ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Bhatkal ಪಡಿತರ ಅಕ್ಕಿ ಅಕ್ರಮ ಸಾಗಾಟ: ಓಮಿನಿ ಸಮೇತ ಆರೋಪಿ ಬಂಧನ

ಕಾರವಾರ:ಪಡಿತರ ಅಕ್ಕಿ( rice )ಕ್ರಮವಾಗಿ ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಆಹಾರ ನಿರೀಕ್ಷಕರು ಆರೋಪಿ ವಿರುದ್ಧ ಭಟ್ಕಳ ಶಹರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
08:45 PM Dec 21, 2024 IST | ಶುಭಸಾಗರ್

ಕಾರವಾರ:ಪಡಿತರ ಅಕ್ಕಿ( rice )ಕ್ರಮವಾಗಿ ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಆಹಾರ ನಿರೀಕ್ಷಕರು ಆರೋಪಿ ವಿರುದ್ಧ ಭಟ್ಕಳ ಶಹರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement

ಭಟ್ಕಳ(Bhatkal) ತಾಲೂಕಿನ ಪುರವರ್ಗದ ಗಣೇಶ ನಗರ ನಿವಾಸಿ ನಜೀರ ಅಹ್ಮದ್‌ ಯೂಸುಫ್ ಶೇಖ ಬಂಧಿತ ಆರೋಪಿ. ಗುಜರಿ ವ್ಯಾಪಾರಿಯಾಗಿರುವ ಇವರು ಪಡಿತರ ಅಕ್ಕಿ ಇರುವ ಮೂಟೆಗಳನ್ನು ಓಮಿನಿ ವಾಹನದಲ್ಲಿ ಸಾಗಾಟ ಮಾಡುತ್ತಿದ್ದಾಗ ಮಾಲು ಸಮೇತ ಸಿಕ್ಕಿಬಿದ್ದಿದ್ದಾರೆ.

ಇದನ್ನೂ ಓದಿ:-Bhatkal :ಮೂತ್ರ ವಿಸರ್ಜನೆಗೆ ಹೋದ ವಿದ್ಯಾರ್ಥಿ ತೆರದ ಬಾವಿಗೆ ಬಿದ್ದು ಸಾವು

ಭಟ್ಕಳ ಅರ್ಬನ್ ಬ್ಯಾಂಕ್ ಎದುರುಗಡೆ ಹೂವಿನ ಚೌಕದ ಕಡೆ ಹೋಗುತ್ತಿದ್ದ ಓಮಿನಿ ವಾಹನವನ್ನು ತಡೆದು ಪರಿಶೀಲಿಸಿದಾಗ ವಾಹನದಲ್ಲಿ ಸುಮಾರು 17680 ರೂ. ಮೌಲ್ಯದ 520 ಕೆ.ಜಿ. ತೂಕದ ಅಕ್ಕಿ ಇರುವ 15 ಮೂಟೆಗಳು ಪತ್ತೆಯಾಗಿವೆ. ಈ ಕುರಿತು ಆಹಾರ ನಿರೀಕ್ಷಕ ಶಶಿಧರ ಭೀಮಣ್ಣ ಹೊನ್ನಳ್ಳಿ ಶಹರ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಲೀಸರು ವಾಹನ ಸಮೇತ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

Advertisement

Advertisement
Tags :
BhatkalBhatkal newsCrime in KarnatakaFood Department RaidFood Security Act ViolationIllegal TransportationPolice Omni Van SeizureRation Rice ScamRice Smuggling
Advertisement
Next Article
Advertisement