Mundgod| ನಕಲಿ ವೈದ್ಯೆಯ ಕ್ಲಿನಿಕ್ ಗೆ ದಾಳಿ-ವೈದ್ಯೆ ಚಿಕಿತ್ಸೆ ನೋಡಿ ಆರೋಗ್ಯಾಧಿಕಾರಿಗಳೇ ಶಾಕ್ !
Mundgod| ನಕಲಿ ವೈದ್ಯೆಯ ಕ್ಲಿನಿಕ್ ಗೆ ದಾಳಿ-ವೈದ್ಯೆ ಚಿಕಿತ್ಸೆ ನೋಡಿ ಆರೋಗ್ಯಾಧಿಕಾರಿಗಳೇ ಶಾಕ್ !
Mundgod news :- ಮುಂಡಗೋಡ ತಾಲೂಕಿನ ಕಾತೂರ ಗ್ರಾಮದ ನಕಲಿ ಕ್ಲಿನಿಕ್ ಮೇಲೆ ಆರೋಗ್ಯ ಇಲಾಖೆಯ( health department) ಅಧಿಕಾರಿಗಳು ದಾಳಿ ನಡೆಸಿದ ಘಟನೆ ಬುಧವಾರ ನಡೆದಿದೆ. ಯಾವುದೇ ಪದವಿ ಪಡೆಯದೇ ಕ್ಲಿನಿಕ್ ನಡೆಸುತ್ತಿದ್ದ ಮಹಿಳೆಯೋರ್ವರು, ಅಜ್ಜಿಯೊಬ್ಬಳಿಗೆ ಸಲಾಯಿನ್ ಬಾಟಲ್ ಹಚ್ಚಿದ್ದನ್ನು ಸ್ವತಃ ಜಿಲ್ಲಾ ಆರೋಗ್ಯಾಧಿಕಾರಿಯೇ ಗಮನಿಸಿ ಹೈರಾಣಾದರು.
Mundgod: ವಿದ್ಯಾರ್ಥಿ ಪಾಠ ಕಲಿಯಲಿಲ್ಲ ,ಶಿಕ್ಷಕಿ ಹೊಡೆತಕ್ಕೆ ಮೈಯೆಲ್ಲಾ ಬಾಸುಂಡೆ!
ಇನ್ನೂ ಯಾವುದೋ ರೋಗಕ್ಕೆ ಯಾವುದೋ ಮಾತ್ರೆ ಕೊಟ್ಟು ದುಡ್ಡು ಪೀಕುತಿದ್ದ ಈ ನಕಲಿ ವೈದ್ಯೆಯನ್ನ ಡಿ.ಹೆಚ್.ಓ ತರಾಟೆ ತೆಗೆದುಕೊಂಡರು.
ಕೆ.ಪಿ.ಎಂ.ಇ. ನೋಂದಣಿ ಇಲ್ಲದೆ ಅನಧಿಕೃತವಾಗಿ ಕ್ಲಿನಿಕ್ ನಡೆಸುತ್ತಿದ್ದ ರತ್ನಮ್ಮ ಅವರ ಕ್ಲಿನಿಕ್ ಗೆ ಬೀಗ ಹಾಕಲಾಯಿತು. ಇವರು ಈ ಹಿಂದೆಯೂ ಇದೇ ರೀತಿ ದಾಳಿ ಮಾಡಿದಾಗ ಸಿಕ್ಕಿಬಿದ್ದಿದ್ದರು. ಆಗ ಅನಧಿಕೃತ ಕ್ಲಿನಿಕ್ ನಡೆಸುವುದಿಲ್ಲ ಎಂದು ಮುಚ್ಚಳಿಕೆ ಬರೆದು ಕೊಟ್ಟಿದ್ದರು. ಆದರೂ ಕೂಡ ಮತ್ತೆ ಕ್ಲಿನಿಕ್ ನಡೆಸುತ್ತಿದ್ದಾರೆ ಎಂದು ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಮರು ದಾಳಿ ನಡೆಸಿ ಕ್ಲಿನಿಕ್ ಬಂದ್ ಮಾಡಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನೀರಜ್ ಬಿ., ತಾಲೂಕ ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ್, ಆಡಳಿತ ವೈದ್ಯಾಧಿಕಾರಿ ಡಾ.ಭರತ್ ಹಾಗೂ ತಂಡ ಈ ದಾಳಿ ನಡೆಸಿದ್ದರು.
ಸಧ್ಯ ಉತ್ತರ ಕನ್ನಡ ಜಿಲ್ಲೆಯಲ್ಲಿ ನಕಲಿ ವೈದ್ಯರ ದಾಳಿ ಹೆಚ್ಚಾಗಿ ಇದ್ದು ಮುಗ್ಧ ಜನ ಇವರ ಬಳಿ ಚಿಕಿತ್ಸೆಗೆ ಹೋಗಿ ತೊಂದರೆ ಅನುಭವಿಸುತಿದ್ದಾರೆ.
ಈ ಹಿಂದೆ ಅಂಕೋಲದಲ್ಲಿ ಸಹ ನಕಲಿ ವೈದ್ಯ( fake doctor) ಗಳ ಹಾವಳಿ ಹೆಚ್ಚಾಗಿದ್ದು ದಾಳಿ ನಡೆಸಿ ಬಂದ್ ಮಾಡಿಸಲಾಗಿತ್ತು.