Bhatkal| ಅರಣ್ಯದಲ್ಲಿ ರಾಶಿ-ರಾಶಿ ಗೋಮೂಳೆ ಪತ್ತೆ ಪ್ರಕರಣ -ಇಬ್ಬರು ಆರೋಪಿಗಳ ಬಂಧನ
Bhatkal| ಅರಣ್ಯದಲ್ಲಿ ರಾಶಿ-ರಾಶಿ ಗೋಮೂಳೆ ಪತ್ತೆ ಪ್ರಕರಣ -ಇಬ್ಬರು ಆರೋಪಿಗಳ ಬಂಧನ
ಕಾರವಾರ/ಭಟ್ಕಳ 17 September 2025:- ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರದ ಮಗ್ದೂಂ ಕಾಲೂನಿ ಬಳಿಯ ಬೆಳ್ನೆ ಗ್ರಾಮದ ಸರ್ವೆ ನಂಬರ್ 74 ರ ಅರಣ್ಯ ಭಾಗದಲ್ಲಿ ಗೋವುಗಳ ರಾಶಿ ರಾಶಿ ಮೂಳೆಗಳು ಪತ್ತೆಯಾದ ಪ್ರಕರಣ ಸಂಬಂಧ ಭಟ್ಕಳ ಶಹರ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
Bhatkal| ಗೋ ಬುರುಡೆ ಪ್ರಕರಣ| ಬಯಲು ಮಾಡಿದವರೇ ಆರೋಪಿಗಳು!
ಭಟ್ಕಳದ ಚೌಥನಿಯ ಮೊಹ್ಮದ್ ರಾಯನ್ s/o ಮಹ್ಮದ್ ರಿಜವಾನ್ , ಮಗ್ದೂಂ ಕಾಲೋನಿಯ ಮಹ್ಮದ್ ಸಂವನ್ ಬಂಧಿತ ಆರೋಪಿಗಳಾಗಿದ್ದಾರೆ.
ಇಬ್ಬರೂ ಗೋವುಗಳನ್ನು ಕಳ್ಳತನ ಮಾಡಿ ಭಟ್ಕಳಕ್ಕೆ ತಂದು ಮಾಂಸ ಬೇರ್ಪಡಿಸಿ ನಂತರ ಮಗ್ದೂ ಕಾಲೋನಿ ಸಮೀಪದ ಅರಣ್ಯದಲ್ಲಿ ಸುರಿಯುತಿದ್ದರು . ಇದಲ್ಲದೇ ಇನ್ನೂ ಹಲವು ಜನರು ಗೋಮಾಂಸ ಭಕ್ಷಿಸಿ ನಂತರ ಮೂಳೆಗಳನ್ನು ಅರಣ್ಯದಲ್ಲಿ ಎಸೆದುಹೋಗುತಿದ್ದರು.
ಘಟನೆ ಏನು?

ಕೆಲವು ದಿನಗಳ ಹಿಂದೆ ಮಗ್ದೂಂ ಕಾಲೂನಿ ಬಳಿಯ ಬೆಳ್ನೆ ಗ್ರಾಮದ ಸರ್ವೆ ನಂಬರ್ 74 ರ ಅರಣ್ಯ ಭಾಗದಲ್ಲಿ ದೊಡ್ಡ ಮಟ್ಟದ ಗೋವುಗಳ ಮೂಳೆಗಳ ರಾಶಿ ಪತ್ತೆಯಾಗಿತ್ತು.
Bhatkal|ಒಂದು ವಿಡಿಯೋ ದಿಂದ ಬಯಲಾಯ್ತು ಭಟ್ಕಳ ಬುರುಡೆ ರಹಸ್ಯ| ಅರಣ್ಯಾಧೀಕಾರಿ ಇಂದ ದೂರು ದಾಖಲು
ಈ ಕುರಿತು ಅರಣ್ಯ ಇಲಾಖೆ ಅಧಿಕಾರಿ ದೂರು ನೀಡಿದ ಹಿನ್ನಲೆಯಲ್ಲಿ ಎರಡು ತಂಡ ರಚಿಸಿ ತನಿಖೆ ನಡೆಸಲಾಗಿತ್ತು. ಭಟ್ಕಳ ಶಹರ ಠಾಣೆ ಸಿಪಿಐ ದಿವಾಕರ್ ನೇತ್ರತ್ವದಲ್ಲಿ ಪಿ.ಎಸ್.ಐ ನವೀನ್ ರವರ ತಂಡದಿಂದ ಕಾರ್ಯಾಚರಣೆ ನಡೆಸಿ ಮೊದಲ ಹಂತದಲ್ಲಿ ಇಬ್ಬರನ್ನು ಬಂಧಿಸಲಾಗಿದೆ.
Bhatkal|ಭಟ್ಕಳದ ಅರಣ್ಯದಲ್ಲಿ ಸಿಕ್ತು ಸಾವಿರಾರು ಗೋವುಗಳ ಮೂಳೆಗಳು!ಪೊಲೀಸರು ಹೇಳಿದ್ದೇನು?
ಇನ್ನು ಈ ಅರಣ್ಯದಲ್ಲಿ ಹಲವರು ಗೋವುಗಳ ಅಸ್ಥಿಪಂಜರ ಹಾಕಿದ್ದು ,ತನಿಖೆ ಮುಂದುವರೆಸಲಾಗಿದೆ.