For the best experience, open
https://m.kannadavani.news
on your mobile browser.
Advertisement

Bhatkal | ಅಕ್ರಮ ಪಡಿತರ ಸಾಗಾಟ-ವಾಹನ ಸಮೇತ ಅಕ್ಕಿ ವಶಕ್ಕೆ ,ಆರೋಪಿಗಳ ಬಂಧನ

Bhatkal Police seized 228 bags of illegally transported ration rice worth ₹3.87 lakh and arrested seven accused. The operation, led by CPI Manjunath Lingareddy and Food Inspector Uday Talawar, also resulted in the seizure of three vehicles used for the transport.
10:21 PM Oct 24, 2025 IST | ಶುಭಸಾಗರ್
Bhatkal Police seized 228 bags of illegally transported ration rice worth ₹3.87 lakh and arrested seven accused. The operation, led by CPI Manjunath Lingareddy and Food Inspector Uday Talawar, also resulted in the seizure of three vehicles used for the transport.
bhatkal   ಅಕ್ರಮ ಪಡಿತರ ಸಾಗಾಟ ವಾಹನ ಸಮೇತ ಅಕ್ಕಿ ವಶಕ್ಕೆ  ಆರೋಪಿಗಳ ಬಂಧನ

Bhatkal | ಅಕ್ರಮ ಪಡಿತರ ಸಾಗಾಟ-ವಾಹನ ಸಮೇತ ಅಕ್ಕಿ ವಶಕ್ಕೆ ,ಆರೋಪಿಗಳ ಬಂಧನ

Advertisement

ಕಾರವಾರ (24 october 2025) :- ಉತ್ತರ ಕನ್ನಡ ಜಿಲ್ಲೆಯ ಭಟ್ಕಳ(bhatkal) ದಲ್ಲಿ ಪಡಿತರ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಸಾಗಾಟ ಮಾಡುತ್ತಿದ್ದ ಏಳು ಮಂದಿಯನ್ನು ಭಟ್ಕಳ ಗ್ರಾಮೀಣ ಠಾಣೆ  ಪೊಲೀಸರು ಪತ್ತೆಹಚ್ಚಿ ಬಂಧಿಸಿರುವ ಘಟನೆ ನಡೆದಿದೆ.

ಸಿಪಿಐ ಮಂಜುನಾಥ ಲಿಂಗಾರೆಡ್ಡಿ ನೇತೃತ್ವದ ತಂಡ ಹಾಗೂ ಆಹಾರ ನಿರೀಕ್ಷಕ ಉದಯ ತಳವಾರ ಅವರ ಸಹಯೋಗದಲ್ಲಿ ನಡೆಸಿದ ದಾಳಿಯಲ್ಲಿ 228 ಚೀಲ (ಪ್ರತಿ ಚೀಲ 50 ಕೆ.ಜಿ)ಗಳಲ್ಲಿ ಒಟ್ಟು 11,400 ಕ್ವಿಂಟಲ್ ಪಡಿತರ ಅಕ್ಕಿ ಪತ್ತೆಯಾಗಿದೆ. ಇದರ ಮೌಲ್ಯ ರೂ. 3,87,600 ಎಂದು ಲೆಕ್ಕ ಹಾಕಲಾಗಿದೆ.

ಅಕ್ಕಿ ಸಾಗಿಸಲು ಬಳಸಲಾಗಿದ್ದ ಅಶೋಕ ಲೈಲೆಂಡ್ ಲಾರಿ, ಮಾರುತಿ ಓಮ್ಮಿ ಹಾಗೂ ಅಶೋಕ ಲೈಲೆಂಡ್ ದೋಸ್ತ್ ವಾಹನಗಳನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಮೀರ ಮುಗಳಿಹೊಂಡ ಗಣೇಶನಗರ, ಮಲ್ಲಿಕಾರ್ಜುನ ಆರ್.ಮಾಗಡಿ.ರಾಮನಗರನಿತೀನ ಹೆಚ್.ಎನ್.ಹೊಂಬೆಗೌಡನಹಳ್ಳಿ,ಸಬೂಲ್ ಮುಗಳಿಹೊಂಡ,ಗಣೇಶನಗರ, ಮಾರುತಿ ಓಮ್ಮಿ ವಾಹನದ ಮಾಲಿಕ,ಅಶೋಕ ಲೈಲೆಂಡ್ ದೋಸ್ತ್ ವಾಹನದ ಚಾಲಕ,ಅಶೋಕ ಲೈಲೆಂಡ್ ದೋಸ್ತ್ ವಾಹನದ ಮಾಲೀಕ ಬಂಧಿತರು.

Bhatkal-₹3,23,000 ಅನ್ನಭಾಗ್ಯ ಅಕ್ಕಿ ವಶ -ಇಬ್ಬರ ಬಂಧನ

ಈ ಕುರಿತು ಆಹಾರ ನಿರೀಕ್ಷಕ ಉದಯ ದ್ಯಾಮಪ್ಪ ತಳವಾರ ಅವರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ