Bhatkal| ವೈದ್ಯನಿಂದ ವಿವಾಹವಾಗುವುದಾಗಿ ನಂಬಿಸಿ ಅ***ದೂರು ದಾಖಲು
Bhatkal| ವೈದ್ಯನಿಂದ ವಿವಾಹವಾಗುವುದಾಗಿ ನಂಬಿಸಿ ಅ***ದೂರು ದಾಖಲು
Bhatkal (october 14):- ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ (bhatkal) ಹೆಬಳೆ ಗಾಂಧೀನಗರದಲ್ಲಿ ವಾಸಿಸುವ 25 ವರ್ಷದ ಮಹಿಳೆಯೊಬ್ಬಳಿಗೆ ಮದುವೆಯಾಗುವುದಾಗಿ ಭರವಸೆ ನೀಡಿ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ದಾಖಲಾಗಿದೆ.
ದೂರುದಾರೆಯ ಪ್ರಕಾರ, ಆರೋಪಿ ಡಾ. ನಾಸೀರ್ ಅಹ್ಮದ್ (56),ಆಜಾದ್ ನಗರ 6ನೇ ಕ್ರಾಸ್, ಭಟ್ಕಳ ನಿವಾಸಿ, ಮದುವೆಯ ಭರವಸೆಯ ಮೇರೆಗೆ ಭಟ್ಕಳ, ಹೊನ್ನಾವರ, ಚಿಕ್ಕಮಗಳೂರು ಹಾಗೂ ಬೆಂಗಳೂರಿನ ಲಾಡ್ಜ್‌ಗಳಿಗೆ ಕರೆದುಕೊಂಡು ಹೋಗಿ ಬಲವಂತವಾಗಿ ಅನೇಕ ಬಾರಿ ದೈಹಿಕ ದೌರ್ಜನ್ಯ ನಡೆಸಿದ್ದಾನೆಂದು ಆರೋಪಿಸಲಾಗಿದೆ.
Bhatkal: ಅರಣ್ಯದಲ್ಲಿ ಗೋವುಗಳ ಅಸ್ಥಿಪಂಜರ ಪತ್ತೆ ಪ್ರಕರಣ ಬೆನ್ನಲ್ಲೇ ಈವರೆಗೆ ಸಿಕ್ತು 2425 ಕೆಜಿ ಗೋಮಾಂಸ!
ಮೊದಲು ಒಪ್ಪಿಗೆ ಇಲ್ಲದೆ ಸಂಬಂಧ ಬೆಳೆಸಿದ ನಂತರ, ಮದುವೆಯಾಗುತ್ತೇನೆ ಎಂದು ನಂಬಿಸಿ ಹತ್ತು ದಿನಗಳ ಕಾಲ ತನ್ನೊಂದಿಗೆ ಇಟ್ಟುಕೊಂಡು ದಿನಾಲು ಬಲವಂತವಾಗಿ ದೌರ್ಜನ್ಯ ಮುಂದುವರಿಸಿದ್ದಾನೆ. ಆದರೇ ,ನಂತರ ಮದುವೆಗೆ ನಿರಾಕರಿಸಿ,ಈ ವಿಷಯವನ್ನು ಯಾರಿಗೂ ಹೇಳಬೇಡ ಎಂದು ಬೆದರಿಕೆ ಹಾಕಿದ್ದಾನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಹಿನ್ನೆಲೆಯಲ್ಲಿ, ಭಟ್ಕಳ (bhatkal)ಗ್ರಾಮೀಣ ಠಾಣೆ ಪೊಲೀಸರು ಅತ್ಯಾಚಾರ, ಮೋಸ, ಅಪಹರಣ ಹಾಗೂ ಬೆದರಿಕೆ ಹಾಕುವ ಪ್ರಕರಣ ದಾಖಲಿಸಿಕೊಂಡು ಆರೋಪಿ ವೈದ್ಯನನ್ನು ಬಂಧಿಸಿದ್ದಾರೆ. ಮುಂದಿನ ತನಿಖೆ ಪ್ರಗತಿಯಲ್ಲಿದೆ.