Bhatkal: ಕೆನಡಾ ದಲ್ಲಿ ಉದ್ಯೋಗದ ನೆಪದಲ್ಲಿ ₹3 ಲಕ್ಷ ವಂಚನೆ:ಮುರ್ಡೇಶ್ವರ ವ್ಯಕ್ತಿ ವಿರುದ್ಧ "ಜಿರೋ" FIR
Bhatkal: ಕೆನಡಾ ದಲ್ಲಿ ಉದ್ಯೋಗದ ನೆಪದಲ್ಲಿ ₹3 ಲಕ್ಷ ವಂಚನೆ:ಮುರ್ಡೇಶ್ವರ ವ್ಯಕ್ತಿ ವಿರುದ್ಧ "ಜಿರೋ" FIR
ಕಾರವಾರ /ಭಟ್ಕಳ :- ಕೆನಡಾದಲ್ಲಿ ಲೈಬ್ರರಿ ಬಾಯ್ ಕೆಲಸ ಕೊಡಿಸುತ್ತೇನೆ ಎಂಬ ಭರವಸೆ ನೀಡಿ ವ್ಯಕ್ತಿಯೋರ್ವನಿಂದ ₹3 ಲಕ್ಷ ಹಣ ಪಡೆದ ನಂತರ ಯಾವುದೇ ಉದ್ಯೋಗ ನೀಡದೆ ವಂಚನೆ ನಡೆಸಿದ ಆರೋಪದ ಮೇಲೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ (bhatkal) ಮಾವಳ್ಳಿ ಗ್ರಾಮದ ವ್ಯಕ್ತಿಯೊಬ್ಬನ ವಿರುದ್ಧ "ಜಿರೋ " ಎಫ್‌ಐಆರ್ ದಾಖಲಾಗಿದೆ.
ಕಲಘಟಗಿ ಜಿಲ್ಲೆಯ ತಂಬೂರ ಗ್ರಾಮದ ನಿವಾಸಿ ದರ್ಶನ್ ತಂದೆ ಅಭಿನಂಧನ ಪರವಾಪೂರ ಎಂಬವರು ನೀಡಿದ ದೂರಿನಂತೆ ಭಟ್ಕಳ ತಾಲೂಕು ಮಾವಳ್ಳಿ ಗ್ರಾಮದ ಅಂತೋನ ಬಸ್ತಾಂವ ಲುವಿಸ್ (54) ಎಂಬಾತ, 2024ರ ನವೆಂಬರ್ 22ರಂದು ದರ್ಶನ್ ಅವರೊಂದಿಗೆ ಸಂಪರ್ಕ ಸಾಧಿಸಿ, ಕೆನಡಾದಲ್ಲಿ ಉದ್ಯೋಗದ ಭರವಸೆ ನೀಡಿ, ಹಂತ ಹಂತವಾಗಿ ಫೋನ್ ಪೇ ಮೂಲಕ ಮೂರು ಲಕ್ಷ ಹಣ ಸ್ವೀಕರಿಸಿದ್ದನು.
ಆದರೆ ನಿರೀಕ್ಷಿತ ಉದ್ಯೋಗವನ್ನು ನೀಡದೇ, ಹಣ ಪಡೆದುಕೊಂಡು ವಂಚನೆ ಮಾಡಿದ ಹಿನ್ನೆಲೆ ದೂರು ದಾಖಲಿಸಲಾಗಿದೆ. ಪ್ರಕರಣದ ಸ್ಥಳ,ಸೀಮೆ ಉತ್ತರ ಕನ್ನಡ ಜಿಲ್ಲೆಗೆ ಸೇರಿದ ಹಿನ್ನೆಲೆಯಲ್ಲಿ,ಕಲಘಟಗಿ ಪೊಲೀಸ್ ಠಾಣೆಯ ಪೊಲೀಸರು ಉತ್ತರ ಕನ್ನಡ ಎಸ್‌ಪಿ ಅವರ ಮಾರ್ಗದರ್ಶನದಂತೆ ಜಿರೋ ಎಫ್.ಐ.ಆರ್ ದಾಖಲಿಸಿದೆ.
ಇದನ್ನೂ ಓದಿ:-Bhatkal: ಚೂಡಿದಾರ್ ವೇಲ್ ಸಿಲುಕಿ 12 ವರ್ಷದ ಬಾಲಕಿ ಸಾವು
ಈ ಸಂಬಂಧ ಭಾರತೀಯ ದಂಡ ಸಂಹಿತೆ 2023ರ ಸೆಕ್ಷನ್ 318(2) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಮುಂದಿನ ಕ್ರಮಕ್ಕಾಗಿ ಪ್ರಕರಣವನ್ನು ಮುರ್ಡೇಶ್ವರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದ್ದು, ಪಿಎಸ್‌ಐ ಹನುಮಂತ ಬಿರಾದರ್ ಅವರು ತನಿಖೆ ನಡೆಸುತ್ತಿದ್ದಾರೆ.
ಆರೋಪಿ ಅಂತೋನ ಬಸ್ತಾಂವ ಲುವಿಸ್,ತಲೆಮಾರಿಸಿಕೊಂಡಿದ್ದು ಪೊಲೀಸರು ಈತನಗಾಗಿ ಬಂಧನಕ್ಕೆ ಬಲೆ ಬೀಸಿದ್ದು ಪೋಲೀಸ್ ಮೂಲಗಳ ಪ್ರಕಾರ ದಾಂಡೇಲಿ,ಮುರ್ಡೇಶ್ವರ ಹಾಗೂ ಇತರ ಪ್ರದೇಶಗಳಲ್ಲಿ ಹಲವರನ್ನು ಇದೇ ರೀತಿಯ ಉದ್ಯೋಗದ ಹೆಸರಿನಲ್ಲಿ ವಂಚಿಸಿರುವ ಶಂಕೆ ಇದೆ ಎನ್ನಲಾಗಿದೆ.

ಮಥುರಾದಲ್ಲಿ ಪತ್ತೆಯಾದ ಭಟ್ಕಳದ ಯುವತಿ – ಗ್ರಾಮೀಣ ಠಾಣೆ ಪೊಲೀಸರ ಕಾರ್ಯ ಶ್ಲಾಘನೀಯ.
ಭಟ್ಕಳ: ತಟ್ಟಿಹಕ್ಕಲ್, ಶಿರಾಲಿ ನಿವಾಸಿ 18 ವರ್ಷದ ಜಿಯಾನ ಅಬ್ದುಲ್ ಮುನಾಫ್ ಜುಲೈ 18ರಂದು ತಮ್ಮ ತಂಗಿಯೊಂದಿಗೆ ಭಟ್ಕಳಕ್ಕೆ ತೆರಳುತ್ತೇನೆಂದು ಹೇಳಿ ಮನೆಬಿಟ್ಟು ಹೋಗಿದ್ದಳು. ತಂಗಿಯನ್ನು ಮನೆಗೆ ಬಿಟ್ಟ ನಂತರ ಸ್ನೇಹಿತೆಯೊಂದಿಗಾಗಿ ಹೊರಟಿದ್ದಳು. ನಂತರ ಮನೆಗೆ ಮರಳದೆ ನಾಪತ್ತೆಯಾಗಿದ್ದಳು.
ಪೋಷಕರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಸಿಪಿಐ ಮಂಜುನಾಥ ಎ. ಲಿಂಗಾರೆಡ್ಡಿ ತಕ್ಷಣ ಶೋಧ ಕಾರ್ಯ ಆರಂಭಿಸಿದರು. ಯುವತಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಾಹಿತಿ ಲಭಿಸಿದ್ದು, ಮೊಬೈಲ್ ಲೊಕೇಶನ್ ಪರಿಶೀಲನೆಯಿಂದ ಉತ್ತರ ಪ್ರದೇಶದ ಮಥುರಾದಲ್ಲಿರುವುದು ಪತ್ತೆಯಾಯಿತು.
ಮಥುರಾ ಪೊಲೀಸರ ಸಹಕಾರ ಪಡೆದು, ಯುವತಿ ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಹಿಳೆಯೊಂದಿಗೆ ತೆರಳಿದ್ದ ಮಾಹಿತಿ ಸಿಕ್ಕಿತು. ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮಹಿಳೆ ರಾಜಸ್ಥಾನದ ಯುವಕನೊಂದಿಗೆ ಸ್ನೇಹ ಹೊಂದಿದ್ದ ಹಿನ್ನೆಲೆ, ಈಕೆಯೊಂದಿಗೆ ಯುವತಿಯ ಪ್ರಯಾಣ ಶಂಕೆ ಉಂಟುಮಾಡಿದೆ.
ಎಎಸ್‌ಐ ರಾಜೇಶ್ ಕೆ. ಸಿಬ್ಬಂದಿಗಳಾದ ಅಕ್ಷತ ಕುಮಾರ್ ಮತ್ತು ಮಹಿಳಾ ಸಿಬ್ಬಂದಿ ಸಾವಿತ್ರಿ ಮಥುರಾ ತೆರಳಿ, ಸ್ಥಳೀಯ ಪೊಲೀಸರ ಸಹಯೋಗದಿಂದ ಯುವತಿಯನ್ನು ಪತ್ತೆಹಚ್ಚಿ, ಭಟ್ಕಳಕ್ಕೆ ಕರೆತಂದು ಪೋಷಕರಿಗೆ ಹಸ್ತಾಂತರಿಸಿದರು,ಜಿಯಾನಾ ಸ್ವಇಚ್ಛೆಯಿಂದ ಮಹಿಳೆಯೊಂದಿಗೆ ತೆರಳಿದ್ದಾಗಿ ತಿಳಿಸಿದ್ದಾಳೆ.
ಗ್ರಾಮೀಣ ಠಾಣೆ ಪೊಲೀಸರು ತೋರಿದ ತ್ವರಿತ ಕ್ರಮಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಮಾರುಕೇರಿ ಅಂಚೆ ಕಚೇರಿಯಲ್ಲಿ ಕಳ್ಳತನ – ₹16,000 ನಗದು ಕಳವು.

ಭಟ್ಕಳ:ತಾಲ್ಲೂಕಿನ ಮಾರುಕೇರಿ ಅಂಚೆ ಕಚೇರಿಯಲ್ಲಿ ಕಳ್ಳರು ಬೀಗ ಮುರಿದು ₹16,000 ನಗದು ಕಳವು ಮಾಡಿಕೊಂಡು ಹೋಗಿರುವ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.
ಮಾರುಕೇರಿ ಅಂಚೆ ಕಚೇರಿಯಲ್ಲಿ ಜಿ.ಡಿ.ಎಸ್ ಆಗಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯೊಬ್ಬರು ಜುಲೈ 22 ರಂದು ಅಂಚೆ ವ್ಯವಹಾರದ ಉಳಿದಿದ್ದ ₹16,000 ನಗದು ಹಣವನ್ನು ಕಚೇರಿಯ ಕಪಾಟಿನಲ್ಲಿ ಇಟ್ಟು, ಮಧ್ಯಾಹ್ನ 3 ಗಂಟೆಗೆ ಕಚೇರಿಯಿಂದ ಹೊರಟಿದ್ದರು.
ಅವರನ್ನು ಜುಲೈ 23ರಂದು ಬೆಳಿಗ್ಗೆ 9 ಗಂಟೆಗೆ ಕಚೇರಿಗೆ ಬರುವಾಗ ಬಾಗಿಲಿನ ಬೀಗ ಮುರಿದ ಸ್ಥಿತಿಯಲ್ಲಿ ಕಂಡುಬಂದಿದ್ದು, ಕಪಾಟಿನಲ್ಲಿದ್ದ ನಗದು ಕಳವಾಗಿರುವುದು ಸ್ಪಷ್ಟವಾಗಿದೆ. ಕಳ್ಳರು ರಾತ್ರಿ ವೇಳೆಯಲ್ಲಿ ಬಾಗಿಲು ಮುರಿದು ಒಳ ನುಗ್ಗಿದ್ದು, ಹಣ ಕಳವು ಮಾಡಿದ್ದಾರೆ ಎನ್ನಲಾಗಿದೆ.ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಅಂಚೆ ಕಚೇರಿಯ ಸಿಬ್ಬಂದಿ ಮಾಸ್ತಿ ಗೊಯ್ದ ಗೊಂಡ ದೂರು ನೀಡಿದ್ದು
ಪ್ರಕರಣವನ್ನು ದಾಖಲಿಸಿ ಕೊಂಡ ಗ್ರಾಮಿಣ ಠಾಣೆ
ಎಸ್ ಐ ರಾಜೇಶ್ ಕೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಮುಂದುವರಿಸಿದ್ದಾರೆ.