Bhatkal| ಎಂಟು ಲಕ್ಷಕ್ಕೂ ಹೆಚ್ಚು ಮೌಲ್ಯದ ನಕಲಿ ಅಮೇರಿಕನ್ ಕರೆನ್ಸಿ ವಶಕ್ಕೆ ಆರೋಪಿ ಬಂಧನ
Bhatkal| ಎಂಟು ಲಕ್ಷಕ್ಕೂ ಹೆಚ್ಚು ಮೌಲ್ಯದ ನಕಲಿ ಅಮೇರಿಕನ್ ಕರೆನ್ಸಿ ವಶಕ್ಕೆ ಆರೋಪಿ ಬಂಧನ
ಕಾರವಾರ(24 october 2025):- ಭಟ್ಕಳದಲ್ಲಿ (bhatkal)ಅಮೇರಿಕನ್ ನಕಲಿ ಕರೆನ್ಸಿ ಸಾಗಾಟ ಮಾಡುತಿದ್ದ ವ್ಯಕ್ತಿಯನ್ನು ಬಂಧಿಸಿದ ಘಟನೆ ಶುಕ್ರವಾರ ನಡೆದಿದೆ.

ಗೋವಾ ಮಡಗಾಂವ್‌ನಿಂದ ಭಟ್ಕಳಕ್ಕೆ ನಕಲಿ ಅಮೇರಿಕನ್ ಕರೆನ್ಸಿ ನೋಟುಗಳನ್ನು ಸಾಗಾಟ ಮಾಡ್ತಿದ್ದ ವೇಳೆ ಭಟ್ಕಳ ನಗರ ಪೊಲೀಸ್ ಠಾಣೆಯ ಸಿಪಿಐ ದಿವಾಕರ ಪಿ.ಎಂ ಅವರ ನೇತೃತ್ವದ ತಂಡದ ಕಾರ್ಯಾಚರಣೆ ನಡೆಸಿ ಭಟ್ಕಳ ಚಿನ್ನದಪಳ್ಳಿ ಮುಸ್ಟಾ ಸ್ಟ್ರೀಟ್ ಬಂಡೆ ಹೌಸ್ ನಿವಾಸಿ ರುಕ್ನುದ್ದೀನ್ ಸುಲ್ತಾನ್ ಬಾಷಾ (62), ಆರೋಪಿಯನ್ನು ಬಂಧಿಸಿದ್ದಾರೆ.
Bhatkal | ಅಕ್ರಮ ಪಡಿತರ ಸಾಗಾಟ-ವಾಹನ ಸಮೇತ ಅಕ್ಕಿ ವಶಕ್ಕೆ ,ಆರೋಪಿಗಳ ಬಂಧನ
ಆರೋಪಿ ರೈಲಿನ ಮೂಲಕ ಮಡಗಾಂವ್‌ನಿಂದ ಅಮೇರಿಕನ್ ಕರೆನ್ಸಿ ನೋಟುಗಳನ್ನು ತಂದಿದ್ದು ಸ್ಕೂಟರ್‌ನಲ್ಲಿಟ್ಟು ಸ್ಥಳೀಯನಾದ ಕಪ್ಪಾ ಮುಜೀಬ್‌ಗೆ ಒಪ್ಪಿಸಲು ಯತ್ನಿಸುತ್ತಿದ್ದಾಗ ಪೊಲೀಸರಿಂದ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.
ಅಂದಾಜು 8ಲಕ್ಷ ರೂ. ಮೌಲ್ಯದ100 ಡಾಲರ್ ಮುಖಬೆಲೆಯ 14 ನೋಟುಗಳು, 50 ಡಾಲರ್ ಮುಖಬೆಲೆಯ 156 ನೋಟುಗಳು ವಶಕ್ಕೆ ಪಡೆಯಲಾಗಿದೆ.
ಘಟನೆ ಸಂಬಂಧ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.