Bhatkal ಮದ್ಯ ಸೇವಿಸಿ ಪೊಲೀಸರೊಂದಿಗೆ ಅನುಚಿತ ವರ್ತನೆ ,ಬೈಕ್ ಸವಾರನಿಗೆ 22,500 ರೂ ದಂಡ ವಿಧಿಸಿದ COURT
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ (Bhatkal)ನಿಯಮ ಪಾಲನೆ ಮಾಡದೇ ಮದ್ಯ ಸೇವಿಸಿ ವಾಹನ ಚಲಾಯಿಸಿದ್ದಲ್ಲದೇ ದಂಡ ವಿಧಿಸಲು ಹೋದ ಪೊಲೀಸರೊಂದಿಗೆ ಅಸಭ್ಯ ವರ್ತನೆ ತೋರಿದ ಸವಾರನಿಗೆ ನ್ಯಾಯಾಲಯವು (Court) ಬರೋಬ್ಬರಿ 22,500 ರೂ ದಂಡ ವಿಧಿಸಿ ಆದೇಶಿಸಿದೆ.
ಇದನ್ನೂ ಓದಿ:-Bhatkal ವೃದ್ದೆಯ ಮೇಲೆ ಹರಿದ ಖಾಸಗಿ ಬಸ್ – ಸಾವು
ದಿನಾಂಕ: 31/12/24 ರಂದು ಭಟ್ಕಳ ನಗರದ PLD ಬ್ಯಾಂಕ ಕ್ರಾಸ್ ಹತ್ತಿರ ಭಟ್ಕಳ ಶಹರ ಪೊಲೀಸ್ (bhatkal police )ಠಾಣೆಯ ಪಿ.ಎಸ್.ಐ. ನವೀನ್ ನಾಯ್ಕ ರವರು ವಾಹನ ತಪಾಸಣೆ ಮಾಡುತ್ತಿರುವ ವೇಳೆ ಭೋರಾಸಿಂಗ್ ಎಂಬ ವ್ಯಕ್ತಿ ಬೈಕ್ ನಂಬರ KA 47 EA 5437 ನೇದನ್ನು ಚಲಾಯಿಸಿಕೊಂಡು ಬರುವ ವೇಳೆ ಪರಿಶೀಲಿಸಿದಾಗ ಆತ ಮದ್ಯ ಸೇವನೆಮಾಡಿದ ಬಗ್ಗೆ ದೃಡಪಟ್ಟಿತ್ತು.
ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡುವ ಜೊತೆಗೆ ಚಾಲನಾ ಪ್ರಮಾಣ ಪತ್ರ ಹೊಂದದೇ ಅಪಾಯಕಾರಿ ಚಾಲನೆ ಜೊತೆ ಹೆಲ್ಮೆಟ್ ಧರಿಸದೇ ಪೊಲೀಸ್ ಅಧಿಕಾರಿ ಯವರೊಂದಿಗೆ ಅನುಚಿತ ವರ್ತನೆ ತೋರಿದ್ದನು.
ಭಟ್ಕಳ PSI ನವೀನ್ ರವರು ಈತನ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಈ ಕುರಿತು ವಾಹನ ಚಾಲಕನ ವಿರುದ್ಧ ಮಾನ್ಯ ಪ್ರಧಾನ (ಸಿ.ಜೇ) ಹಾಗೂ ಜೇ.ಎಂ.ಎಫ್.ಸಿ ನ್ಯಾಯಾಲಯ ಭಟ್ಕಳ ನ್ಯಾಯಾಲಯದಲ್ಲಿ ಚಾಲಕನ ವಿರುದ್ಧ ಅಂತಿಮ ವರದಿ ಸಲ್ಲಿಸಿದ ಮೇರೆಗೆ ಪ್ರಕರಣದ ವಿಚಾರಣೆ ಕೈಗೊಂಡ ನ್ಯಾಯಾದೀಶರು ತಪ್ಪಿತಸ್ಥ ಚಾಲಕನಿಗೆ ಇಂದು 22,500 (ಇಪ್ಪತ್ತೆರಡು ಸಾವಿರದ ಐದು ನೂರು ರೂಪಾಯಿ) ದಂಡ ವಿಧಿಸಿ ಆದೇಶಿಸಿದೆ.