Bhatkal | ಮುಂಬೈ ನಿಂದ ಭಟ್ಕಳಕ್ಕೆ ಬಂದ ವಿ.ಆರ್.ಎಲ್ ಬಸ್ ನಲ್ಲಿತ್ತು ಲಕ್ಷ -ಲಕ್ಷ ಹಣ ,ಬಂಗಾರ| ಪೊಲೀಸರ ವಶಕ್ಕೆ.
Bhatkal | ಮುಂಬೈ ನಿಂದ ಭಟ್ಕಳಕ್ಕೆ ಬಂದ ವಿ.ಆರ್.ಎಲ್ ಬಸ್ ನಲ್ಲಿತ್ತು ಲಕ್ಷ -ಲಕ್ಷ ಹಣ ,ಬಂಗಾರ| ಪೊಲೀಸರ ವಶಕ್ಕೆ.
Bhatkal (04 November 2025) :- ದಾಖಲೆ ಇಲ್ಲದೇ ವಿ.ಆರ್.ಎಲ್ ಖಾಸಗಿ ಬಸ್ ನಲ್ಲಿ ಮುಂಬೈ ನಿಂದ ಭಟ್ಕಳಕ್ಕೆ ಪಾರ್ಸಲ್ ರೂಪದಲ್ಲಿ ಕಳುಹಿಸಿದ್ದ ನೀಲಿ ಸೂಟ್ ಕೇಸ್ ನಲ್ಲಿ ಬಂಗಾರ ಹಾಗೂ ಲಕ್ಷಾಂತರ ಮೌಲ್ಯದ ಹಣವನ್ನು ಖಚಿತ ಮಾಹಿತಿ ಪಡೆದ ಭಟ್ಕಳ(bhatkal) ಶಹರ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡ ಇಬ್ಬರನ್ನು ವಶಕ್ಕೆ ಪಡೆದ ಘಟನೆ ಇಂದು ರಾತ್ರಿ ನಡೆದಿದೆ.
Bhatkal| ಎಂಟು ಲಕ್ಷಕ್ಕೂ ಹೆಚ್ಚು ಮೌಲ್ಯದ ನಕಲಿ ಅಮೇರಿಕನ್ ಕರೆನ್ಸಿ ವಶಕ್ಕೆ ಆರೋಪಿ ಬಂಧನ
ಮುಂಬೈ ನಿಂದ ಭಟ್ಕಳ ಮಾರ್ಗವಾಗಿ ಮಂಗಳೂರಿಗೆ ತೆರಳುತಿದ್ದ ವಿ.ಆರ್.ಎಲ್ ಖಾಸಗಿ ಬಸ್ ಗೆ ಮುಂಬೈ ನಲ್ಲಿ ಅನಾಮಿಕ ವ್ಯಕ್ತಿಯೊಬ್ಬರು ನೀಲಿ ಬಣ್ಣದ ಸೂಟ್ ಕೇಸ್ ನನ್ನು ನೀಡಿ ಭಟ್ಕಳದಲ್ಲಿ ಇರ್ಫಾನ್ ಎಂಬುವವರು ತೆಗೆದುಕೊಳ್ಳುತ್ತಾರೆ ಎಂದು ನೀಡಿದ್ದರು.
ಈ ಮಾಹಿತಿಯನ್ನು ಪಡೆದಿದ್ದ ಭಟ್ಕಳ ಶಹರ ಠಾಣೆ ಸಿಪಿಐ ದಿವಾಕರ್ ರವರು ಭಟ್ಕಳದ ಶಂಶುದ್ದೀನ್ ಸರ್ಕಲ್ ಬಳಿ ಪಾರ್ಸಲ್ ಇಳಿಸುತಿದ್ದಂತೆ ತಪಾಸಣೆ ನಡೆಸಿ ನೀಲಿ ಬಣ್ಣದ ಸೂಟ್ ಕೇಸ್ ನನ್ನು ತೆರೆದಾಗ ಹಣ ,ಬಂಗಾರದ ಆಭರಣ ಪತ್ತೆಯಾಗಿದೆ.
Karnataka| ಈ ದಿನ ಎಲ್ಲಿ ಏನು ಸುದ್ದಿ| ಹೈಲೈಟ್ಸ್ ಸುದ್ದಿ ಇಲ್ಲಿದೆ.
49,98,400 ನಗದು ಹಣ, 401.04 ಗ್ರಾಂ ತೂಕದ 32 ಬಂಗಾರದ ಬಳೆ,ಮೊಬೈಲ್ ,ಪೆನ್ ಡ್ರೈವ್ ವಶಕ್ಕೆ ಪಡೆದು ಭಟ್ಕಳದ ಬಂದರು ರೂಡಿನ ಬಾಬಾ ನಂದ್ , ಉಸ್ಮಾನ್ ನಗರದ ಮೊಹ್ಮದ್ ಇರ್ಫಾನ್ ಎಂಬುವವರನ್ನು ಪ್ರಕರಣ ಸಂಬಂಧ ವಶಕ್ಕೆ ಪಡೆದಿದ್ದಾರೆ.
ಘಟನೆ ಸಂಬಂಧ ಭಟ್ಕಳ ಶಹರಾ ಠಾಣೆಯಲ್ಲಿ ಐಟಿ ಆಕ್ಟ್ ನಡಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಳ್ಳಲಾಗಿದೆ.