For the best experience, open
https://m.kannadavani.news
on your mobile browser.
Advertisement

Bhatkal | ಮುಂಬೈ ನಿಂದ ಭಟ್ಕಳಕ್ಕೆ ಬಂದ ವಿ.ಆರ್.ಎಲ್ ಬಸ್ ನಲ್ಲಿತ್ತು ಲಕ್ಷ -ಲಕ್ಷ ಹಣ ,ಬಂಗಾರ| ಪೊಲೀಸರ ವಶಕ್ಕೆ.

ಮುಂಬೈಯಿಂದ ಭಟ್ಕಳಕ್ಕೆ ಬರುತ್ತಿದ್ದ ವಿ.ಆರ್.ಎಲ್ ಬಸ್‌ನಲ್ಲಿದ್ದ ಸೂಟ್‌ಕೇಸ್‌ನಲ್ಲಿ ಲಕ್ಷಾಂತರ ರೂಪಾಯಿ ನಗದು ಮತ್ತು ಬಂಗಾರದ ಆಭರಣ ಪತ್ತೆ! ಭಟ್ಕಳ ಪೊಲೀಸರು ಹಣ ಹಾಗೂ ಬಂಗಾರ ವಶಕ್ಕೆ ಪಡೆದು ಇಬ್ಬರನ್ನು ಬಂಧಿಸಿದ್ದಾರೆ. Bhatkal police seize cash and gold from VRL bus parcel sent from Mumbai.
09:43 PM Nov 04, 2025 IST | ಶುಭಸಾಗರ್
ಮುಂಬೈಯಿಂದ ಭಟ್ಕಳಕ್ಕೆ ಬರುತ್ತಿದ್ದ ವಿ.ಆರ್.ಎಲ್ ಬಸ್‌ನಲ್ಲಿದ್ದ ಸೂಟ್‌ಕೇಸ್‌ನಲ್ಲಿ ಲಕ್ಷಾಂತರ ರೂಪಾಯಿ ನಗದು ಮತ್ತು ಬಂಗಾರದ ಆಭರಣ ಪತ್ತೆ! ಭಟ್ಕಳ ಪೊಲೀಸರು ಹಣ ಹಾಗೂ ಬಂಗಾರ ವಶಕ್ಕೆ ಪಡೆದು ಇಬ್ಬರನ್ನು ಬಂಧಿಸಿದ್ದಾರೆ. Bhatkal police seize cash and gold from VRL bus parcel sent from Mumbai.
bhatkal   ಮುಂಬೈ ನಿಂದ ಭಟ್ಕಳಕ್ಕೆ ಬಂದ ವಿ ಆರ್ ಎಲ್ ಬಸ್ ನಲ್ಲಿತ್ತು ಲಕ್ಷ  ಲಕ್ಷ ಹಣ  ಬಂಗಾರ  ಪೊಲೀಸರ ವಶಕ್ಕೆ
Bhatkal gold cash smuggling case

Bhatkal | ಮುಂಬೈ ನಿಂದ ಭಟ್ಕಳಕ್ಕೆ ಬಂದ ವಿ.ಆರ್.ಎಲ್ ಬಸ್ ನಲ್ಲಿತ್ತು ಲಕ್ಷ -ಲಕ್ಷ ಹಣ ,ಬಂಗಾರ| ಪೊಲೀಸರ ವಶಕ್ಕೆ.

Bhatkal (04 November 2025) :- ದಾಖಲೆ ಇಲ್ಲದೇ ವಿ.ಆರ್.ಎಲ್ ಖಾಸಗಿ ಬಸ್ ನಲ್ಲಿ ಮುಂಬೈ ನಿಂದ ಭಟ್ಕಳಕ್ಕೆ ಪಾರ್ಸಲ್ ರೂಪದಲ್ಲಿ ಕಳುಹಿಸಿದ್ದ ನೀಲಿ ಸೂಟ್ ಕೇಸ್ ನಲ್ಲಿ  ಬಂಗಾರ ಹಾಗೂ ಲಕ್ಷಾಂತರ ಮೌಲ್ಯದ ಹಣವನ್ನು ಖಚಿತ ಮಾಹಿತಿ ಪಡೆದ ಭಟ್ಕಳ(bhatkal) ಶಹರ ಠಾಣೆ ಪೊಲೀಸರು  ವಶಕ್ಕೆ ಪಡೆದುಕೊಂಡ ಇಬ್ಬರನ್ನು ವಶಕ್ಕೆ ಪಡೆದ ಘಟನೆ ಇಂದು ರಾತ್ರಿ ನಡೆದಿದೆ.

Advertisement

Bhatkal| ಎಂಟು ಲಕ್ಷಕ್ಕೂ ಹೆಚ್ಚು ಮೌಲ್ಯದ ನಕಲಿ ಅಮೇರಿಕನ್ ಕರೆನ್ಸಿ ವಶಕ್ಕೆ ಆರೋಪಿ ಬಂಧನ

ಮುಂಬೈ ನಿಂದ ಭಟ್ಕಳ ಮಾರ್ಗವಾಗಿ ಮಂಗಳೂರಿಗೆ ತೆರಳುತಿದ್ದ ವಿ.ಆರ್.ಎಲ್  ಖಾಸಗಿ ಬಸ್ ಗೆ ಮುಂಬೈ ನಲ್ಲಿ ಅನಾಮಿಕ ವ್ಯಕ್ತಿಯೊಬ್ಬರು ನೀಲಿ ಬಣ್ಣದ ಸೂಟ್ ಕೇಸ್ ನನ್ನು ನೀಡಿ ಭಟ್ಕಳದಲ್ಲಿ ಇರ್ಫಾನ್ ಎಂಬುವವರು ತೆಗೆದುಕೊಳ್ಳುತ್ತಾರೆ ಎಂದು ನೀಡಿದ್ದರು.

ಈ ಮಾಹಿತಿಯನ್ನು ಪಡೆದಿದ್ದ ಭಟ್ಕಳ ಶಹರ ಠಾಣೆ ಸಿಪಿಐ ದಿವಾಕರ್ ರವರು ಭಟ್ಕಳದ ಶಂಶುದ್ದೀನ್ ಸರ್ಕಲ್ ಬಳಿ ಪಾರ್ಸಲ್ ಇಳಿಸುತಿದ್ದಂತೆ ತಪಾಸಣೆ ನಡೆಸಿ ನೀಲಿ ಬಣ್ಣದ ಸೂಟ್ ಕೇಸ್ ನನ್ನು ತೆರೆದಾಗ ಹಣ ,ಬಂಗಾರದ ಆಭರಣ ಪತ್ತೆಯಾಗಿದೆ.

Bhatkal goes fumbling case
Bhatkal gold cash smuggling case

Karnataka| ಈ ದಿನ ಎಲ್ಲಿ ಏನು ಸುದ್ದಿ| ಹೈಲೈಟ್ಸ್ ಸುದ್ದಿ ಇಲ್ಲಿದೆ.

49,98,400 ನಗದು ಹಣ, 401.04 ಗ್ರಾಂ ತೂಕದ 32 ಬಂಗಾರದ ಬಳೆ,ಮೊಬೈಲ್ ,ಪೆನ್ ಡ್ರೈವ್ ವಶಕ್ಕೆ ಪಡೆದು ಭಟ್ಕಳದ ಬಂದರು ರೂಡಿನ ಬಾಬಾ ನಂದ್ , ಉಸ್ಮಾನ್ ನಗರದ ಮೊಹ್ಮದ್ ಇರ್ಫಾನ್ ಎಂಬುವವರನ್ನು ಪ್ರಕರಣ ಸಂಬಂಧ ವಶಕ್ಕೆ ಪಡೆದಿದ್ದಾರೆ.

ಘಟನೆ ಸಂಬಂಧ ಭಟ್ಕಳ ಶಹರಾ ಠಾಣೆಯಲ್ಲಿ ಐಟಿ ಆಕ್ಟ್ ನಡಿ  ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಳ್ಳಲಾಗಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ