For the best experience, open
https://m.kannadavani.news
on your mobile browser.
Advertisement

Gokarna|ಮೋಜು ಮಸ್ತಿಗೆ ಬಂದವರು ನೀರುಪಾಲು

Bangalore student from Neerupala on Gokarna beach
02:34 PM Sep 11, 2024 IST | ಶುಭಸಾಗರ್
gokarna ಮೋಜು ಮಸ್ತಿಗೆ ಬಂದವರು ನೀರುಪಾಲು


Gokaena News:-ಗೋಕರ್ಣ ಮೋಜು ಮಸ್ತಿಗೆ  ಸಮುದ್ರದಲ್ಲಿ ಈಜಲು (swimming) ತೆರಳಿದ ಬೆಂಗಳೂರು ಮೂಲದ ಪ್ರವಾಸಿಗರಲ್ಲಿ ಓರ್ವ ನೀರಿನಲ್ಲಿ ಸಿಲುಕಿ ನಾಪತ್ತೆಯಾಗಿದ್ದು, ಐವರು ಅಸ್ವಸ್ಥಗೊಂಡ ಘಟಣೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಬಾವಿಕೊಡ್ಲ ಕಡಲ ತೀರದಲ್ಲಿ ನಡೆದಿದೆ.

Advertisement

ಬೆಂಗಳೂರಿನ (Bangalore) ಹಿಲ್ ಸೈಡ್ ಫಾರ್ಮಸಿ ಕಾಲೇಜಿನ ಒಟ್ಟು 48 ಗೋಕರ್ಣ ಕ್ಕೆ ಪ್ರವಾಸಕ್ಕೆ ಬಂದಿದ್ದು, ಸಮುದ್ರಲ್ಲಿ ಮೋಜುಮಸ್ತಿ ಮಾಡಲು ತೆರಳಿ ಈ ಅವಘಡ ನಡೆದಿದೆ.

ಜೀವಾಪಾಯದಲ್ಲಿದ್ದವರನ್ನ ಗಮನಿಸಿ ಸ್ಥಳೀಯರಾದ ದುಬ್ಬಸಸಿಯ ಸರ್ವೇಶ ಮೊರ್ಜೆ, ಪಂಢರಿನಾಥ ಮೂರ್ಜೆ ತಕ್ಷಣ ರಕ್ಷಣೆಗೆ ಧಾವಿಸಿದ್ದು ಇವರಿಗೆ ಕರಾವಳಿ ಕಾವಲು ಪೊಲೀಸ ಪಡೆಯವರು ಸಹಕರಿಸಿದ್ದ ಹರಸಾಹಸ ಪಟ್ಟು ಒಟ್ಟು ಐವರನ್ನ ದಡಕ್ಕೆ ತಂದು ಪ್ರಾಣ ಉಳಿಸಿದ್ದಾರೆ.

ಇದನ್ನೂ ಓದಿ:-Gokarna|ತಂಗಿಯನ್ನು ಬೀದಿಯಲ್ಲಿ ಬಿಟ್ಟುಹೋದ ಅಣ್ಣ| ಅಣ್ಣನನ್ನು ಹುಡುಕಿ ತಂಗಿ ಒಪ್ಪಿಸಿದ PSI ಖಾದರ್

ಕೋಲಾರ ಮೂಲದವ ಶ್ರೀನಿವಾಸ ಪುರದ ವಿನಯ ಎಸ್.ವಿ.(22)ನಾಪತ್ತೆಯಾದ ವಿದ್ಯಾರ್ಥಿಯಾಗಿದ್ದು, ಶೋಧಕಾರ್ಯ ಮುಂದುವರಿದಿದೆ.

ಅಸ್ವಸ್ಥಗೊಂಡ ಐದು ವಿದ್ಯಾರ್ಥಿಗಳು ಗೋಕರ್ಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಚಿಕಿತ್ಸ ಕೊಡಲಾಗಿದ್ದು, ಇಬ್ಬರನ್ನ ಹೆಚ್ಚಿನ ಚಿಕಿತ್ಸಗೆ ಕುಮಟಾಕ್ಕೆ ಸಾಗಿಸಲಾಗಿದೆ. ಪಿ.ಐ. ವಸಂತ್ ಆಚಾರ್, ಪಿ.ಎಸ್.ಐ. ಖಾದರ್ ಬಾಷಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಇದನ್ನೂ ಓದಿ:-KUMTA |ಧಾರೇಶ್ವರ ದೇವಸ್ಥಾನ ಕಳ್ಳತನ ಮಾಡಿ ಸಿಕ್ಕಿಬಿದ್ದ ಕೊಲೆ ಆರೋಪಿ.

Uttrakannda karwar Gilani festival offers

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ