Uttara kannada| ಈ ದಿನ ಎಲ್ಲಿ ಏನು ಸುದ್ದಿ| ಹೈಲೈಟ್ಸ್ ಸುದ್ದಿ ಇಲ್ಲಿದೆ.
Uttara kannada| ಈ ದಿನ ಎಲ್ಲಿ ಏನು ಸುದ್ದಿ| ಹೈಲೈಟ್ಸ್ ಸುದ್ದಿ ಇಲ್ಲಿದೆ.
Today’s top Uttara Kannada news highlights — Matka gambling arrests in Bhatkal and Murdeshwar, driver Ramachandra Naik wins “Safe Driver” award, farmer suicide in Mundgod, assault case in Kumta, and worker suicide in Yellapur. Read all updates here.
ಮಟ್ಕ ಜೂಜಾಟ | ಪ್ರತ್ತೇಕ ಪ್ರಕರಣದಲ್ಲಿ ಮೂವರ ಬಂಧನ

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಹನೀಪಾಬಾದ್ ಪೆಟ್ರೋಲ್ ಪಂಪ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಓ.ಸಿ ಮಟಕಾ ಜುಗಾರಾಟ ನಡೆಸುತ್ತಿದ್ದ ಇಬ್ಬರ ವಿರುದ್ಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Karwar|ಸುಭಾಷ್ ಚಂದ್ರಬೋಸ್ ಪ್ರತಿಮೆ ವಿರೂಪ|ಒಂದುವಾರವಾದ್ರೂ ನಿರ್ಲಕ್ಷ!
ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಆರೋಪಿಗಳಾದ ಮಂಜುನಾಥ ತಂದೆ ನಾರಾಯಣ ನಾಯ್ಕ ,ಕೋಟೇಬಾಗಿಲು ಶಿರಾಲಿ ಹಾಗೂ ರೋಹಿದಾಸ ತಂದೆ ಭೈರಪ್ಪ ನಾಯ್ಕ,ಚಿತ್ರಾಮರ,ಇವರು ಓ.ಸಿ ಮಟಕಾದಿಂದ ಸಂಗ್ರಹಿಸಿದ ಹಣವನ್ನು ಪರಸ್ಪರ ಹಂಚಿಕೊಳ್ಳುತ್ತಿದ್ದರೆಂಬ ಗುಪ್ತ ಮಾಹಿತಿಯ ಆಧಾರದಲ್ಲಿ ಸಿಪಿಐ ಮಂಜುನಾಥ ಲಿಂಗಾರೆಡ್ಡಿ ದಾಳಿ ನಡೆಸಿದ್ದಾರೆ. ನಗದು ಹಾಗೂ ಇತರೆ ವಸ್ತುಗಳು ವಶಕ್ಕೆ ಪಡೆದ್ದು ಕೊಂಡಿದ್ದಾರೆ.
Kumta| ನಿಯಮ ಮೀರಿ ಸಾಲ ವಸೂಲಿಗೆ ಇಳಿದ ಬ್ಯಾಂಕ್ ಗೆ ಪಾಠ ಕಲಿಸಿದ ಖ್ಯಾತ ವಕೀಲ ಪ್ರಶಾಂತ್ ನಾಯ್ಕ ಬೆಟಕುಳಿ.
ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಟ್ಕಾ ಜೂಜಾಟ ನಡೆಸುತ್ತಿದ್ದ ವ್ಯಕ್ತಿಯೊಬ್ಬನನ್ನು ಮುರ್ಡೇಶ್ವರ (murdeshwara) ಪೊಲೀಸರು ಬಂಧಿಸಿದ್ದಾರೆ.
ಮಾವಿನಕಟ್ಟೆಯ ಮಂಜುನಾಥ ಡಿಲಕ್ಸ್ ಹೋಟೆಲ್ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಗಿರೀಶ ತಂದೆ ಮಂಜುನಾಥ ಬಾಕಡ, ನ್ಯಾಷನಲ್ ಕಾಲೋನಿ, ಮುರ್ಡೇಶ್ವರ ನಿವಾಸಿ,
ಈತನು ಮಟ್ಕಾ, ಓಸಿ ಜೂಜಾಟ ನಡೆಸುತ್ತಿದ್ದಾನೆಂಬ ನಿಖರ ಮಾಹಿತಿಯ ಮೇರೆಗೆ ಮುರುಡೇಶ್ವರ ಠಾಣೆ ಪಿಎಸೈ ಲೋಕನಾಥ ರಾಥೋಡ,ದಾಳಿ ನಡೆಸಿ,ದಾಳಿ ಯಲ್ಲಿ ನಗದು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ .
ಈ ಸಂಬಂಧ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ 78(3) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಜವಾಬ್ದಾರಿಯ ಚಕ್ರ ತಿರುಗಿಸಿದ ಭಟ್ಕಳದ ಚಾಲಕ — ರಾಜ್ಯ ವೇದಿಕೆಯಲ್ಲಿ ಬೆಳ್ಳಿ ಪದಕ ಗೌರವ.

ಐದು ವರ್ಷಗಳಿಂದ ಅಪಘಾತರಹಿತ ಸೇವೆ – ವಾ.ಕ.ರ.ಸಾ.ಸಂ. ವತಿಯಿಂದ ‘ಸುರಕ್ಷಾ ಚಾಲಕ’ ಪ್ರಶಸ್ತಿ.
ಕಾರವಾರ: ಸುರಕ್ಷಿತ ಚಾಲನೆಯ ಮಾದರಿಯಾಗಿರುವ ಭಟ್ಕಳದ ಚಾಲಕ ರಾಮಚಂದ್ರ ಎಲ್. ನಾಯ್ಕ ಅವರಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ವಾ.ಕ.ರ.ಸಾ.ಸಂ) ವತಿಯಿಂದ 2022–23ನೇ ಸಾಲಿನ “ಸುರಕ್ಷಾ ಚಾಲಕ” ಬೆಳ್ಳಿ ಪದಕ ಗೌರವ ಕ್ಕೆ ಆಯ್ಕೆ ಆಗಿದ್ದಾರೆ.
Sirsi|ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ:ಲೈಸೆನ್ಸ್ ರದ್ದು!
ಶಿರಸಿ ಘಟಕದ ಭಟ್ಕಳ ಡಿಪೋಗೆ ಸೇರಿದ ರಾಮಚಂದ್ರ ನಾಯ್ಕ ಅವರು ಭಟ್ಕಳ ತಾಲ್ಲೂಕಿನ ತಲಾನ ಕಸಲಗದ್ದೆ ನವರು ಆಗಿದ್ದು
ಇವರು ಕಳೆದ ಐದು ವರ್ಷಗಳಿಂದ ಯಾವುದೇ ಅಪಘಾತವಿಲ್ಲದೆ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. ಮಳೆಗಾಲದ ರಾತ್ರಿ, ಕಷ್ಟದ ಹಾದಿ, ದಟ್ಟ ಸಂಚಾರ — ಯಾವ ಸವಾಲಿನಲ್ಲೂ ಕರ್ತವ್ಯದಿಂದ ಹಿಂದೆ ಸರಿಯದೆ ಪ್ರಯಾಣಿಕರನ್ನು ಸುರಕ್ಷಿತವಾಗಿ ಅವರ ಗಮ್ಯಸ್ಥಾನಕ್ಕೆ ತಲುಪಿಸುತ್ತಿರುವುದಕ್ಕಾಗಿ ಸಂಸ್ಥೆಯು ಈ ಗೌರವಕ್ಕೆ ಆಯ್ಕೆ ಮಾಡಿದೆ.
ನಾಳೆ ನಡೆವ ಹುಬ್ಬಳ್ಳಿ–ಧಾರವಾಡದ ನೂತನ ಬಸ್ ನಿಲ್ದಾಣಗಳ ಉದ್ಘಾಟನಾ ಕಾರ್ಯಕ್ರಮದ ವೇಳೆ ಈ ಪದಕ ಪ್ರದಾನ ನಡೆಯಲಿದ್ದು, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಇತರ ಗಣ್ಯರು ಉಪಸ್ಥಿತರಿರುವರು.
ರಾಮಚಂದ್ರ ನಾಯ್ಕರ ಈ ಸಾಧನೆ ಭಟ್ಕಳ ಡಿಪೋಗೆ ಮಾತ್ರವಲ್ಲ, ಇಡೀ ಉತ್ತರ ಕನ್ನಡ ಜಿಲ್ಲೆಯ ಸಾರಿಗೆ ಸಿಬ್ಬಂದಿಗೆ ಪ್ರೇರಣೆಯ ಕಿರಣವಾಗಿದೆ.
ಮುಂಡಗೋಡ: ಸಾಲಬಾಧೆ; ಬಸವನಕಟ್ಟೆ ಗ್ರಾಮದಲ್ಲಿ ರೈತ ನೇಣಿಗೆ ಶರಣು.
ಬಾಚಣಕಿ ಗ್ರಾಮದಲ್ಲಿ ಸಾಲಬಾಧೆಯಿಂದ ಬೇಸತ್ತು ರೈತ ಶಂಕ್ರಪ್ಪ ಶಿವಪ್ಪ ಗುಡಗೇರಿ (50) ಅವರು ನವೆಂಬರ್ 4ರ ಮುಂಜಾನೆ ತಮ್ಮ ಮನೆಯ ಪಕ್ಕದ ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂಡಗೋಡಿನ ಸಹಕಾರಿ ಸಂಘ ಸೇರಿದಂತೆ ವಿವಿಧೆಡೆ ಸುಮಾರು 3 ಲಕ್ಷ ರೂ.ಗೂ ಅಧಿಕ ಬೆಳೆ ಸಾಲ ಮಾಡಿಕೊಂಡಿದ್ದ ಮೃತ ಶಂಕ್ರಪ್ಪ, ಬೆಳೆ ಸರಿಯಾಗಿ ಬಾರದೆ ಸಾಲ ತೀರಿಸಲು ಸಾಧ್ಯವಾಗದೆ ಮನನೊಂದು ಈ ಕೃತ್ಯ ಎಸಗಿದ್ದಾರೆ. ಈ ಸಂಬಂಧ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಮಟಾ: ಕುಡಿದ ಮತ್ತಿನಲ್ಲಿ ಮಹಿಳೆಗೆ ನಿಂದನೆ, ಪತಿಗೆ ಹಲ್ಲೆ: ದೂರು.
ಕುಮಟಾದಲ್ಲಿ (kumta) ಸಾರ್ವಜನಿಕ ಸ್ಥಳದಲ್ಲಿ ಕುಡಿದ ಮತ್ತಿನಲ್ಲಿ ಮಹಿಳೆಯೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದನ್ನು ಪ್ರಶ್ನಿಸಿದ ಅವರ ಪತಿಗೆ ಹಲ್ಲೆ ನಡೆಸಿದ ಆರೋಪದಡಿ ಕುಮಟಾ ಪೊಲೀಸ್ ಠಾಣೆಯಲ್ಲಿ ಮಂಜುನಾಥ ಮಾಸ್ತಿ ಮುಕ್ರಿ ಎಂಬ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ. ದೂರುದಾರ ಮಂಜುನಾಥ ನಾರಾಯಣ ಮುಕ್ರಿ ಅವರ ಕುತ್ತಿಗೆಗೆ ಕೈ ಹಾಕಿ, ಗೋಡೆಗೆ ದೂಕಿ, ಕೈಯಿಂದ ಹೊಡೆದು ಗಾಯಗೊಳಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಘಟನೆ ಸಂಬಂಧ ಬುಧವಾರ ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಲಾಗಿದೆ.
ಯಲ್ಲಾಪುರ: ಪತ್ನಿ ತೊರೆದು ಹೋಗಿದ್ದಕ್ಕೆ ಕಾರ್ಮಿಕ ಆತ್ಮಹತ್ಯೆ
ಯಲ್ಲಾಪುರ ಪಟ್ಟಣದ ಮಂಜುನಾಥ ನಗರದಲ್ಲಿ ಪೆಟ್ರೋಲ್ ಪಂಪ್ ಕಾರ್ಮಿಕರೊಬ್ಬರು, ಪತ್ನಿ ಕಳೆದ ಎರಡು ವರ್ಷಗಳಿಂದ ಮನೆಯಿಂದ ದೂರವಾಗಿದ್ದರಿಂದ ಮನನೊಂದು, ನವೆಂಬರ್ 4ರಂದು ಬೆಳಿಗ್ಗೆ ಮನೆಯ ಮೇಲ್ಬಾವಣಿಯ ಸೀಲಿಂಗ್ ಹುಕ್‌ಗೆ ಲುಂಗಿಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ದುರ್ದೈವಿ, ಕಾಮಾಕ್ಷ ಪೆಟ್ರೋಲ್ ಪಂಪಿನ ಕಾರ್ಮಿಕ ಹೇಮಂತ ಬಸವಂತಪ್ಪ ಕಾಪ್ಪೆ (57) ಎಂದು ಗುರುತಿಸಲಾಗಿದೆ. ಮೃತರ ಮಗ ಕಿಶನ್ ಹೇಮಂತ ಕಾಪ್ಪೆ (21) ನೀಡಿದ ದೂರಿನ ಮೇರೆಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.