Karwar | ಅಕ್ರಮ ಗೋವಾ ಮದ್ಯ ವಶ|ಮೂವರು ಆರೋಪಿಗಳ ಬಂಧನ
Karwar | ಅಕ್ರಮ ಗೋವಾ ಮದ್ಯ ವಶ|ಮೂವರು ಆರೋಪಿಗಳ ಬಂಧನ.
Karwar (05 November2025):- ಗೋವಾ ದಿಂದ ಅಕ್ರಮವಾಗಿ ಕರ್ನಾಟಕ ಗಡಿಗೆ ಗೋವಾದ (goa) ಮದ್ಯ ಸಾಗಾಟ ಮಾಡುವಾಗ ಕಚಿತ ಮಾಹಿತಿ ಪಡೆದ ಕಾರವಾರ(Karwar) ತಾಲೂಕಿನ ಚಿತ್ತಾಕುಲ PSI ಪರುಶುರಾಮ್ ನೇತ್ರತ್ವದಲ್ಲಿ ಚಿತ್ತಾಕುಲ ಪೊಲೀಸರು ಲಕ್ಷಾಂತರ ಮೌಲ್ಯದ ಗೋವಾದ ಮದ್ಯ ಹಾಗೂ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
Karnataka| ನವೆಂಬರ್ 28 ಕ್ಕೆ ಕರಾವಳಿಗೆ ಪ್ರಧಾನಿ ಮೋದಿ| ಯಾವ ಕ್ಷೇತ್ರಗಳ ಭೇಟಿ ವಿವರ ಇಲ್ಲಿದೆ.
1,34 ,482 ರೂ ಮೌಲ್ಯದ 1570 ವಿವಿಧ ಬ್ಯಾಂಡ್ ನ ಗೋವಾ ಮದ್ಯ ವಶಕ್ಕೆ ಪಡೆಯಲಾಗಿದ್ದು ,ಕಾರವಾರದ ರಾಜೇಂದ್ರ ,ಗಣಪತಿ ,ದಿಲೀಪ್ ಬಂಧಿತ ಆರೋಪಿಗಳಾಗಿದ್ದಾರೆ.
ಗೋವಾ ದಿಂದ ಕಾರವಾರ ತಾಲೂಕಿನ ಮಾಯಾಂಗಿನಿ ಅರಣ್ಯದಲ್ಲಿ ಕರ್ನಾಟಕ ಗಡಿಗೆ ಸಾಗಾಟ ಮಾಡುವಾಗ ಗೋವಾ ಮದ್ಯ ಸಮೇತ ಚಿತ್ತಾಕುಲ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆ ಸಂಬಂಧ ಚಿತ್ತಾಕುಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Karwar|ವಯಸ್ಸಾದರೂ ವಿವಾಹವಾಗದೇ ಮನನೊಂದ ವ್ಯಕ್ತಿ ಚಾಕು ಇರಿದುಕೊಂಡು ಆತ್ಮಹತ್ಯೆ ಗೆ ಯತ್ನ