Bhatkal | 180 ಕ್ಕೂ ಹೆಚ್ಚು ಗ್ರಾಹಕರಿಗೆ ವಂಚನೆ ಎಸ್.ಪಿ ಈ ಬಗ್ಗೆ ಹೇಳಿದ್ದೇನು?
Bhatkal | 180 ಕ್ಕೂ ಹೆಚ್ಚು ಗ್ರಾಹಕರಿಗೆ ವಂಚನೆ ಎಸ್.ಪಿ ಈ ಬಗ್ಗೆ ಹೇಳಿದ್ದೇನು?
ಕಾರವಾರ :- ಅತೀ ಕಡಿಮೆ ಬೆಲೆಯಲ್ಲಿ ಪರ್ನೀಚರ್ ನೀಡುವುದಾಗಿ ಗ್ರಾಹಕರನ್ನು ನಂಬಿಸಿ ಲಕ್ಷಾಂತರ ಮುಂಗಡ ಹಣ ಪಡೆದು ವಂಚಿಸಿ ವ್ಯಾಪಾರಿಗಳು ನಾಪತ್ತೆಯಾದ ಘಟನೆ ಭಟ್ಕಳದಲ್ಲಿ ನಡೆದಿದ್ದು , ಲಕ್ಷಾಂತರ ರಯಪಾಯಿ ಕಳೆದುಕೊಂಡ 180 ಕ್ಕೂ ಹೆಚ್ಚು ಗ್ರಾಹಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಹೌದು ಈ ಘಟನೆ ನಡೆದಿರುವುದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ(bhatkal) ನಗರದಲ್ಲಿ. ಇಲ್ಲಿನ ಕಾರ್ ಸ್ಟ್ರೀಟ್ ನ ಯುನಿಯನ್ ಬ್ಯಾಂಕ್ ಕಟ್ಟದಲ್ಲಿ ಎರಡು ತಿಂಗಳ ಹಿಂದೆ ಗ್ಲೋಬಾಲ್ ಎಂಟರ್ ಪ್ರೈಸಸ್ ಎಂಬ ಗೃಹ ಬಳಕೆ ವಸ್ತುಗಳ ಮಳಿಗೆಯನ್ನು ತೆರೆಯಲಾಗಿದ್ದು ,ಎಲ್ಲಾ ಗೃಹಬಳಕೆ ವಸ್ತುಗಳ ಮೇಲೆ 10% ನಿಂದ 40% ಕಡಿಮೆ ಬೆಲೆಯಲ್ಲಿ ನೀಡುವುದಾಗಿ ಜಾಹಿರಾತು ನೀಡಿತ್ತು.
Karnataka| ನವೆಂಬರ್ 28 ಕ್ಕೆ ಕರಾವಳಿಗೆ ಪ್ರಧಾನಿ ಮೋದಿ| ಯಾವ ಕ್ಷೇತ್ರಗಳ ಭೇಟಿ ವಿವರ ಇಲ್ಲಿದೆ.
ಕಡಿಮೆ ಬೆಲೆಗೆ ಉತ್ತಮ ಗೃಹ ಬಳಕೆ ವಸ್ತುಗಳು ದೊರೆಯುವ ಮೂಹಕ್ಕೆ ಬಿದ್ದು ಮಳಿಗೆಗೆ ಭೇಟಿ ಕೊಟ್ಟ ಗ್ರಾಹಕರು ಫರ್ನೀಚರ್ಸ್ ,ಟಿವಿ,ಫ್ರಿಜ್ ಹೀಗೆ ಯಾವುದು ತಮಗೆ ಅವಷ್ಯವೂ ಅದನ್ನು ಬುಕ್ ಮಾಡಿದ್ದಾರೆ. ಮುಂಗಡ ಹಣ ನೀಡಿದ್ದಾರೆ. ಮೊದಲು ಗ್ರಾಹಕರ ನಂಬಿಕೆಗಾಗಿ ಉತ್ತಮ ದುಬಾರಿ ವಸ್ತುಗಳನ್ನು ಕಡಿಮೆ ಬೆಲೆಯಲ್ಲಿ ನೀಡಿ ,ಮೊದಲು ಬುಕ್ ಮಾಡಿದ ಗ್ರಾಹಕರಿಗೆ ಹೋಮ್ ಡಿಲವರಿ ಮಾಡಿದ್ದರು. ಇದರಿಂದ ನಂಬಿದ ನೂರಾರು ಜನ ಮೂರು ಲಕ್ಷದ ವರೆಗೂ ಹಣ ನೀಡಿ ಮುಂಗಡ ಬುಕ್ ಮಾಡಿದ್ದರು. ಆದರೇ ಈ ಬಗ್ಗೆ ಅನುಮಾನ ಗೊಂಡ ಸನಾವುಲ್ಲಾ ಖಾನ್ ಎಂಬುವವರು ಈ ಮಳಿಗೆ ವಿರುದ್ಧ ಶಹರ ಠಾಣೆಯಲ್ಲಿ ವಂಚನೆ ಕುರಿತು ದೂರು ನೀಡಿದ್ದರು.ಇನ್ನು ದೂರು ದಾಖಲಾಗಿ ಪೊಲೀಸರು ತನಿಖೆಗೆ ಇಳಿದಾಗ ರಾತ್ರೋ ರಾತ್ರಿ ನೂರಾರು ಜನರಿಗೆ ಲಕ್ಷಾಂತರ ಹಣ ವಂಚಿಸಿ ಪರಾರಿಯಾಗಿದ್ದಾರೆ.
Bhatkal | ಮುಂಬೈ ನಿಂದ ಭಟ್ಕಳಕ್ಕೆ ಬಂದ ವಿ.ಆರ್.ಎಲ್ ಬಸ್ ನಲ್ಲಿತ್ತು ಲಕ್ಷ -ಲಕ್ಷ ಹಣ ,ಬಂಗಾರ| ಪೊಲೀಸರ ವಶಕ್ಕೆ.
ಇನ್ನು ಗ್ಲೋಬಾಲ್ ಎಂಟರ್ ಪ್ರೈಸಸ್ ಎಂದು ಗೃಹ ಬಳಕೆ ವಸ್ತುಗಳ ಮಳಿಗೆಯನ್ನು ಕೇರಳದ ಮೂರು ಜನ ಹಾಗೂ ಭಟ್ಕಳದವರನ್ನು ಕೆಲಸಕ್ಕೆ ತೆಗೆದುಕೊಂಡು ಪ್ರಾರಂಭಿಸಿದ್ದರು. ಹೀಗಾಗಿ ಭಟ್ಕಳದವರಿಗೆ ಈ ಶಾಪ್ ಬಗ್ಗೆ ಒಂದುಷ್ಟು ನಂಬಿಕೆ ಹೆಚ್ಚಾಗಲು ಕಾರಣವಾಗಿತ್ತು.
ಇನ್ನು ಮೊದಲು ಬುಕ್ ಮಾಡಿದವರಿಗೆ ಗೃಹ ಬಳಕೆ ವಸ್ತುಗಳನ್ನು10% ರಿಂದ 40 % ವರೆಗೆ ಕಡಿಮೆ ದರದಲ್ಲಿ ನೀಡಿದ್ದರಿಂದ ಇನ್ನೂ ನಂಬಿಕೆ ಹೆಚ್ಚಾಗಿತ್ತು. ಹೀಗಾಗಿ 180 ಕ್ಕೂ ಹೆಚ್ಚು ಜನರು14 ಲಕ್ಷಕ್ಕೂಹೆಚ್ಚು ಮುಂಗಡ ಹಣ ನೀಡಿದ್ದರು. ಆದರೇ ಎಲ್ಲಿ ದೂರು ದಾಖಲಾಗುತಿದ್ದಂತೆ ಕೇರಳದ ಮೂವರು ತಲೆಮರೆಸಿಕೊಂಡಿದ್ದಾರೆ. ಇನ್ನು ಹಣ ಕೊಟ್ಟ ಗ್ರಾಹಕರು ವಂಚನೆಗೊಳಗಾಗಿದ್ದು ತಿಳಿಯುತಿದ್ದಂತೆ ಅಂಗಡಿ ಮುಂದೆ ಜಮಾಯಿಸಿ ಗೃಹಬಳಕೆ ವಸ್ತುಗಳನ್ನು ಗೋಡನ್ ನಿಂದ ಎಳೆದೊಯ್ಯುವ ಪ್ರಯತ್ನ ಮಾಡಿದರು.ಆದರೇ ಪೊಲೀಸರು ಇದನ್ನು ತಡೆದು ಗೋಡನ್ ಸೀಝ್ ಮಾಡಿದ್ದು ಶಹರ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Karwar | ಅಕ್ರಮ ಗೋವಾ ಮದ್ಯ ವಶ|ಮೂವರು ಆರೋಪಿಗಳ ಬಂಧನ
ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ದೀಪನ್ ರವರು ಈಗಾಗಲೇ 180 ಜನ ದೂರು ನೀಡಿದ್ದಾರೆ. ಇನ್ನೂ ಹೆಚ್ಚು ಜನ ದೂರು ನೀಡುವ ಸಾಧ್ಯತೆ ಇದ್ದು ಈಗ ದೂರು ನೀಡಿದ ಆಧಾರದಲ್ಲಿ 14 ಲಕ್ಷ ಕ್ಕೂ ಹೆಚ್ಚು ವಂಚನೆ ಆಗಿದೆ ಎಂದು ತಿಳಿದು ಬಂದಿದೆ. ಇವರು ಇನ್ನೂ ಹೆಚ್ಚು ವಂಚನೆ ಮಾಡುವಂತೆ ತೋರುತಿತ್ತು. ಆದರೇ ಜನರು ಬೇಗಾ ಎಚ್ಚೆತ್ತುಕೊಂಡಿದ್ದರಿಂದ ಪ್ರಕರಣ ಬಯಲಿಗೆ ಬಂದಿದೆ. ಇವರ ಮೂಲದ ಬಗ್ಗೆ ಕೆಲವು ಮಾಹಿತಿ ಸಿಕ್ಕಿದೆ. ಆದಷ್ಟು ಬೇಗ ಇವರನ್ನು ಬಂಧಿಸಲಾಗುತ್ತದೆ ಎಂದು ಹೇಳಿದ್ದಾರೆ.
ಇನ್ನು ವಂಚಕರು ಭಟ್ಕಳದಲ್ಲಿ ಬ್ಯಾಂಕ್ ಖಾತೆ ತೆರೆದಿದ್ದಾರೆ ಜೊತೆಗೆ ಜಿ.ಎಸ್.ಟಿ ರಿಜಿಸ್ಟೇಷನ್ ಸಹ ಮಾಡಿಸಿದ್ದಾರೆ. ಇವರ ಟಾರ್ಗೆಟ್ ದೊಡ್ಡ ಮಟ್ಟದ ಹಣ ವಂಚಸುವುದಾಗಿತ್ತು ಎಂಬುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.