For the best experience, open
https://m.kannadavani.news
on your mobile browser.
Advertisement

Bhatkal | ಪಾರ್ಕಿಂಗ್ ವಿಷಯದಲ್ಲಿ ನಡು ರಸ್ತೆಯಲ್ಲಿ ಮಾರಾಮಾರಿ-ಎಂಟು ಜನರ ವಿರುದ್ಧ ಪ್ರಕರಣ

ಭಟ್ಕಳ (October 15):-ಭಟ್ಕಳದ ಹನೀಫಾಬಾದ್ ಮದುವೆ ಹಾಲ್ ಬಳಿ ಪಾರ್ಕಿಂಗ್ ವಿಚಾರವಾಗಿ ಯುವಕರ ನಡುವೆ ನಡೆದ ಹೊಡೆದಾಟದ ಘಟನೆ; ಎಂಟು ಜನರ ವಿರುದ್ಧ ಪ್ರಕರಣ ದಾಖಲು.
03:31 PM Oct 15, 2025 IST | ಶುಭಸಾಗರ್
ಭಟ್ಕಳ (October 15):-ಭಟ್ಕಳದ ಹನೀಫಾಬಾದ್ ಮದುವೆ ಹಾಲ್ ಬಳಿ ಪಾರ್ಕಿಂಗ್ ವಿಚಾರವಾಗಿ ಯುವಕರ ನಡುವೆ ನಡೆದ ಹೊಡೆದಾಟದ ಘಟನೆ; ಎಂಟು ಜನರ ವಿರುದ್ಧ ಪ್ರಕರಣ ದಾಖಲು.
bhatkal   ಪಾರ್ಕಿಂಗ್ ವಿಷಯದಲ್ಲಿ ನಡು ರಸ್ತೆಯಲ್ಲಿ ಮಾರಾಮಾರಿ ಎಂಟು ಜನರ ವಿರುದ್ಧ ಪ್ರಕರಣ

Bhatkal | ಪಾರ್ಕಿಂಗ್ ವಿಷಯದಲ್ಲಿ ನಡು ರಸ್ತೆಯಲ್ಲಿ ಮಾರಾಮಾರಿ-ಎಂಟು ಜನರ ವಿರುದ್ಧ ಪ್ರಕರಣ

ಅಂಕೋಲ ದಲ್ಲಿ ಶೀಘ್ರ ಪ್ರಾರಂಭ

ಭಟ್ಕಳ (october 15):- ಮದುವೆ ರಿಸಷ್ಷನ್  ಗಾಗಿ ಬಂದ ಯವಕರು ಪಾರ್ಕಿಂಗ್ ವಿಷಯದಲ್ಲಿ ಒಬ್ಬರಿಗೊಬ್ಬರು ಬಡಿದಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ(bhatkal) ತಾಲೂಕಿನ ಹೆಬಳೆ ಗ್ರಾಮಪಂಚಾಯ್ತಿ ವ್ಯಾಪ್ತಿಯ ಹನೀಫಾಬಾದ್ ನ ಕಸ್ನುಮ್ ಮದುವೆ ಹಾಲ್ ಎದುರು ನಡೆದಿದೆ.ಈ ಘಟನೆ ಯಲ್ಲಿ ಐದಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು ಮೊನ್ನೆ ನಡೆದಿದ್ದ ಈ ಘಟನೆ ವಿಡಿಯೋ ವೈರಲ್ ಆಗುತಿದ್ದಂತೆ ಎಂಟು ಜನರ ವಿರುದ್ಧ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಭಟ್ಕಳದಲ್ಲಿ (bhatkal) ನಡೆದ ಘಟನೆ ಏನು?

ಭಟ್ಕಳ ದಲ್ಲಿ ನಡು ರಸ್ತೆಯಲ್ಲಿ ಗಲಾಟೆ ಮಾಡಿಕೊಂಡ ಯುವಕರ ತಂಡ

ಭಟ್ಕಳ ತಾಲೂಕಿನ ಹೆಬಳೆ ಗ್ರಾಮಪಂಚಾಯ್ತಿ ವ್ಯಾಪ್ತಿಯ ಹನೀಫಾಬಾದ್ ನ ಕಸ್ನುಮ್ ಮದುವೆ ಹಾಲ್ ನಲಿ ರಿಸಪ್ಷನ್ ಇದ್ದು ಈವೇಳೆ ಕೆಲವು ಎರಡು ಗುಂಪುಗಳು ಅಲ್ಲಿ ಪಾರ್ಕಿಂಗ್ ಮಾಡುವಾಗ ಮಾತಿಗೆ ಮಾತು  ನಡೆದಿದೆ.

Bhatkal| ವೈದ್ಯನಿಂದ ವಿವಾಹವಾಗುವುದಾಗಿ ನಂಬಿಸಿ ಅ***ದೂರು ದಾಖಲು

ಆರೋಪಿತರು ಗುಂಪಾಗಿ ಸೇರಿ ಪರಸ್ಪರ ಅವಾಚ್ಯ ಶಬ್ದಗಳಿಂದ ಬೈಯ್ದಾಡಿ,ಬಳಿಕ ಕೈ ಕೈ ಮಿಲಾಯಿಸಿ ಹೊಡೆದಾಟ ನಡೆಸಿದರೆಂಬ ಮಾಹಿತಿ ಲಭಿಸಿದೆ.

ಘಟನಾ ಸ್ಥಳಕ್ಕೆ ಠಾಣೆಯ ಪೊಲೀಸ್ ನಿರೀಕ್ಷಕ ಮಂಜುನಾಥ ಲಿಂಗಾರೆಡ್ಡಿ ಸಿಬ್ಬಂದಿಗಳೊಂದಿಗೆ ಧಾವಿಸಿ ಜಗಳ ಶಮನಕ್ಕೆ ಮುಂದಾದರೂ,ಆರೋಪಿತರು ಅವರ ಮಾತು ಕೇಳದೆ ಹೊಡೆದಾಟ ಮುಂದುವರಿಸಿದ್ದು,ಇದರಿಂದ  ಕೆಲವರುಗಾಯಗೊಂಡಿದ್ದಾರೆ. ಸ್ಥಳದಲ್ಲಿ ಗಲಭೆಯ ವಾತಾವರಣ ನಿರ್ಮಾಣವಾಗಿ ಸಾರ್ವಜನಿಕ ಶಾಂತಿ ಭಂಗವಾಗಿತ್ತು.

ಇನ್ನು ಇದೀಗ ವಿಡಿಯೋ ವೈರಲ್ ಆದ ಬೆನ್ನಲ್ಲೇ ಈ ಸಂಬಂಧ ಹನೀಫಾಬಾದ್‌ನ ಉಜೇಪ ಸೈದ ಅಬ್ದುಲ್ ಖಾದರ, ಸೈಯ್ಯದ ಉಮೇರ ಸೈಯ್ಯದ ಅಬ್ದುಲ್ ಖಾದಿರ, ಉಮೇರ ರುಕ್ಕುದ್ದೀನ್ ಉಬೇದುಲ್ಲಾ, ಮುಗೇರ್ ಎಮ್.ಜೆ. ಮಂಜೂರ ಎಮ್.ಎನ್, ಆಹಾದನಗರ ಆರನೇ ಕ್ರಾಸ್‌ನ ಇಬಾದುಲ್ಲಾ ಸಾದೀಕಟಾನ, ದೇವಿನಗರ ಜಾಲಿಯ ಅಬ್ದುಲ್ ರಹೀಮ ಮಹಮ್ಮದ್ ಹುಸೇನ್, ಮೂಸಾನಗರದ ಮುಸ್ತಾಕ್ ಮಕ್ಖುಲ್ ಹಾಗೂ ದೇವಿನಗರದ ತಾಹೀರ ಮಹಮ್ಮದ್ ಹುಸೇನ್ ವಿರುದ್ಧ ಭಟ್ಕಳ ಗ್ರಾಮಿಣ ಪೋಲಿಸ್ ಠಾಣೆಯಲ್ಲಿ‌ ಪ್ರಕರಣ ದಾಖಲಿಸಲಾಗಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ