Bhatkal ಬೈಕ್ ಕದ್ದು ಮರಳಿಸಿದ ಬೈಕ್ ಕಳ್ಳ!
Bhatkal news :- ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಪೆಟ್ರೋಲ್ ಬಂಕ್ ( petrol bunk) ನಲ್ಲಿ ಬೈಕ್ ಕದ್ದ ಕಳ್ಳನೊಬ್ಬ ಮರಳಿ ಕದ್ದ ಸ್ಥಳದಲ್ಲೇ ಬೈಕ್ ತಂದು ನಿಲ್ಲಿಸಿಹೋದ ಘಟನೆ ನಡೆದಿದೆ.
ಹೌದು ಭಟ್ಕಳದ (bhatkal)ಸಂಶುದ್ಧಿನ್ ಸರ್ಕಲ್ ಬಳಿಯ ಭಾರತ್ ಪೆಟ್ರೋಲ್ ಬಂಕ್ ಬಳಿ ಇಲ್ಲಿನ ಬೆಳ್ನೆ ಬಳಿಯ ಮಂಜುನಾಥ ಹೆಮ್ಮಯ್ಯ ನಾಯ್ಕ ಎಂಬುವವರು ಮಂಗಳವಾರ ಬೆಳಗ್ಗೆ ತಮ್ಮ ಬೈಕ್ ನಿಲ್ಲಿಸಿ ಮಾರುಕಟ್ಟೆಗೆ ತೆರಳಿ ಬರುವುದರೊಳಗೆ ಬೈಕ್ ಕಳ್ಳತನವಾಗಿತ್ತು.
ಇದನ್ನೂ ಓದಿ:-Bhatkal ಪಡಿತರ ಅಕ್ಕಿ ಅಕ್ರಮ ಸಾಗಾಟ: ಓಮಿನಿ ಸಮೇತ ಆರೋಪಿ ಬಂಧನ
ನಂತರ ಇವರು ಭಟ್ಕಳ ಠಾಣೆಗೆ ದೂರು ನೀಡಿದ್ದಾರೆ. ಪೂಲೀಸರು ಪೆಟ್ರೋಲ್ ಬಂಕ್ ನ ಸಿಸಿ ಕ್ಯಾಮೆರಾ ವೀಕ್ಷಿದಿದಾಗ ನಕಲಿ ಚಾವಿ ಬಳಸಿ ಪಟ್ಟೆ ಅಂಗಿಯ ವ್ಯಕ್ತಿ ನಕಲಿ ಚಾವಿ ಬಳಸಿ ಬೈಕ್ ಕದ್ದೊಯ್ಯುತ್ತಿರುವ ದೃಶ್ಯ ಕಂಡಿದೆ.
ಇನ್ನು ಬೈಕ್ ಕದ್ದು ಹೋಗಿದ್ದ ವ್ಯಕ್ತಿಗೆ ಪೆಟ್ರೋಲ್ ಬಂಕ್ ನಲ್ಲಿ ಸಿಸಿ ಕ್ಯಾಮೆರಾ ಇರುವುದು ನಂತರ ಗೊತ್ತಾಗಿದೆ. ತನ್ನ ಮುಖ ಗೊತ್ತಾಗುವ ಭಯದಲ್ಲಿ ಬೈಕ್ ನನ್ನು ಕದ್ದ ಜಾಗದ ಬಳಿ ತಂದು ನಿಲ್ಲಿಸಿ ಪರಾರಿಯಾಗಿದ್ದಾನೆ.