For the best experience, open
https://m.kannadavani.news
on your mobile browser.
Advertisement

Karnataka| ಈ ದಿನ ಎಲ್ಲಿ ಏನು ಸುದ್ದಿ| ಹೈಲೈಟ್ಸ್ ಸುದ್ದಿ ಇಲ್ಲಿದೆ.

ಕರ್ನಾಟಕದ ಪ್ರಮುಖ ಸುದ್ದಿ ಹೈಲೈಟ್ಸ್ — ಮಾಜಿ ಸಚಿವ ಹೆಚ್.ವೈ.ಮೇಟಿ ನಿಧನ, ಕುಮಟಾದಲ್ಲಿ ಚಿನ್ನಾಭರಣ ಕಳವು, ಭಟ್ಕಳದಲ್ಲಿ ಮಂಗಳಮುಖಿಯರ ಬಂಧನ, ಶಿರಸಿಯಲ್ಲಿ ವಾಹನ ಕಳವು, ಹಾವೇರಿಯಲ್ಲಿ ಆತ್ಮಹತ್ಯೆ ಮತ್ತು ಕಬ್ಬು ಬೆಳೆ ಬೆಂಕಿಗಾಹುತಿ ಸೇರಿದಂತೆ ಇಂದಿನ ಪ್ರಮುಖ ಸುದ್ದಿ ವಿವರ ಇಲ್ಲಿದೆ. Karnataka daily top news headlines today.
02:50 PM Nov 04, 2025 IST | ಶುಭಸಾಗರ್
ಕರ್ನಾಟಕದ ಪ್ರಮುಖ ಸುದ್ದಿ ಹೈಲೈಟ್ಸ್ — ಮಾಜಿ ಸಚಿವ ಹೆಚ್.ವೈ.ಮೇಟಿ ನಿಧನ, ಕುಮಟಾದಲ್ಲಿ ಚಿನ್ನಾಭರಣ ಕಳವು, ಭಟ್ಕಳದಲ್ಲಿ ಮಂಗಳಮುಖಿಯರ ಬಂಧನ, ಶಿರಸಿಯಲ್ಲಿ ವಾಹನ ಕಳವು, ಹಾವೇರಿಯಲ್ಲಿ ಆತ್ಮಹತ್ಯೆ ಮತ್ತು ಕಬ್ಬು ಬೆಳೆ ಬೆಂಕಿಗಾಹುತಿ ಸೇರಿದಂತೆ ಇಂದಿನ ಪ್ರಮುಖ ಸುದ್ದಿ ವಿವರ ಇಲ್ಲಿದೆ. Karnataka daily top news headlines today.

Karnataka| ಈ ದಿನ ಎಲ್ಲಿ ಏನು ಸುದ್ದಿ| ಹೈಲೈಟ್ಸ್ ಸುದ್ದಿ ಇಲ್ಲಿದೆ.

Advertisement

Karnataka:- ಉತ್ತರ ಕನ್ನಡ ,ಶಿವಮೊಗ್ಗ, ಹಾವೇರಿ,ಉಡುಪಿ,ಮಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಸುದ್ದಿಗಳ ವಿವರ ಇಲ್ಲಿದೆ.

Congress MLA siddana meti

ಕಾಂಗ್ರೆಸ್‌ ಹಿರಿಯ ಶಾಸಕ, ಮಾಜಿ ಸಚಿವ `ಹೆಚ್.ವೈ ಮೇಟಿ' ಇನ್ನಿಲ್ಲ

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ಹೆಚ್.ವೈ. ಮೇಟಿ (79) ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು. ಮೇಟಿ ಅವರು 14ನೇ ಕರ್ನಾಟಕ ವಿಧಾನಸಭೆಯ ಸದಸ್ಯರಾಗಿದ್ದರು ಮತ್ತು ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಅವರು 2013ರಲ್ಲಿ ಬಾಗಲಕೋಟೆ ಕ್ಷೇತ್ರದಿಂದ ಆಯ್ಕೆಯಾಗಿದ್ದರು ಮತ್ತು ಈ ಹಿಂದೆ ಗುಳೇದಗುಡ್ ವಿಧಾನಸಭಾ ಕ್ಷೇತ್ರದಿಂದಲೂ ಶಾಸಕರಾಗಿ ಆಯ್ಕೆಯಾಗಿದ್ದರು.

ಕುಮಟಾ(kumta): ಮನೆ ಬೀಗ ಮುರಿದು ₹77 ಸಾವಿರ ಮೌಲ್ಯದ ಚಿನ್ನಾಭರಣ ಕಳವು

ಕುಮಟಾ ತಾಲೂಕಿನ ಬೆಟ್ಕುಳಿ ರೈಲ್ವೆ ಬ್ರಿಡ್ಜ್ ಬಳಿ ಬೀಗ ಹಾಕಿದ್ದ ಮನೆಯ ಬಾಗಿಲು ಮುರಿದು ಒಳನುಗ್ಗಿದ ಅಪರಿಚಿತರು, ಸೇಫ್ ಲಾಕರ್‌ನಿಂದ ₹77,000 ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದಾರೆ. ಬೆಟ್ಕುಳಿ ನಿವಾಸಿ ರಶೀದಾ ಕೋಂ ಮುದಸ್ಸಿ‌ರ್ ನಜರ್ ಹೊಡೇಕರ ಅವರ ದೂರಿನ ಮೇರೆಗೆ, ಮುಖ್ಯ ಬಾಗಿಲಿನ ಬೀಗ ಮುರಿದು ಒಳನುಗ್ಗಿ, ಕಪಾಟಿನಲ್ಲಿದ್ದ ಸೇಫ್ ಲಾಕರ್‌ನಿಂದ ಮಾಂಗಲ್ಯ ಸರ ಮತ್ತು ಕಿವಿಯೋಲೆ ಸೇರಿದಂತೆ ಒಟ್ಟು ₹77,000 ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ. ಈ ಸಂಬಂಧ ಅಪರಿಚಿತ ಆರೋಪಿಗಳ ವಿರುದ್ಧ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭಟ್ಕಳ: ಚಿನ್ನದ ಸರ ದರೋಡೆ; ನಾಲ್ವರು ಮಂಗಳಮುಖಿಯರ ಬಂಧನ

Murudeshwara police arrest third gender

ಮುರ್ಡೇಶ್ವರದಲ್ಲಿ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಆ‌ರ್ ಎನ್ ಎಸ್‌ ಕಾಲೇಜು ಸಿಬ್ಬಂದಿ ಅರುಣಕುಮಾರ ಭಾಸ್ಕರ ನಾಯ್ಕ ಅವರ ಕುತ್ತಿಗೆಯಿಂದ ಚಿನ್ನದ ಸರ ಕಿತ್ತುಕೊಂಡ ನಾಲ್ವರು ಮಂಗಳಮುಖಿಯರನ್ನು ಮುರ್ಡೇಶ್ವರ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಪ್ರವಾಸಕ್ಕೆಂದು ಮೈಸೂರಿನಿಂದ ಬಂದಿದ್ದ ಈ ನಾಲ್ವರಲ್ಲಿ ಒಬ್ಬಳು ಅಪ್ರಾಪ್ತ ಎಂದು ತಿಳಿದು ಬಂದಿದೆ. ದೂರು ದಾಖಲಾದ ಬಳಿಕ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದು ದರೋಡೆ ಪ್ರಕರಣ ದಾಖಲಿಸಿದ್ದಾರೆ.

ಯಲ್ಲಾಪುರ(yallapur): ಅಕ್ರಮವಾಗಿ ಮದ್ಯಪಾನಕ್ಕೆ ಅವಕಾಶ; ಮಹಿಳೆ ವಿರುದ್ಧ ಪ್ರಕರಣ

Yallapur police station news

ಯಲ್ಲಾಪುರ ತಾಲೂಕಿನ ಹಿರೇವತ್ತಿ ಗ್ರಾಮದ ಇಂದಿರಾನಗರದಲ್ಲಿರುವ ಅಂಗಡಿಯೊಂದರಲ್ಲಿ ಪರವಾನಗಿ ಇಲ್ಲದೆ ಸಾರ್ವಜನಿಕರಿಗೆ ಮದ್ಯಪಾನಕ್ಕೆ ಅವಕಾಶ ನೀಡಿದ್ದ ಆರೋಪದ ಮೇಲೆ ಲಲಿತಾ ಕೋಂ ನಾರಾಯಣ ನಾಯ್ಕ (65) ಎಂಬ ಮಹಿಳೆಯ ವಿರುದ್ಧ ಯಲ್ಲಾಪುರ ಪೊಲೀಸ್‌ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಿಸಲಾಗಿದೆ. ಆರೋಪಿತೆ ತಮ್ಮ ಅಂಗಡಿಯ ಹಿಂಭಾಗದ ತಾತ್ಕಾಲಿಕ ಶೆಡ್‌ನಲ್ಲಿ ಯಾವುದೇ ಪಾಸ್ ಅಥವಾ ಪರವಾನಗಿ ಇಲ್ಲದೆ ಗ್ರಾಹಕರಿಗೆ ಸಾರಾಯಿ ಕುಡಿಯಲು ಅವಕಾಶ ಮಾಡಿಕೊಟ್ಟಿದ್ದರು. ಪೊಲೀಸರು ದಾಳಿ ನಡೆಸಿದಾಗ, 90 ml ಅಳತೆಯ ಎರಡು ವಿಸ್ಕಿ ಪೌಚ್‌ಗಳು, ಖಾಲಿ ಪೌಚ್‌ಗಳು, ಪ್ಲಾಸ್ಟಿಕ್ ಗ್ಲಾಸ್ ಮತ್ತು ಖಾಲಿ ನೀರಿನ ಬಾಟಲಿ ಪತ್ತೆಯಾಗಿದೆ.

ಶಿರಸಿ(sirsi):- ಮಹಾಲಕ್ಷ್ಮಿ ಸಾ-ಮಿಲ್ ಬಳಿ ₹4. 5 ಲಕ್ಷ ಮೌಲ್ಯದ ಸರಕು ವಾಹನ ಕಳವು

Sirsi market police station
Sirsi police

ಶಿರಸಿ-ಹುಬ್ಬಳ್ಳಿ ರಸ್ತೆಯಲ್ಲಿ ನಿಲ್ಲಿಸಿದ್ದ ₹4.5 ಲಕ್ಷ ಮೌಲ್ಯದ ಸರಕು ಸಾಗಣೆ ವಾಹನವನ್ನು ಕಳ್ಳರು ಕಳವು ಮಾಡಿರುವ ಘಟನೆ ಚಿಪಗಿ ಮಹಾಲಕ್ಷ್ಮಿ ಸಾ-ಮಿಲ್ ಹತ್ತಿರ ನಡೆದಿದೆ.

ದೂರುದಾರ ಕಾರ್ತಿಕ್ ಕುಮಾರ ಹುಡೇದ ಅವರ ಮನೆಯ ಎದುರು ನಿಲ್ಲಿಸಿದ್ದ ಕೆಎ-31 ಎ-3695 ನಂಬರಿನ ಅಶೋಕ ಲೇಲ್ಯಾಂಡ್ ದೋಸ್ತ್ ವಾಹನವನ್ನು ಕಳ್ಳರು ಕದ್ದಿದ್ದಾರೆ. ಕೃತ್ಯಕ್ಕೆ ಬಳಸಿದ್ದ ನೋಂದಣಿ ಫಲಕವಿಲ್ಲದ ಸುಜುಕಿ ಎಕ್ಸಿಸ್-125 ಸ್ಕೂಟರ್‌ನ್ನು ಸ್ಥಳದಲ್ಲಿಯೇ ಬಿಟ್ಟು ಹೋಗಿದ್ದಾರೆ. ಈ ಸಂಬಂಧ ಅಪರಿಚಿತ ಕಳ್ಳರ ವಿರುದ್ಧ ಸೋಮವಾರ ಶಿರಸಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖಾಧಿಕಾರಿ ಪಿಎಸ್‌ಐ ಅಶೋಕ ಆ‌ರ್. ರಾಠೋಡ ಅವರು ಆರೋಪಿತರ ಪತ್ತೆ ಕಾರ್ಯ ಕೈಗೊಂಡಿದ್ದಾರೆ.

ಬೈಂದೂರು: ಕಾ‌ರ್ ಹಾಗೂ ಸ್ಕೂಟರ್ ನಡುವೆ ಅಪಘಾತ! ಮಹಿಳೆ ಸಾವು

ಕುಂದಾಪುರ: ಕಾ‌ರ್ ಹಾಗೂ ಸ್ಕೂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸಹ ಸವಾರೆ ತಪ್ಪಿಯಾ ಬೇಗಂ ಎಂಬುವವರು ಮೃತಪಟ್ಟ ದಾರುಣ ಘಟನೆ ನಡೆದಿದೆ. ಗಾಯಗೊಂಡ ತಸ್ಟೀಯಾ ಬೇಗಂ ಕುಂದಾಪುರ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಈ ಕುರಿತು ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಾಹನ ಚಾಲಕರು ಜಾಗರೂಕತೆಯಿಂದ ವಾಹನ ಚಲಾಯಿಸಿ ರಸ್ತೆ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಕೋರಲಾಗಿದೆ.

ಬೈಂದೂರು: ಮರದಿಂದ ಕೆಳಬಿದ್ದು ಮೃತಪಟ್ಟ ವ್ಯಕ್ತಿ!

ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದ ಕಾಲ್ಲೋಡು ಗ್ರಾಮದ ಬಲಿಗೋಣದಲ್ಲಿ ಮರದಿಂದ ಕೆಳಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಬೆಳಗ್ಗೆ ತೋಟದ ಕೆಲಸಕ್ಕೆ ಹೋಗಿದ್ದಾಗ ಮರ ಹತ್ತಿ ಸೊಪ್ಪು ಕಡಿಯುತ್ತಿದ್ದಾಗ ಆಕಸ್ಮಿಕವಾಗಿ ಕೆಳಗೆ ಬಿದ್ದು ಗಾಯಗೊಂಡಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಮೃತಪಟ್ಟಿದ್ದಾರೆ.

(udupi)ಎರಡು ದಿನಗಳ ಕಾರ್ಯಾಚರಣೆ ನಾಗರಹೊಳೆಗೆ ಕಾಡಾನೆ ಸ್ಥಳಾಂತರ

Udupi elephant rescue
ಉಡುಪಿಯಲ್ಲಿ ಕಾಡಾನೆ ರಕ್ಷಣೆ

ಕಾರ್ಕಳದ ಕೆರೆಕಟ್ಟೆ ಪ್ರದೇಶದಲ್ಲಿ ಇಬ್ಬರ ಸಾವಿಗೆ ಕಾರಣವಾಗಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ರವಿವಾರ ಸಂಜೆ ಯಶಸ್ವಿಯಾಗಿ ಸೆರೆ ಹಿಡಿದಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ, ಕಾಡಿನಿಂದ ಸೊಪ್ಪು ತರಲು ಹೋಗಿದ್ದ ಹರೀಶ್ ಶೆಟ್ಟಿ (44) ಮತ್ತು ಉಮೇಶ್ ಗೌಡ (48) ಅವರ ಮೇಲೆ ಕಾಡಾನೆ ದಾಳಿ ನಡೆಸಿತ್ತು. ಈ ಘಟನೆಯ ನಂತರ ಸ್ಥಳೀಯರು ಪ್ರತಿಭಟನೆ ನಡೆಸಿ, ಪರಿಹಾರ ಹಾಗೂ ಆನೆ ಸೆರೆಹಿಡಿಯುವಂತೆ ಆಗ್ರಹಿಸಿದ್ದರು. ಹಿಡಿದ ಆನೆಯನ್ನು ನಾಗರಹೊಳೆಗೆ ಸ್ಥಳಾಂತರಿಸಲಾಗಿದೆ.

ಹಾವೇರಿ: ಸಹೋದರ ಸಾವು, ಮನನೊಂದು ಯುವತಿ ಆತ್ಮಹತ್ಯೆ.

ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ಮಾರುತಿ ನಗರದಲ್ಲಿ 21 ವರ್ಷದ ಜ್ಯೋತಿ ಸುಂಕದವರ ಎಂಬ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕಳೆದ ಆರು-ಏಳು ತಿಂಗಳ ಹಿಂದೆ ಆಕೆಯ ಸಹೋದರ ಮಹೇಶ ಮೆಲ್ಲೇರಿ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದನು. ಸಹೋದರನ ಸಾವಿನಿಂದ ಮನನೊಂದಿದ್ದ ಯುವತಿ ಖಿನ್ನತೆಗೆ ಒಳಗಾಗಿ ಈ ಕೃತ್ಯ ಎಸಗಿದ್ದಾಳೆ. ಈ ಸಂಬಂಧ ಶಹರ ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಿಸಲಾಗಿದೆ.

ಹಾವೇರಿ: ಬೆಂಕಿಗಾಹುತಿಯಾದ ಕಬ್ಬು ಬೆಳೆ

ತಾಲೂಕಿನ ದೇವಿಹೊಸೂರು ಗ್ರಾಮದಲ್ಲಿ ಜಮೀನಿನಲ್ಲಿ ಹಾದು ಹೋಗಿರುವ ವಿದ್ಯುತ್ ಲೈನ್‌ಗಳು ಶಾರ್ಟ್ ಸರ್ಕ್ಯೂಟ್ ಆಗಿ ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ, ನಾಗನಗೌಡ ಎಂಬುವವರಿಗೆ ಸೇರಿದ ಸುಮಾರು 2 ಎಕರೆ ಪ್ರದೇಶದಲ್ಲಿ ಬೆಳೆದಿದ್ದ 140 ಟನ್ ಕಬ್ಬು ಬೆಳೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿ, ಸುಮಾರು 4.70 ಲಕ್ಷ ರೂ. ನಷ್ಟ ಸಂಭವಿಸಿದೆ. ಈ ಸಂಬಂಧ ಹಾವೇರಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Rain news| ಕರಾವಳಿಯಲ್ಲಿ ಮತ್ತೆ ಮಳೆ | ಎಲ್ಲೆಲ್ಲಿ ಮಳೆ ಬೀಳಲಿದೆ ವಿವರ ಇಲ್ಲಿದೆ.

Karnataka| ಇಂದು ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಪೆಟ್ರೋಲ್ ದರ ಇಳಿಕೆ!

ರಾಜ್ಯದ ಬಹುತೇಕ ಕಡೆಗಳಲ್ಲಿ ಇಂದು ಇಂಧನ ದರದಲ್ಲಿ ಕೆಲ ಪೈಸೆಗಳಷ್ಟು ಏರಿಳಿತ ಕಂಡುಬಂದಿದೆ. ಬೆಂಗಳೂರು ಗ್ರಾಮಾಂತರ - ರೂ102.55 (16 ಪೈಸೆ ಇಳಿಕೆ),ಬಳ್ಳಾರಿ -  104.05 (04 ಪೈಸೆ ಇಳಿಕೆ), ಚಿತ್ರದುರ್ಗ - ರೂ.103.67 (41 ಪೈಸೆ ಇಳಿಕೆ), ದಕ್ಷಿಣ ಕನ್ನಡ - ರೂ. 102.22 (15 ಪೈಸೆ ಇಳಿಕೆ), ಕಲಬುರಗಿ -ರೂ. 102.98 ಇದ್ದು 50 ಪೈಸೆ ಇಳಿಕೆ ಕಂಡಿದೆ. ಕೆಲ ಜಿಲ್ಲೆಗಳಲ್ಲಿ ಪೆಟ್ರೋಟ್ ದರ ಸ್ವಲ್ಪ ಏರಿಕೆಯಾಗಿದ್ದು, ಇನ್ನು ಕೆಲ ಜಿಲ್ಲೆಗಳಲ್ಲಿ ಯತಾಸ್ಥಿತಿ ಮುಂದುವರೆದಿದೆ.

ಚಿನ್ನದ ಬೆಲೆಯಲ್ಲಿ ಏರುಪೇರು.! ಇಂದು 10 ಗ್ರಾಂ ಅಪರಂಜಿ ಚಿನ್ನದ ಬೆಲೆ ಎಷ್ಟಿದೆ

ಜಾಗತಿಕ ಆರ್ಥಿಕ ಶಕ್ತಿಗಳ ಬಡ್ಡಿದರ ಬದಲಾವಣೆ, ಡಾಲರ್ ಮೌಲ್ಯದ ಅಸ್ಥಿರತೆ ಮತ್ತು ಜಿಯೋಪಾಲಿಟಿಕಲ್ ಅಶಾಂತಿಗಳಿಂದಾಗಿ ಚಿನ್ನದ(gold rate) ದರ ಏರಿಕೆಯಾಗಿದೆ. ಹೂಡಿಕೆದಾರರು ತಮ್ಮ ಬಂಡವಾಳವನ್ನು ಸುರಕ್ಷತವಾಗಿರಿಸಲು ಚಿನ್ನದತ್ತ ಆಕರ್ಷಿತರಾಗುತ್ತಿದ್ದಾರೆ. ಭಾರತದಲ್ಲಿ, ವಿಶೇಷವಾಗಿ ಹಬ್ಬ ಮತ್ತು ಮದುವೆಗಳ ಸಂದರ್ಭದಲ್ಲಿ ಚಿನ್ನದ ಖರೀದಿಯು ಹೆಚ್ಚಾಗುವುದರಿಂದ ಸ್ಥಳೀಯ ಮಾರುಕಟ್ಟೆಯಲ್ಲೂ ಬೆಲೆ ಏರಿಕೆಯಾಗುತ್ತಿದೆ. ಬೆಂಗಳೂರಿನಲ್ಲಿ 24 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ ₹ 1,23,180 ಮತ್ತು 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ ₹ 1,12,910 ಆಗಿದೆ. ಒಂದು ಕೆಜಿ ಬೆಳ್ಳಿಯ ಬೆಲೆ ₹1,71,900 ತಲುಪಿದೆ.

ಫೋನ್ ಪೇ( phonepe) ಬಳಕೆದಾರರಿಗೆ ಬಿಗ್ ನ್ಯೂಸ್; ಕಂಪನಿಯಿಂದ ಪ್ರಮುಖ ಘೋಷಣೆ

ಡಿಜಿಟಲ್ ಪಾವತಿ ಅಪ್ಲಿಕೇಶನ್ ಫೋನ್‌ಪೇ, ವಂಚನೆಯ ವಹಿವಾಟುಗಳಿಂದ ಬಳಕೆದಾರರನ್ನು ರಕ್ಷಿಸಲು 'ಫೋನ್‌ಪೇ ಪ್ರೊಟೆಕ್ಟ್' ಎಂಬ ಹೊಸ ಭದ್ರತಾ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದೆ. ದೂರಸಂಪರ್ಕ ಇಲಾಖೆ (DoT) ಅನುಮಾನಾಸ್ಪದವೆಂದು ಗುರುತಿಸಲಾದ ಸಂಖ್ಯೆಗಳಿಂದ ಬರುವ ವಹಿವಾಟುಗಳನ್ನು ಪತ್ತೆಹಚ್ಚಿ ನಿರ್ಬಂಧಿಸುತ್ತದೆ. ಅನುಮಾನಾಸ್ಪದ ಸಂಖ್ಯೆಗಳಿಗೆ ಹಣ ಕಳುಹಿಸುವ ಪ್ರಯತ್ನಗಳ ವಿರುದ್ಧ ಇದು ಎಚ್ಚರಿಕೆ ನೀಡುತ್ತದೆ ಮತ್ತು ಭದ್ರತಾ ಕಾರಣಗಳಿಗಾಗಿ ವಹಿವಾಟುಗಳನ್ನು ನಿರಾಕರಿಸುವ ಅಪಾಯಗಳನ್ನು ವಿವರಿಸುತ್ತದೆ. ಭಾರತದಲ್ಲಿ ಸುರಕ್ಷತ ಡಿಜಿಟಲ್ ಪಾವತಿ ಫೋನ್‌ಪೇಯ ಪ್ರಯತ್ನ ಇದಾಗಿದೆ.

Honnavar :ಬಂದರು ವಿರೋಧಿ ಹೋರಾಟಕ್ಕೆ ಪಾಟ್ಕರ್ ಬೆಂಬಲ.

Honnavar kasrkod

ಹೊನ್ನಾವರ :-ಹೊನ್ನಾವರದ ಕಾಸರಕೋಡ್ ನಲ್ಲಿ ಖಾಸಗಿ ಬಂದರು ನಿರ್ಮಾಣ ವಿರೋಧಿಸಿ ಹೋರಾಟ ನಡೆಯುತಿದ್ದು ,ಇದನ್ನು ಬೆಂಬಲಿಸಿ ಮಹಿಳಾ ಹೋರಾಟಗಾರ್ತಿ ಮೇಧಾ ಪಾಟ್ಕರ್ ರವರು ಹೊನ್ನಾವರರದ ಕಾಸರಕೋಡು ಬಂದರಿಗೆ ಭೇಟಿ ನೀಡಿ ಬಂದರಿನಲ್ಲಿ ಮೀನುಗಾರರಿಗೆ ಆಗುತ್ತಿರುವ ಸಮಸ್ಯೆ ಕುರಿತು ಮೀನುಗಾರರಿಂದ ಮಾಹಿತಿ ಪಡೆದರು. ಇದಲ್ಲದೇ ಈ ಹೋರಾಟಕ್ಕೆ ಮೀನುಗಾರರ ಪರ ನಿಂತು ಬೆಂಬಲಿಸುವ ವಾಗ್ದಾನ ನೀಡಿದರು.

ಕಾರವಾರದಲ್ಲಿ ಮೀನಿನ ಭರ್ಜರಿ ಭೇಟೆ |ವಿಡಿಯೋ ನೋಡಿ

ದಾಂಡೇಲಿ ಸರಣಿ ಅಪಘಾತ ತಪ್ಪಿದ ದುರಂತ!

Dandeli accident news
ದಾಂಡೇಲಿ ಯಲ್ಲಿ ಸ್ಕೂಟಿ, ಟ್ರಾಕ್ಟರ್ ಅಪಘಾತವಾಗಿದ್ದು ಯಾವುದೇ ಪ್ರಾಣಾಪಾಯವಿಲ್ಲದೇ ಚಿಕ್ಕ ಪುಟ್ಟ ಗಾಯದಿಂದ ಸವಾರ ಬದುಕುಳಿದಿದ್ದಾನೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ