Belikeri case| ಅಕ್ರಮ ಅದಿರು ನಾಪತ್ತೆ ಪ್ರಕರಣ ಸತೀಶ್ ಸೈಲ್ ಮಧ್ಯಂತರ ಜಾಮೀನು ರದ್ದು
Belikeri case| ಅಕ್ರಮ ಅದಿರು ನಾಪತ್ತೆ ಪ್ರಕರಣ ಸತೀಶ್ ಸೈಲ್ ಮಧ್ಯಂತರ ಜಾಮೀನು ರದ್ದು
ಕಾರವಾರ:- ಬೆಲೇಕೇರಿ ಬಂದರಿನಿಂದ ಆಕ್ರಮ ಅದಿರು ಸಾಗಾಟ ಪ್ರಕರಣದಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ(court) ಶಿಕ್ಷೆಗೊಳಗಾಗಿದ್ದ ಕಾರವಾರದ (karwar)ಶಾಸಕ ಸತೀಶ್ ಸೈಲ್ ಗೆ ನವೆಂಬರ್ 7 ರ ವರೆಗೆ ಜಾಮೀನು ವಿಸ್ತರಣೆ ಮಾಡಿ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ಮಾಡಿತ್ತು.
ಇದರ ಬೆನ್ನಲ್ಲೇ ಇಂದು ಸತೀಶ್ ಸೈಲ್ ಗೆ ಮಧ್ಯಂತರ ಜಾಮೀನು ರದ್ದು ಮಾಡಲಾಗಿದ್ದು ಮತ್ತೆ ಜೈಲು ಪಾಲಾಗಲಿದ್ದಾರೆ.
Belekeri -ಬೇಲೆಕೇರಿ ಬಂದರು ಅಧಿರುರಫ್ತು ಪ್ರಕರಣ| ಮತ್ತೆ ಇಡಿ ದಾಳಿ
ಕಾರವಾರ (karwar)ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿರು ಸತೀಶ್ ಸೈಲ್ ಆಕ್ರಮ ಅದಿರು ಸಾಗಾಟ ಪ್ರಕರಣದಲ್ಲಿ ಜೈಲು ಪಾಲಾಗಿದ್ದರು. ಇದಲ್ಲದೇ ಇವರ ಮನೆಯ ಮೇಲೆ ಇಡಿ ದಾಳಿ ನಡೆಸಿ ಕೋಟ್ಯಾಂತರ ರುಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣ ವಶಕ್ಕೆ ಪಡೆದಿತ್ತು.
ಆರೋಗ್ಯದ ಸಮಸ್ಯೆ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಚಿಕಿತ್ಸೆ ಪಡೆಯುತಿದ್ದ ಸತೀಶ್ ಸೈಲ್ ಇಡಿ ಪ್ರಕರಣದಲ್ಲಿ ಜಾಮೀನು ಪಡೆದುಕೊಂಡಿದ್ದು ಅಕ್ಟೋಬರ್ 25 ರವರೆಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು.
ಆರೋಗ್ಯ ಸಮಸ್ಯೆ ಹಾಗೂ ಚಿಕಿತ್ಸೆ ಕಾರಣದಿಂದ ಜಾಮೀನು ವಿಸ್ತರಿಸುವಂತೆ ಸೈಲ್ ಕೊರಿದ್ದ ಅರ್ಜಿಯನ್ನ ಪರಿಗಣಿಸಿದ ಜನಪ್ರತಿನಿಧಿ ನ್ಯಾಯಾಲಯ ನವೆಂಬರ್ 7 ರ ವರೆಗೆ ಜಾಮೀನು ವಿಸ್ತರಿಸಿ ಆದೇಶಿಸಿತ್ತು.
ಇನ್ನು ಜನಪ್ರತಿನಿಧಿ ನ್ಯಾಯಾಲಯದಲ್ಲಿ ಶಿಕ್ಷೆಗೊಳಗಾಗಿ ತಡೆಯಾಜ್ಞೆ ಸಹ ಹೈಕೋರ್ಟ ನಿಂದ ಪಡೆದುಕೊಂಡಿದ್ದು ಸದ್ಯ ಈ ಪ್ರಕರಣದಲ್ಲಿ ಸಹ ಜಾಮೀನಿನ ಮೇಲೆ ಸೈಲ್ ಇದ್ದರು. ಸಧ್ಯ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದ ಸೈಲ್ ಗೆ ಇದೀಗ ಮತ್ತೆ ಜೈಲು ಪಾಲಾಗುವಂತೆ ಮಾಡಿದೆ.