವಾಗಿರು ಉತ್ತರ ಕನ್ನಡ (uttara kannda) ಜಿಲ್ಲೆಯಲ್ಲಿ ವಿಶಿಷ್ಟ ಸಂಪ್ರದಾಯದ ಜಾತ್ರೆಗಳು ನಡೆಯುತ್ತವೆ. ಇಂತಹ ವಿಶಿಷ್ಟ ಸಂಪ್ರದಾಯದಲ್ಲಿ ಒಂದಾದ ಮುಂಡಗೋಡಿನ (mundgod) ಸಾಲಗಾಂವ ಗ್ರಾಮದಲ್ಲಿ ಬುಧವಾರ ಬಾಣಂತಿ ಜಾತ್ರೆ ನೆರವೇರಿತು.
ಜಿಲ್ಲೆಯ ಮುಂಡಗೋಡದ ಸಾಲಗಾಂವ ಗ್ರಾಮದಲ್ಲಿ ನೆಲೆನಿಂತ ಬಾಣಂತಿ ದೇವಿಯ ಜಾತ್ರೆ ಪ್ರತಿ ವರ್ಷ ಮಕರ ಸಂಕ್ರಮಣದ ನಂತರ ನೆರವೇರುತ್ತದೆ.
ಇದನ್ನೂ ಓದಿ:-Mundgod : ಉದ್ಯಮಿ ಅಪಹರಣ ಪ್ರಕರಣ ,ಐದು ಜನರ ಬಂಧನ
ಈ ಬಾರಿ ನೂರಾರು ಬಾಣಂತಿಯರು ತಮ್ಮ ಪುಟ್ಟ ಮಗುವನ್ನು ಕರೆತಂದು ಕೆರೆಯಲ್ಲಿ ಅರ್ಧ ಮುಳುಗಿಸುವ ಮೂಲಕ ತಮ್ಮ ಹರಕೆಯನ್ನು ತೀರಿಸಿದರು.

ಏನಿದು ಬಾಣಂತಿ ಜಾತ್ರೆ.

ಮಕ್ಕಳಾಗದ ದಂಪತಿಗಳು ಸಾಲಗಾಂವ ಗ್ರಾಮದಲ್ಲಿ ನೆಲೆನಿಂತ ಬಾಣಂತಿ ದೇವಿಯ ಯಲ್ಲಿ ಹರಕೆ ಕಟ್ಟಿಕೊಳ್ಳುತ್ತಾರೆ. ಈ ಹರಕೆ ಫಲಿಸಿದ ನಂತರ ಹುಟ್ಟಿದ ಮಗುವನ್ನು ತಂದು ದೇವಸ್ಥಾನದ ಹೊರಭಾಗದಲ್ಲಿ ಇರುವ ಕೆರೆಯಲ್ಲಿ ಅರ್ಧ ಮುಳಗಿಸಿ ಸ್ನಾನ ಮಾಡಿಸಿ ದೇವಿಗೆ ವಿಶೇಷ ಪೂಜೆ ಸಮರ್ಪಿಸುತ್ತಾರೆ. ಇದಲ್ಲದೇ ಹುಟ್ಟಿದ ಮಗುವನ್ನು ತಂದು ಬಾಳಂಗಿ ದೇವಿ ದರ್ಶನ ಮಾಡಿಸಿ ಕೆರೆಯಲ್ಲಿ ಸ್ನಾನ ಮಾಡಿಸುವ ವಾಡಿಕೆಇದ್ದು , ಈ ರೀತಿ ಸ್ನಾನ ಮಾಡಿಸಿದಲ್ಲಿ ಮಕ್ಕಳು ಯಾವುದೇ ರೋಗ ರುಜನೆಗೆ ಒಳಗಾಗದೇ ಆರೋಗ್ಯವಾಗಿರುತ್ತಾರೆ ಎಂಬ ನಂಬಿಕೆ ಇಲ್ಲಿನ ಭಕ್ತರದ್ದು.