Sharavathi |ಶರಾವತಿ ಭೂಗತ ಜಲವಿದ್ಯುತ್ ಯೋಜನೆ ಕುರಿತ ಸಾರ್ವಜನಿಕ ಅಹವಾಲು ಸ್ವೀಕಾರ-ಸಭೆಯಲ್ಲಿ ನಡೆದಿದ್ದು ಏನು?
Sharavathi |ಶರಾವತಿ ಭೂಗತ ಜಲವಿದ್ಯುತ್ ಯೋಜನೆ ಕುರಿತ ಸಾರ್ವಜನಿಕ ಅಹವಾಲು ಸ್ವೀಕಾರ-ಸಭೆಯಲ್ಲಿ ನಡೆದಿದ್ದು ಏನು?
Shivamogga news:- ಶರಾವತಿ ಪಂಪ್ ಸ್ಟೋರೇಜ್ ಭೂಗತ ಜಲ ವಿದ್ಯುತ್ ಯೋಜನೆ ಕುರಿತು ಸಾರ್ವಜನಿಕ ಅಭಿಪ್ರಾಯ ಹಾಗೂ ಅಹವಾಲು ಸಂಗ್ರಹಿಸಲು ಶಿವಮೊಗ್ಗ ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಕರ್ನಾಟಕ ಪವರ್ ಕಾರ್ಪೊರೇಶನ್ ಸಂಯುಕ್ತವಾಗಿ ಸಾಗರ ತಾಲ್ಲೂಕಿನ ಕಾರ್ಗಲ್ ನ ಕೆಪಿಸಿ ರಿಕ್ರಿಯೇಷನ್ ಕ್ಲಬ್ ನಲ್ಲಿ ಪರಿಸರ ಸಂಬಂಧಿತ ಸಾರ್ವಜನಿಕ ಅಹವಾಲು ಸ್ವೀಕಾರ ಸಭೆಯನ್ನು ಮಂಗಳವಾರ ನಡೆಸಿತು.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸಂಬಂಧಿಸಿದಂತೆ ವಿರೋಧ ಮತ್ತು ಬೆಂಬಲದ ಅಭಿಪ್ರಾಯಗಳನ್ನು ಸಂಗ್ರಹಿಸುವ ಉದ್ದೇಶದಿಂದ ಈ ಸಭೆ ಆಯೋಜಿಸಲಾಗಿತ್ತು.
ಸಭೆಯನ್ನು ಶಿವಮೊಗ್ಗ ಡಿಸಿ ಗುರುದತ್ತ ಹೆಗ್ಡೆ, ಉಪ ಅರಣ್ಯ ಸಂರಕ್ಷಕ (ವೈಲ್ಡ್) ಪ್ರಸನ್ನ ಕೃಷ್ಣ ಪಾಟಗಾರ್, ಕರ್ನಾಟಕ ಪವರ್ ಕಾರ್ಪೊರೇಶನ್ ಅಧಿಕಾರಿಗಳು ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಜಿಲ್ಲಾ ಕಚೇರಿ ಅಧಿಕಾರಿಗಳು ಸೇರಿ ಅಧ್ಯಕ್ಷತೆ ವಹಿಸಿದ್ದರು. ಸುಮಾರು 1,000 ಮಂದಿ ಸಭೆಯಲ್ಲಿ ಪಾಲ್ಗೊಂಡಿದ್ದರು. ರಾಜಕಾರಣಿಗಳು ಮತ್ತು ಪರಿಸರ ಹೋರಾಟಗಾರರು ಸಹ ಈ ಸಭೆಯಲ್ಲಿ ಹಾಜರಿದ್ದರು.

ಪ್ರಮುಖ ಹೋರಾಟಗಾರರಾದ ಜೋಸೆಫ್ ಹೂವರ್, ಅಖಿಲೇಶ್ ಚಿಪ್ಲಿ ಮತ್ತು ಅನಂತ ಹೆಗಡೆ ಅಶಿಸರ ಯೋಜನೆಗೆ ವಿರೋಧ ವ್ಯಕ್ತಪಡಿಸಿ ಮುಖ್ಯವಾಗಿ ವಿವರವಾದ ಯೋಜನಾ ವರದಿ (DPR) ಒದಗಿಸಬೇಕೆಂದು ಒತ್ತಾಯಿಸಿದರು. ಹೋರಾಟಗಾರ ಅಖಿಲೇಶ್ ಅವರು ವರದಿ ಬಹಿರಂಗಪಡಿಸುವವರೆಗೂ ಸಭೆಯನ್ನು ಮುಂದೂಡಬೇಕೆಂದು ಒತ್ತಾಯಿಸಿದರು. ಕೆಲವರು ಮಾಹಿತಿಯನ್ನು ಸುಲಭವಾಗಿ ತಲುಪಿಸಲು ಕನ್ನಡ ಆವೃತ್ತಿಯೂ ಬೇಕೆಂದು ವಾದಿಸಿದರು.
Sharavathi :ಶರಾವತಿ ಪಂಪ್ ಸ್ಟೋರೇಜ್ ಜಲವಿದ್ಯುತ್ ಯೋಜನೆ ಅನುಷ್ಟಾನಕ್ಕೆ MOEFCC ಯಿಂದ ತಿರಸ್ಕಾರ
ಮಾಜಿ ಶಾಸಕ ಹರತಾಳು ಹಲಪ್ಪ ಅವರು ಅರಣ್ಯ ಇಲಾಖೆಯ ಅಧಿಕಾರಿಗಳು ಗುತ್ತಿಗೆದಾರರ ಪರವಾಗಿ ನಿಂತಿದ್ದಾರೆ ಪರಿಸರ ಹಾನಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿದರು. ಅರಣ್ಯ ನಾಶವು ಯೋಜನೆ ಪೂರ್ಣಗೊಂಡ ನಂತರ ಪ್ರಾರಂಭವಾಗುತ್ತದೆ, ಏಕೆಂದರೆ ಬೆಂಗಳೂರಿನಂತಹ ನಗರಗಳಿಗೆ ವಿದ್ಯುತ್ ಲೈನ್ ಹಾಕಲು ನೂರಾರು ಎಕರೆ ಕಾಡು ಕಡಿದುಹಾಕಬೇಕಾಗುತ್ತದೆ ಎಂದು ಅವರು ವಿರೋಧಿಸಿದರು.
Green Lives ಸಂಘಟನೆಯ ಪರಿಸರ ಹೋರಾಟಗಾರ ಶ್ರವಣ್ ಅವರು ರಾಜ್ಯದಾದ್ಯಂತ ಪೂರ್ಣ ಮಟ್ಟದ ವಿರೋಧವನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
Karnataka|ಶರಾವತಿ ಪಂಪ್ ಸ್ಟೋರೇಜ್ ಭೂಗತ ಜಲ ವಿದ್ಯುತ್ ಯೋಜನೆಗೆ ಸಿದ್ದತೆ| ಏಷ್ಟು ಭೂಮಿ ಹೋಗಲಿದೆ ಗೊತ್ತಾ?
ಅವರು Change.org ಮೂಲಕ ಶರಾವತಿ ಪಂಪ್ ಸ್ಟೋರೇಜ್ ಯೋಜನೆ ವಿರೋಧಿಸಿ 14,090 ಆನ್‌ಲೈನ್ ಸಹಿಗಳು ಹಾಗೂ ಸಭೆಯಲ್ಲಿ 100 ಹಾರ್ಡ್‌ಕಾಪಿ ಸಹಿಗಳನ್ನು ಸಂಗ್ರಹಿಸಿದ್ದು,ಪುರಾತತ್ವ ತಜ್ಞರಾದ ಅಜಯ್ ಕುಮಾರ್ ಶರ್ಮ ಅವರ ನೇತೃತ್ವದಲ್ಲಿ, ಯೋಜನೆಯ ಸ್ಥಳದಲ್ಲಿರುವ ನಗರಬಾಸ್ತಿ ತಾಣವನ್ನು ರಕ್ಷಿಸಲು 470 ಸಹಿಗಳನ್ನು ಪಡೆದುಕೊಂಡರು. ಎನ್‌ಜಿಒಗಳು ಮತ್ತು ಟ್ರಸ್ಟ್‌ಗಳು ವೈಯಕ್ತಿಕವಾಗಿ 806 ಸಹಿಗಳನ್ನು ಸಂಗ್ರಹಿಸಿ, ಲಿಖಿತ ರೂಪದಲ್ಲಿ ಶಿವಮೊಗ್ಗ ಡಿಸಿ ಅವರಿಗೆ ಹಸ್ತಾಂತರಿಸಿದರು.
ಚಿಕ್ಕಮಗಳೂರಿನ ಹೋರಾಟಗಾರ ವೀರೇಶ್ ಜಿ ಅವರು ಅಹವಾಲು ಸಭೆಯನ್ನೂ ಇನ್ನೂ ಒಂದು ದಿನ ಮುಂದುವರೆಸಬೇಕು ಇನ್ನೂ ಹೆಚ್ಚಿನ ಸಾರ್ಬಜನಿಕ ಅಹವಾಲು ಸ್ವೀಕರಿಸಲು ಹಾಗೂ ಜನರು ಅಹವಾಲು ನೀಡಲು ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.
ಆದರೆ ಶಿವಮೊಗ್ಗ ಡಿಸಿ ಗುರುದತ್ತ ಹೆಗ್ಡೆ ಅವರು ಈ ಪ್ರಸ್ತಾಪವನ್ನು ತಳ್ಳಿಹಾಕಿದ್ದು ,ಮಾರ್ಗಸೂಚಿಗಳ ಪ್ರಕಾರವೇ ಸಭೆಯನ್ನು ನಡೆಸಿ ಸಂಜೆಯಲ್ಲಿ ಮುಗಿಸಲಾಗಿದೆ ಎಂದರು. ಎಲ್ಲ ಅಭಿಪ್ರಾಯ ಪತ್ರಗಳನ್ನು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಕಳುಹಿಸಲಾಗುವುದು. ಹೆಚ್ಚಿನ ಹೋರಾಟಗಾರರು ಡಿಪಿಆರ್ ವಿವರಗಳನ್ನು ಕೇಳಿದ ಬಗ್ಗೆ ಗಂಭೀರವಾಗಿ ಪರಿಗಣಿಸಲಾಗಿದ್ದು ,ತಾನು ಮಧ್ಯವರ್ತಿಯಾಗಿ ಮಾತ್ರ ಕೆಲಸ ಮಾಡುವುದಾಗಿ ಹೇಳಿದರು.

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ 2,000 ಮೆಗಾವಾಟ್ ಜಲವಿದ್ಯುತ್ ಯೋಜನೆಯಾಗಿದ್ದು, ಇದು ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಗಡಿಯಲ್ಲಿ ಇರುವ ಶರಾವತಿ ಕಣಿವೆಯ ಸಿಂಗಳೀಕ ಮಂಗಗಳ ಸಂರಕ್ಷಿತ ಅರಣ್ಯದಲ್ಲಿ ರೂಪಿಸಲಾಗಿದೆ. ಈ ಯೋಜನೆ ಅಡಿಯಲ್ಲಿ, ಆಫ್-ಪೀಕ್ ಅವಧಿಯಲ್ಲಿ ಗೇರಸೊಪ್ಪ ಅಣೆಕಟ್ಟಿನಿಂದ ತಲಕಳಲೆ ಅಣೆಕಟ್ಟಿಗೆ ನೀರನ್ನು ಹರಿಸಲಾಗುವುದು ಮತ್ತು ಪೀಕ್ ಅವಧಿಯಲ್ಲಿ ವಿದ್ಯುತ್ ಉತ್ಪಾದಿಸಲಾಗುತ್ತದೆ. ನವೀಕರಿಸಬಹುದಾದ ಶಕ್ತಿಯ ಗುರಿಗಳನ್ನು ಸಾಧಿಸಲು ಹಾಗೂ ವಿದ್ಯುತ್ ಗ್ರೀಡ್‌ನ ಸ್ಥಿರತೆಯನ್ನು ಕಾಪಾಡಲು ಈ ಯೋಜನೆಯು ಸಹಕಾರಿ ಎಂದು ಹೇಳಲಾಗಿದೆ. ಆದರೆ, ಇದರ ಪರಿಸರದ ಮೇಲೆ ಪರಿಣಾಮ, ಅರಣ್ಯ ನಾಶ, ಸ್ಥಳೀಯ ಜೀವ ವೈವಿಧ್ಯತೆ ಮತ್ತು ವನ್ಯಜೀವಿಗಳ ಮೇಲೆ ದುಷ್ಪರಿಣಾಮ ಎಂಬ ಆತಂಕಗಳು ವ್ಯಕ್ತವಾಗಿವೆ.

ಮುಂದಿನ ಸಾರ್ವಜನಿಕ ವಿಚಾರಣೆ ಸೆಪ್ಟೆಂಬರ್ 18 ರಂದು ಗೆರಸೊಪ್ಪದಲ್ಲಿ ನಡೆಯಲಿದೆ. ಉತ್ತರ ಕನ್ನಡದ ಶರಾವತಿ ನದಿಯ ತಟದ ಜನರಿಗೆ ಇದು ಸಂಬಂಧಿಸಿದೆ. ಮೂಲಗಳ ಪ್ರಕಾರ, ಈ ಸಭೆಗೆ ಕನಿಷ್ಠ 5,000 ಜನರನ್ನು ಸೇರಿಸಲು ನೂರಾರು ಸಂಘಟನೆಗಳು ಸಿದ್ಧತೆ ನಡೆಸುತ್ತಿವೆ ಎಂದು ಅಂದಾಜಿಸಲಾಗಿದ್ದು ಈಗಾಗಲೇ ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.

