Bhatkal :ಅರಣ್ಯ ಒತ್ತುವರಿ-ಸಚಿವ ಮಂಕಾಳು ವೈದ್ಯ ವಿರುದ್ಧ ರಾಜ್ಯಪಾಲರಿಗೆ ದೂರು
Bhatkal :ಅರಣ್ಯ ಒತ್ತುವರಿ-ಸಚಿವ ಮಂಕಾಳು ವೈದ್ಯ ವಿರುದ್ಧ ರಾಜ್ಯಪಾಲರಿಗೆ ದೂರು
ಕಾರವಾರ:- ಉತ್ತರ ಕನ್ನಡ (uttara kannda) ಜಿಲ್ಲೆಯ ಉಸ್ತುವಾರಿ ಸಚಿವ ಮಂಕಾಳು ವೈದ್ಯ ವಿರುದ್ಧ ಅರಣ್ಯ ಒತ್ತುವರಿ ಹಾಗೂ ಅಧಿಕಾರ ದುರುಪಯೋಗ ಆರೋಪ ಕೇಳಿಬಂದಿದ್ದು ಸಚಿವ ಮಂಕಾಳು ವೈದ್ಯ ರ ವಿರುದ್ಧ ರಾಜ್ಯಪಾಲರು ಹಾಗೂ ರಾಜ್ಯ ಮುಖ್ಯ ಅರಣ್ಯಾಧಿಕಾರಿಗೆ ಭಟ್ಕಳದ ಆರ್‌ಟಿ. ಐ ಕಾರ್ಯಕರ್ತರಾದ ಶಂಕರ್ ನಾಯ್ಕ ,ನಾಗೇಂದ್ರ ನಾಯ್ಕ, ನಾಗೇಶ್ ನಾಯ್ಕ ಎಂಬುವವರಿಂದ ದೂರು ನೀಡಿದ್ದಾರೆ.
ಸಚಿವರ ಸಾಮ್ಯದಲ್ಲಿರುವ ಭಟ್ಕಳ ತಾಲೂಕಿನ ಬೈಲೂರಿನ ಸರ್ವೆ ನಂ- 577 ರಲ್ಲಿ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಕಟ್ಟಡವಿದ್ದು ಇದಕ್ಕೆ ತಾಗಿದ ಸರ್ಕಾರಿ ಅರಣ್ಯ ಭೂಮಿ ಸರ್ವೆ ನಂ-600 ರಲ್ಲಿನ ಭೂವಿಯನ್ನು ಅತಿಕ್ರಮಣಮಾಡಿ 2024 ರ ಮೇ 18 ರಂದು ಮಣ್ಣು ತೆಗೆಯಲಾಗಿದ್ದು ಒಂದು ಎಕರೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇದನ್ನೂ ಓದಿ:-Bhatkal ಒಂದು ಕೋಟಿಗೂ ಹೆಚ್ಚು ಮೌಲ್ಯದ ವಜ್ರ ಸಾಗಾಟ-ವ್ಯಕ್ತಿ ಬಂಧನ
ಇದಲ್ಲದೇ ಈ ಜಾಗದ ಒತ್ತುವರಿ ಸಂಬಂಧ ಸಂಬಂಧವಿಲ್ಲದ ವ್ಯಕ್ತಿಗಳ ವಿರುದ್ಧ ಮಂಕಿ ವಲಯ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ ಎಂದು ಆರ್.ಟಿ.ಐ ಕಾರ್ಯಕರ್ತರು ಆರೋಪಿಸಿದ್ದು , ಅಧಿಕಾರ ದುರುಪಯೋಗ , ಪ್ರಭಾವ ಬಳಸಿ ತಮ್ಮ ಮೇಲೆ ಆಗಬೇಕಿದ್ದ ದೂರನ್ನು ಬೇರೆಯವರ ಮೇಲೆ ಪ್ರಕರಣ ದಾಖಲಾಗುವಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.ಸಚಿವ ಮಂಕಾಳು ವೈದ್ಯ ವಿರುದ್ಧ ಪ್ರಕರಣ ದಾಖಲಿಸುವಂತೆ ರಾಜ್ಯ ಅರಣ್ಯ ಮುಖ್ಯಾಧಿಕಾರಿ, ರಾಜ್ಯಪಾಲರಿಗೆ ದೂರು ನೀಡುವ ಜೊತೆ ನ್ಯಾಯಾಲಯದಲ್ಲೂ ಪ್ರತ್ಯೇಕ ದೂರು ದಾಖಲು ಮಾಡಿದ್ದಾರೆ.